ರಾಜಕೀಯ ಸುದ್ದಿಗಳು

ಅಚಾತುರ್ಯ ನಡೆದುಬಿಡುತ್ತೆ ಏನು ಮಾಡೋದು ಎಂದು ಪ್ರತಾಪ್ ಸಿಂಹನ ಪರ ನಿಂತ ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಹಿಂದುಸ್ತಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ನಂತರ ಭಾರತೀಯ ಸಂಸ್ಕೃತಿಗೆ ಗೌರವ ಬರುತ್ತಿದೆ.ಆಯೋಧ್ಯ ರಾಮ ಮಂದಿರ‌ ಜನವರಿಯಲ್ಲಿ ಉದ್ಘಾಟನೆ ಆಗ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿ,  ಕಾನೂನುಬದ್ದವಾಗಿ ರಾಮ ಮಂದಿರ ಕಟ್ಟಿದ್ದೇವೆ ಹಿಂದುಗಳಿಗೆ ಇದು ಸಂತೋಷ ತರುವ ವಿಷಯವಾಗಿದೆ. ಕಾಶಿ ವಿಶ್ವನಾಥನ ದೇವಾಲಯ ಸರ್ವೇ ಮಾಡಬೇಕು ಅಂತಾ ಕೋರ್ಟ್ ಆದೇಶ ನೀಡಿದೆ. ಮಥುರಾದ ಕೃಷ್ಣ ದೇವಸ್ಥಾನ ಸರ್ವೇ ಆಗಬೇಕು ಅಂತಾ ಕೋರ್ಟ್ ಆದೇಶ‌ನೀಡಿದೆ. ಕೋರ್ಟ್ ಆದೇಶ ಪ್ರಪಂಚದ ಹಿಂದುಗಳಿಗೆ ಸಂತೋಷ ನೀಡಿದೆ ಎಂದರು.

ಎಲ್ಲಾ ದೇವಸ್ಥಾನಗಳು ಮುಸ್ಲಿಂರು ಆಕ್ರಮಣ ಮಾಡಿ ಧ್ವಂಸ ಮಾಡಿದ್ದವಾಗಿದ್ದವು. ಗುಲಾಮಗಿರಿಯ ಬಾಬರ್ ಕಟ್ಟಡ ಧ್ವಂಸ ಆಗಿ ರಾಮ ಮಂದಿರ ಆಗ್ತಿದೆ. ಹಿಂದು ಸಮಾಜ ಸ್ವಾಗತ ಮಾಡ್ತದೆ. ಮುಸ್ಲಿಂರು, ಕ್ರಿಶ್ಚಿಯನ್ನರು ‌ಇದನ್ನು ಸ್ವಾಗತ ಮಾಡ್ತಾರೆ ಎಂದರು.

ಆರ್ಟಿಕಲ್ 370 ರದ್ದು ಮಾಡಿ ಜಮ್ಮು ಕಾಶ್ಮೀರಕ್ಕೆ ಮಾನ್ಯತೆ ದೊರೆತಿದೆ.ಇಂದಲ್ಲಾ ನಾಳೆ ಅಖಂಡ ಭಾರತ ನಿರ್ಮಾಣ ಆಗ್ತದೆ. ಇಂದಲ್ಲಾ ನಾಳೆ ಪಾಕಿಸ್ತಾನ ಭಾರತದ ಜೊತೆ ಸೇರುತ್ತದೆ.ಮಥುರಾ ವಿಷಯದಲ್ಲಿ ಕೋರ್ಟ್ ತೀರ್ಪು ಸ್ವಾಗತ ಮಾಡ್ತೇನೆ ಎಂದರು.

ಪಾಕಿಸ್ತಾನದಲ್ಲಿ ಮುಸ್ಲಿಂ ಆಡಳಿತ ಇದ್ದರೂ ಅನ್ನ ನೀರು ಕೊಡಲು ಆಗ್ತಿಲ್ಲ. ಮೋದಿ ಪ್ರಧಾನಿಯಾದ ನಂತರ ವಿಶ್ವದಲ್ಲೇ ಭಾರತ ಮೊದಲನೇ ಸ್ಥಾನಕ್ಕೆ ಹೋಗ್ತಿದೆ.  ಪಾರ್ಲಿಮೆಂಟ್ ಒಳಗಡೆ ಆಗಿರುವ ದುಷ್ಕೃತ್ಯ ನೋಡಿದಾಗ ಬಿಗಿ ವ್ಯವಸ್ಥೆ ಆಗಬೇಕು ಎಂದರು.

ಮುಂದಿನ ದಿನಗಳಲ್ಲಿ ಬಿಗಿ ವ್ಯವಸ್ಥೆ ಆಗುತ್ತದೆ.‌ಸಂಸದ ಪ್ರತಾಪ ಸಿಂಹ ವಿರುದ್ದ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಪ್ರತಾಪ್ ಸಿಂಹ ಹಿಂದುತ್ವವಾದಿಯಾಗಿದೆ. ಕಾಂಗ್ರೆಸ್ ‌ನವರಿಗೆ ಬೇರೆ‌ ಉದ್ಯೋಗ ಇಲ್ಲ.‌ಹೀಗಾಗಿ ಏನೇನೋ ಆರೋಪ ಮಾಡ್ತಿದ್ದಾರೆ.ವಿಧಾನಸಭೆಯಲ್ಲಿ‌ ಒಬ್ಬ ಯಜಮಾನ ಮನುಷ್ಯ  ಹೋಗಿ ಕುಳಿತಿದ್ದ. ಆವಾಗ ಏನು ಮಾಡಿದ್ರು, ಅಚಾತುರ್ಯ ನಡೆಯುತ್ತದೆ ಎಂದು ಸಮ್ಜಾಯಿಷಿ ನೀಡಿದರು.

ಇದನ್ನೂ ಓದಿ-https://suddilive.in/archives/4872

Related Articles

Leave a Reply

Your email address will not be published. Required fields are marked *

Back to top button