ರಾಜಕೀಯ ಸುದ್ದಿಗಳು

ಫ್ರೀಡಂ ಪಾರ್ಕ್ ಗೆ ಎರಡೆರಡು ನಾಮಕರಣ…?

ಸುದ್ದಿಲೈವ್/ಶಿವಮೊಗ್ಗ

ಯುವನಿಧಿ ಕಾರ್ಯಕ್ರಮದಲ್ಲಿ ಬಹಳ ಹೆಚ್ಚಾಗಿ ಚರ್ಚೆಗೆ ಎಳೆದ ಅಂಶವೆಂದರೆ ಶಿವಮೊಗ್ಗದ ಹಳೇಜೈಲಿನ ಜಾಗದಲ್ಲಿರುವ ಫ್ರೀಡಂ ಪಾರ್ಕ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಎಂದು ಘೋಷಿಸಿರುವುದು

ಇದಕ್ಕೂ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಎಂದು ಹೆಸರಿಡಬೇಕು. ಬೆಳ್ಳಿಗಾವಿಯಲ್ಲಿ ಜನಿಸಿದ ಅಲ್ಲಮ ಪ್ರಭು ಶಿವಮೊಗ್ಗದವರಾಗಿರುವುದರಿಂದ ಅಲ್ಲಮನ ಹೆಸರು ಇಡುವಂತೆ ವೇದಿಕೆಯ ಮೇಲೆ ಸಿಎಂ ಸಿದ್ದರಾಮಯ್ಯರನ್ನ ಕೋರಿಕೊಂಡರು.

ಆದರೆ ಈ ಮಾತು ಶಾಸಕರ ಭಾಷಣದಲ್ಲಿ ಚರ್ಚೆಯಾಯಿತು‌.  ಮತ್ತು ಶಾಸಕ ಚೆನ್ನಬಸಪ್ಪ ಮತ್ತು  ಸಚಿವ ಮಧು ಬಂಗಾರಪ್ಪನವರ ನಡುವಿನ ಜುಗಲ್ ಬಂಧಿಗೆ ನಾಂದಿ ಹಾಡಿತ್ತು. ಫ್ರೀಡಂ ಪಾರ್ಕ್ ಬಗ್ಗೆ ಉಲ್ಲೇಖಿಸಿದ ಶಾಸಕರು, ಬಿಎಸ್ ವೈ ಸರ್ಕಾರ ಇದ್ದಾಗ ಚಂದ್ರಶೇಖರ್ ಆಜಾದ್ ಪ್ರೀಡಂ ಪಾರ್ಕ್ ಎಂದು ಘೋಷಿಸಿದ್ದರು. ಈಗ ಮತ್ತೊಂದು ಹೆಸರಿನ ಘೋಷಣೆ ಅಗತ್ಯವಿದೆಯಾ ಎಂದು ಚರ್ಚಿಸಿದರು.

ಅಲ್ಲಮಪ್ರಭು ಬಗ್ಗೆ ಆಕ್ಷೇಪಣೆ ಇಲ್ಲ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚಂದ್ರಶೇಖರ್ ಆಜಾದ್ ಪ್ರಾಣಾರ್ಪಣೆ ಮಾಡಿದ್ದು 22 ವರ್ಷ ಕ್ಕೆ ಹಾಗಾಗಿ ಅವರ ಹೆಸರು ಇದ್ದಂತೆ ಮತ್ತೊಂದು ಹೆಸರು ಬೇಕಾ ಎಂದು ಚೆನ್ನಬಸಪ್ಪ ಆಕ್ಷೇಪಸುತ್ತಿದ್ದಂತೆ ವೀಕ್ಷಕರ ಗ್ಯಾಲರಿಯಲ್ಲಿ ಶಾಸಕರಿಗೆ ಕೂತ್ಕೊ ಕೂತ್ಕೊ ಎಂಬ ಕೂಗನ್ನ ಹಾಕಲಾಯಿತು. ಇದರೊಂದಿಗೆ ಯುವನಿಧಿ ಕಾರ್ಯಕ್ರಮದಲ್ಲಿ ಫ್ರೀಡಂ ಪಾರ್ಕ್ ನ ನಾಮಕರಣದ ಚರ್ಚೆಗೆ ಕಿಚ್ಚು ಹಚ್ಚಿದಂತಾಯಿತು.

ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಳೇ ಜೈಲನ್ನ ಶಿಫ್ಟ್ ಮಾಡಿದ್ದು ನಾನು. ಇದಕ್ಕೆ ಅಲ್ಲಮ ಪ್ರಭು ಎಂದು ಹೆಸರಿಡಲು ಮಧು ಬಂಗಾರಪ್ಪ ಕೇಳಿಕೊಂಡಿದ್ದಾರೆ. ಅಂದಿನ ಅನುಭವ ಮಂಟಪ ಇಂದಿನ ವಿಧಾನ ಸಭೆ ಇದ್ದಂತೆ ಅದರ ಅಧ್ಯಕ್ಷರಾಗಿದ್ದವರು ಅಲ್ಲಮ ಪ್ರಭು ಹಾಗಾಗಿ ಅಲ್ಲಮ ಪ್ರಭು ಎಂದು ಹೆಸರಿಡಲಾಗುವುದು ಎಂದು ಸಿಎಂ ಘೋಷಿಸಿದರು.

ಎರಡೆರಡು ಹೆಸರು ಯಾಕೆ?

ಶಾಸಕ ಚೆನ್ನಬಸಪ್ಪ ಹೇಳಿದಂತೆ ಹಿಂದಿನ ಬಿಎಸ್ ವೈ ಸರ್ಕಾರ ಚಂದ್ರಶೇಖರ್ ಆಜಾದ್ ಹೆಸರಿಟ್ಟಿದ್ದರೂ ಇಂದು ಸಿಎಂ ಸಿದ್ದರಾಮಯ್ಯ ಅಲ್ಲಮ ಪ್ರಭುವಿನ ಹೆಸರು ಘೋಷಣೆ ಮಾಡಿದ್ದಾರೆ. ಕಾನೂನು ಪ್ರಕಾರ ಎರಡೆರಡು ಹೆಸರು ಇಡಲು ಬರುತ್ತದಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡಿದೆ. ಆದರೆ ಪಾಲಿಕೆಯಲ್ಲಿ ಈ ನಿರ್ಣಯವಾಗಿತ್ತಾ? ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹೆಸರಿನ ನಿರ್ಧಾರ ಅಂಗೀಕಾರವಾದ ಮೇಲೆ ಹೆಸರು ಪಕ್ಕವಾಗುವುದರಿಂದ. ಯುವನಿಧಿ ವೇದಿಕೆ ಎರಡೂ ಪಕ್ಷಗಳಿಂದ ನಾಮಕರಣದ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.

ಬಿಜೆಪಿಗರ ಉತ್ತರ ಭಾರತದ ಮೋಹವನ್ನ ಕೆಣಕಿತ ಕಾಂಗ್ರೆಸ್?

ಬಿಜೆಪಿಗೆ ಉತ್ತರ ಭಾರತೀಯರ ಮೇಲೆ ಒಲವು ಹೆಚ್ಚಿದೆ. ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಸ್ಥಳೀಯರನ್ನ ಕೈಬಿಟ್ಟು ಉತ್ತರ ಭಾರತೀಯರ ಹೆಸರನ್ನೇ ಕೊಂಡಾಡುವುದು ಹೆಚ್ಚು ಎಂಬ ಆರೋಪ ಕೇಳಿ ಬರುತ್ತಿದೆ. ಅಂತಹ ಉತ್ತರ ಭಾರತೀಯರ ದೇಶಭಕ್ತರನ್ನ ಕೊಂಡಾಡುವ ಬಿಜೆಪಿಗರಿಗೆ ಕಾಂಗ್ರೆಸ್ ಅಲ್ಲಮನನ್ನ ಎಳೆದು ತರುವ ಮೂಲಕ ಬಿಜೆಪಿಗರ ಮೋಹವನ್ನ ಕೆಣಕಿತಾ ಎಂಬ‌ ಅನುಮಾನಕ್ಕೂ ಈ ಚರ್ಚೆ ಎಡೆಮಾಡಿಕೊಟ್ಟಿದೆ.‌

ಫ್ರೀಡಂ ಪಾರ್ಕ್ ಗೆ ಅಲ್ಲಮನ ಹೆಸರಿನ ಘೋಷಣೆ ಮಾಡಲು ಸಿಎಂ ಸಿದ್ದರಾಮಯ್ಯರಿಗೂ ಅಧಿಕಾರವಿಲ್ಲ. ಪಿಎಂ‌ ನರೇಂದ್ರ ಮೋದಿಗೂ ಇಲ್ಲ. ಅದು ಪಾಲಿಕೆಯ ಸಾಮಾನ್ಯ ಸಭೆ ಅಂಗೀಕರಿಸಬೇಕು. ಆದರೆ ಸಿದ್ದರಾಮಯ್ಯನವರು ಅಲ್ಲಮನ ಹೆಸರು ಎಳೆದು ತರುವ ಮೂಲಕ ಬಿಜೆಪಿಗರ ಉತ್ತರ ಭಾರತೀಯರ ಬಗ್ಗೆ ಇರುವ ಮೋಹವನ್ನ ಕೆಣಕಿದ್ದಾರೆ ಎಂಬುದು ಇಲ್ಲಿನ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ-https://suddilive.in/archives/6681

Related Articles

Leave a Reply

Your email address will not be published. Required fields are marked *

Back to top button