ರಾಜಕೀಯ ಸುದ್ದಿಗಳು

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯಕ್ಕೆ ಬರಬಡಿದಿದೆ-ಕುಮಾರಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

2024 ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಮೈತ್ರಿಯಾಗಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಧಿಕಾರಕ್ಕೆ ಬಂದಿದೆ ಆಗೆಲ್ಲಾ ಬರ ಬಡಿದಿದೆ ಎಂದು ಮಾಜಿ ಸಿಎಂ ಕುಮಾರ್ ಸ್ವಾಮಿ ವಾಗ್ದಾಳಿ ನಡೆಸಿದರು.

ಗೋಪಿ ವೃತ್ತದಲ್ಲಿ ನಡೆದ ಸಂಸದ ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಸರ್ಕಾರ ಮಾಡಿದೆ, ಬಿಎಸ್ ವೈ,  ಬಸವರಾಜ್ ಬೊಮ್ನಾಯಿ ಸರ್ಕಾರ ಮಾಡಿದ್ದಾರೆ. ಯಾವಾಗಲು ಬರಬರಲಿಲ್ಲ. ಕಾಂಗ್ರೆಸ್ ಬಂದಾಗಲೆಲ್ಲ ಬರಬಂದಿದೆ ಎಂದು ಆರೋಪಿಸಿದರು.

ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಅಭಿವೃದ್ಧಿಗೆ ಸಙಸದ ರಾಘವೇಂದ್ರ ಶ್ರಮಿಸಿದ್ದಾರೆ. ಮೋದಿ ಅವರ ಆಡಳಿತ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಮೋದಿ ಅವರ ನೇತೃತ್ವದಲ್ಲಿ ಮೈತ್ರಿಯಾಗಿರುವುದು ಶಿವಮೊಗ್ಗ ನಗರದಲ್ಲಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಆಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೈವೆ ಅಭಿವೃದ್ಧಿ ಮಾಡಲಾಗಿದೆ. ಮೋದಿ ಸರ್ಕಾರದಲ್ಲಿ ಪ್ರಧಾನ್ ಮಂತ್ರಿ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.

2006 ರಲ್ಲಿ ಬಿಎಸ್ ವೈ ಜೊತೆ ಒಟ್ಟಾಗಿ ಕೆಲಸ ಮಾಡಿದ ವೇಳೆ. ಮಹಿಳೆಯರಿಗೆ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿತ್ತು. ಆ ಯೋಜನೆಯ ಫಲಾನುಭವಿಗಳು ಇವತ್ತು ಯುವತಿಯರು ಮತ್ತು ಮಹಿಳೆಯರು ಫಲಾನುಭಾವಿಯಾಗಿದ್ದಾರೆ ಎಂದರು.

ಮೈತ್ರಿ ಸರ್ಕಾರದಲ್ಲಿ ಸಾರಾಯಿ ನಿಷೇಧ ಮಾಡಲಾಗಿತ್ತು. ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಇವತ್ತು ಅಧಿಕಾರಕ್ಕೆ ಬಂದಿದೆ. ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಬಂದರೆ  ಒಂದು ಲಕ್ಷ ರೂ. ಹಣವನ್ನ ನೀಡುವುದಾಗಿ ಹೇಳಿದೆ. 75 ಕೋಟಿ ತಾಯಂದಿರು ದೇಶದಲ್ಲಿದ್ದಾರೆ. ಅವರಿಗೆ ಹಣ ನೀಡಲು 75 ಲಕ್ಷ ಕೋಟಿ ಬೇಕು. ಈಗಿನ ಬಜೆಟ್ 47 ಲಕ್ಷ‌ಕೋಟಿ ಮಾತ್ರ. ಉಳಿದ ಹಣ ಎಲ್ಲಿಂದ ತರುತ್ತಾರೆ ಎಂದು ವ್ಯಂಗ್ಯವಾಡಿದರು.

57 ಲಕ್ಷ ಕೋಟಿ ಗ್ಯಾರೆಂಟಿ ಘೋಷಣೆ ಆಗಿದೆ ಮಹಿಳೆಯೆಇಗೆ ಸಾವಿರ ನೀಡಲಾಗುತ್ತಿದೆ. ಆದರೆ ಗಂಡಸರ ಹವ್ಯಾಸಕ್ಕೆ ಬಳಸುವ ಮದ್ಯದ ತೆರಿಗೆ ಹೆಚ್ಚಿಸಲಾಗಿದೆ. ಇದು ಪಿಕ್ ಪ್ಯಾಕೆಟ್ ಸರ್ಕಾರವಾಗಿದೆ. ಬರಗಾಲ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಬಿಎಸ್ ವೈ ಸಿಎಂ ಆಗಿದ್ದಾಗ 5 ಲಕ್ಷ ಪರಿಹಾರ ತಂದಿದ್ದರು. ಆದರೆ ಬರಗಾಲಕ್ಕೆ ಹಣ‌ಒದಗಿಸಲು ರಾಜ್ಯ ಸರ್ಕಾರಕ್ಕೆ ಆಗ್ತಾ‌ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನೋಂದಣಿ ಮುದ್ರಾಂಕ ಹೆಚ್ಚಿಸಲಾಗಿದೆ. ಮೋದಿಯನ್ನ ಟೀಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 2,75 ಲಕ್ಷ ಹುದ್ದೆಗಳು ತುಂಬಿಲ್ಲ. ಇಲ್ಲಿ ಹುದ್ದೆಯನ್ನ ತುಂಬಿ ನಂತರ ಕಾಂಗ್ರೆಸ್ ಮೋದಿ ಬಗ್ಗೆ ಮಾತನಾಡಲಿ. ರೈತರಿಗೆ ರಾಜ್ಯ ಸರ್ಕಾರ ನೀಡುವ 4 ಸಾವಿರ ರೂ.ವನ್ನ ನಿಲ್ಲಿಸಲಾಗಿದೆ. 2006 ರಲ್ಲಿ ಬಿಎಸ್ ವೈ ಜೊತೆ ಸರ್ಕಾರ ಮಾಡಿದ ನಂತರ ಜನಕ್ಕೆ ಗೊತ್ತಾಗಿದೆ. ಅವರೊಂದಿಗೆ ಮತ್ತೊಮ್ಮೆ ಸರ್ಕಾರ ಮಾಡುತ್ತೇನೆ. 15 ವರ್ಷ ನಾನು ಸರ್ಕಾರ ರಚಿಸಲು ದೂರವಾಗಿದ್ದೀನಿ. ಮತ್ತೆ ಬಿಎಸ್ ವೈ ಜೊತೆ ಸರ್ಕಾರ ಮಾಡುವೆ ಎಂದರು.

ಇದನ್ಬೂ ಓದಿ-https://suddilive.in/archives/13093

Related Articles

Leave a Reply

Your email address will not be published. Required fields are marked *

Back to top button