ಉಳ್ಳಿ ಫೌಂಡೇಶನ್ ವತಿಯಿಂದ ಹಕ್ಕಿ-ಪಿಕ್ಕಿ ಮಕ್ಕಳ ಜೊತೆ ಬಂಗಾರದ ಮನುಷ್ಯ ಎಸ್.ಬಂಗಾರಪ್ಪ ನವರ ಹುಟ್ಟು ಹಬ್ಬ ಆಚರಣೆ

ಸುದ್ದಿಲೈವ್/ಶಿಕಾರಿಪುರ

ಈ ರಾಜ್ಯ ಕಂಡ ದೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ, ಬಂಗಾರದ ಮನುಷ್ಯ, ಎಸ್.ಬಂಗಾರಪ್ಪನವರ 90ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಶಿಕಾರಿಪುರ ತಾಲೂಕಿನ ಎಂ.ಸಿ.ಆರ್.ಪಿ ಕಾಲೋನಿಯ ಹಕ್ಕಿ-ಪಿಕ್ಕಿ ಕ್ಯಾಂಪ್ ನಲ್ಲಿ ವಾಸಿಸುವ ಅಲೆಮಾರಿ ಜನಾಂಗದ ಶಾಲೆಯ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ ಹಾಗು ವಾಟರ್ ಬಾಟೆಲ್ ವಿತರಿಸಲಾಯಿತು.
ಶಾಲೆಯ ಮಕ್ಕಳಿಂದನೇ ಕೆಕ್ ಕತ್ತರಿಸಿ, ಬ್ಯಾಗ್ ಹಾಗು ಪುಸ್ತಕ ಮತ್ತು ಬಾಟೆಲ್ ವಿತರಿಸಿ ಮಾತನಾಡಿದ ಮಾನ್ಯ ಶಿಕ್ಷಣ ಸಚಿವರು, ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಉಳ್ಳಿ ಫೌಂಡೇಶನ್ ವತಿಯಿಂದ ಆಚರಿಸಿದ ಹುಟ್ಟು ಹಬ್ಬ ಬಹಳ ಅರ್ಥ ಪೂರ್ಣವಾಗಿದೆ, ಫೌಂಡೇಶನ್ ನ ಅದ್ಯಕ್ಷರಾದ ಉಳ್ಳಿ ದರ್ಶನ್ ರವರಿಗೆ ಧನ್ಯವಾದಗಳು ಹಾಗು ಇಲ್ಲಿಯ ಅಲೆಮಾರಿ ಜನಾಂಗದವರ ಕಷ್ಟ-ಸುಖ ಆಲಿಸಿದ್ದೇನೆ, ಹಾಗು ಮೂಲಭೂತ ಸೌಕರ್ಯಗಳಿಂದ ಅವರು ವಂಚಿತರಾಗಿದ್ದು, ಇವರ ಸಮಸ್ಯೆಗೆ ಶೀಘ್ರದಲ್ಲಿ ಸರ್ಕಾರದ ಹಂತದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಹಾಗು ಶಾಶ್ವತ ಶಾಲೆಯನ್ನು ನಿರ್ಮಾಣ ಮಾಡಲಾಗುವುದಾಗಿ ಹೇಳಿದರು.
ಉಳ್ಳಿ ದರ್ಶನ್ ರವರು ಮಾತನಾಡಿ, ಈ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ, ಎಸ್ ಬಂಗಾರಪ್ಪನವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು, ಈ ಸೌಲಭ್ಯವಂಚಿತ ಜನಾಂಗದವರಿಗೆ ಅಗತ್ಯವಿರುವ ಶಾಶ್ವತ ಶಾಲೆ, ರಸ್ತೆ ವದಗಿಸುವಂತೆ, ಹಾಗು ವಾಸ ಸ್ಥಳದ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಮಾನ್ಯ ಸಚಿವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ್ದು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಉಳ್ಳಿ ದರ್ಶನ್ ರವರು, ಬ್ಲಾಕ್ ಅದ್ಯಕ್ಷರಾದ ಮಹೇಶ್ ಹುಲ್ಮಾರ್, ನಾಗರಾಜ್ ಗೌಡ, ದಯಾನಂದ, ಸ.ನ.ಮಂಜಪ್ಪ, ಸುರೇಶ್ ಗುಡ್ಡಳ್ಳಿ, ರಾಜು ಉಡುಗಣೆ, ಸಂತೋಷ.ಎಂ., ಗಿರೀಶ್.ಎಂ,ಸಿ, ನಾಗರಾಜ್ ನಾಯಕ್, ಶರತ್, ಪರಶುರಾಮ್, ರೂಪೇಶ್, ನಾಗರಾಜ್ ಬನ್ನೂರು, ದೇವೆಂದ್ರಪ್ಪ, ದೇವರಾಜ್, ಹಾಗು ಮುತಾಂದ ಮುಖಂಡರು ಪಾಲ್ಗೊಂಡಿದ್ದರು.
ಇದನ್ನೂ ಓದಿ-https://suddilive.in/archives/1875
