ರಾಜಕೀಯ ಸುದ್ದಿಗಳು

ಈಶ್ವರಪ್ಪನವರು ಬಿಜೆಪಿ ಬಂಡಾಯದ ಡಮ್ಮಿ ಕ್ಯಾಂಡಿಡೇಟ್-ಆಯನೂರು ಮಂಜುನಾಥ್ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ಬಂಡಾಯದ ಡಮ್ಮಿ ಕ್ಯಾಂಡಿಡೇಟ್ ಆಗಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಲೆಯಲ್ಲಿ ಈಶ್ವರಪ್ಪನವರ ಬೆನ್ನಿಗೆ ನಾನು ನಿಂತ ಕಾರಣ ಪುರಲೆಯಲ್ಲಿ 1½ ಸಾವಿರ ಮತ ಬಂದಿದೆ. 1989 ರಲ್ಲಿ ಅವರಿಗೆ ಲಿಂಗಾಯಿತ ಮುಖವಾಡ ಹಾಕಿದ್ದರಿಂದ ಮತ ಬಂದಿದೆ ಎಂದು ದೂರಿದರು.

ಈಶ್ವರಪ್ಪನವರನ್ನ ಸ್ಪರ್ಧಿಸುವ ಮೂಲಕ ಬಿವೈ ರಾಘವೇಂದ್ರರನ್ನ ಗೆಲ್ಲಿಸುವ ಒಳ ಒಪ್ಪಂದವಿದೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪನವರನ್ನ ರಾಜ್ಯಪಾಲರನ್ನಾಗಿಸುವ ಮತ್ತು ಪುತ್ರ ಕಾಂತೇಶ್ ಗೆ ಎಂಎಲ್ ಸಿ ಸ್ಥಾನ ಸಿಗಲಿದೆ ಎಂದು ದೂರಿದರು.

ಬಿಜೆಪಿ ಮುಂದುವರೆಯುವ ಜಾತಿಗಳ ಮತ ಪಡೆದು ಹಿಂದುಳಿದ ಜಾತಿಗಳನ್ನ ಒಡೆಯುವ ತಂತ್ರ ಇದರಲ್ಲಿದೆ. ಮಾಡದೆ ಇದ್ದರೆ ಐಟಿ ಅಧಿಕಾರಿಗಳು ಅವರ ಮನೆಯಲ್ಲಿರ್ತಾರೆ ಎಂಬ ಬೆದರಿಕೆಯೂ ಸಹ ಹಾಕಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಧೈರ್ಯ ಮಾಡುವ ಸ್ವಭಾವ ಈಶ್ವರಪ್ಪನವರದ್ದು ಅಲ್ಲ. ಆದರೂ ಹಠ ಹಿಡಿದಿದ್ದಾರೆ. ಎಕ್ಸಟ್ರಾ ಬ್ಯಾಟರಿ ಹೇಗೆ ಬಂತು ಎಂಬುದಕ್ಕೆ ಈ ಒಳ ಒಪ್ಪಂದ ಕಾರಣವಾಗಿದೆ. ಜಿಲ್ಲೆಯ ಜಾಗೃತ ಜನ ಬಿಜೆಪಿ ಅಭ್ಯರ್ಥಿ ಮತ್ತು ಈಶ್ವರಪ್ಪನವರನ್ನ ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರನ್ನ ಗೆಲ್ಲಿಸಲಿದ್ದಾರೆ ಎಂದರು.

ಉದಾತ ಹೋರಾಟಗಾರ, ದಿಟ್ಟ ರಾಜಕಾರಣಿ ಬಂಗಾರಪ್ಪನವರು ಮತ್ತು ಕುಟುಂಬ ಹೊಂದಾಣಿಕೆ ಮಾಡಿಕೊಳ್ಳುವವರಲ್ಲ. 40% ಆರೋಪ ಎದುರಿಸಿದ ಈಶ್ವರಪ್ಪನವರಿಗೆ ಐಟಿ ಇಡಿ ದಾಳಿಯ ಬೆದರಿಕೆ ಇದೆ. ಹಾಗಾಗಿ ಈಶ್ವರಪ್ಪನವರು ಸ್ಪರ್ಧೆ ಖಚಿತವಾಗಿದೆ ಎಂದರು.

ಯಡಿಯೂರಪ್ಪನವರನ್ನ ವಿರೋಧಿಸುವ ಒಂದಿಷ್ಟು ಜನ ಇದ್ದಾರೆ. ಬಿಜೆಪಿಯ ಟಾರ್ಗೆಟ್ ಬಿಎಸ್ ವೈ ಮತ್ತು ಪುತ್ರ ವಿಜೇಂದ್ರ ಇರಬಾರದು ಎಂಬ ಉದ್ದೇಶದಿಂದ ಸ್ಪರ್ಧೆ ಆಗ್ತಾ‌ಇದೆ. ಈಶ್ವರಪ್ಪನವರನ್ನ ಛೂ ಬಿಡಲಾಗಿದೆ ಎಂದು ದೂರಿದರು.

ಈಶ್ವರಪ್ಪನವರು ಉದ್ರೇಕಗೊಳಿಸಿ ಮನೆಯಲ್ಲಿ ಕುಳಿತುಕೊಳ್ಳುವ ಸ್ವಭಾವದವರು. ಅವರಲ್ಲಿ ಹಿಂದೂತ್ವನೂ ಇಲ್ಲ ಏನೂ ಇಲ್ಲ. ಅವರ ಕೊಡುಗೆ ಹಿಂದುತ್ವಕ್ಕೆ ಏನು ಮಾಡಿದ್ದಾರೆ. ಹೋಮ ಹವನ ಬಿಟ್ಟರೆ ಏನು ಮಾಡಿಲ್ಲ ಎಂದು ದೂರಿದ ಆಯನೂರು. ಧರ್ಮದ ಆಧಾರದ ಮೇಲೆ ಮತಯಾಚಿಸುತ್ತಿರುವ ಈಶ್ವರಪ್ಪನವರ ವಿರುದ್ಧ ದೂರು ದಾಖಲಾಗಬೇಕಿತ್ತು. ಅವರ ಮೇಲೆ ಮಾತ್ರ ಅಲ್ಲ ಸ್ವಾಮೀಜಿಗಳ ಮೇಲೂ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಧರ್ಮದ ಆಧಾರದ ಮೇಲೆ ಮತಯಾಚಿಸಿದರೆ ಚುನಾವಣೆ ಆಯೋಗ ಈಶ್ವರಪ್ಪ ಮತ್ತು ಬಿವೈಆರ್ ವಿರುದ್ಧವೂ ದೂರಾಗಬೇಕು.

ತಂಡೋಪ ತಂಡವಾಗಿ ಸ್ವಾಮೀಜಿ ಬಳಿ ಹೋಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಕೇವಲ ಆಶೀರ್ವಚನ ಪಡೆದುಕೊಂಡು ಬಂದರೆ ಏನೂ ಆಗೊಲ್ಲ ಎಂದು ಆರೋಪಿಸಿದ ಆಯನೂರು ಅಂತೂ ಇಂತೂ ರಾಜಕೀಯ ಪೌರಶವನ್ನ ಈಶ್ವರಪ್ಪ ಪ್ರದರ್ಶಿಸುತ್ತಿದ್ದಾರೆ. ನನಗೆ ಚಿಂತೆ ಆಗಿದೆ. ನನ್ನ ಓಟು ಅವರಿಗೆ ಹೋಗುತ್ತಲ್ಲಾ ಎಂಬ ಚಿಂತೆ ಆರಂಭವಾಗಿದೆ ಎಂದು ಲೇವಡಿ ಮಾಡಿದರು.

ನಾವು ಒಂದೇ ಗರಡಿಯಲ್ಲಿ ಬೆಳೆದವರು, ಅವರ ಮುಖವಾಡದ ಪಟ್ಟು ಗೊತ್ತಾಗಿದೆ. ಅವರ ಕೋರ್ ಕಮಿಟಿಯ ಮಾಹಿತಿ ನನ್ನ ಬಳಿ ಇದೆ. ಅವರನ್ನ ರಾಜಕೀಯ ಹೇಡಿ ಎಂದು ಕೊಂಡಿದ್ದೆ. ಧೀರರಾಗಿ ರಾಜಕಾರಣ‌ ಆಗಲಿ ಎಂದು ಆಶಿಸಿದರು. ನಾನು ಅವರಿಗೆ ಮತಹಾಕುವುದಾಗಿ ಹೇಳಿದರು.

ಬಿಜೆಪಿಯ ಯಾವ ನಾಯಕರು ಈಸ್ವರಪ್ಪನವರ ವಿರುದ್ಧ ಮಾತನಾಡಿಲ್ಲ. ರಾಜಕೀಯ ದಾಳವಾಗಿ ಈಶ್ವರಪ್ಪನವರನ್ನ ಬಿಜೆಪಿ ಬಳಸಿಕೊಂಡಿದ್ದು, ಸ್ಪಾನ್ಸರ್ ಆಗಿ ಅವರನ್ನ ಸ್ಪರ್ಧೆಗೆ ಕಣಕಿಳಿಸಲಾಗಿದೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/11390

Related Articles

Leave a Reply

Your email address will not be published. Required fields are marked *

Back to top button