ಕ್ರೈಂ ನ್ಯೂಸ್

ಸರಣಿಗಳ್ಳನ ಬಂಧನ

ಸುದ್ದಿಲೈವ್/ಶಿವಮೊಗ್ಗ

ಬ್ಯಾಕೋಡು ಭಾಗದಲ್ಲಿ ಸರಣಿ ಕಳ್ಳತನವಾಗಿದ್ದ ಪ್ರಕರಣವನ್ನ ಕಾರ್ಗಲ್ ಪೊಲೀಸರು ಬೇಧಿಸಿದ್ದಾರೆ. ಸಸಿಗೊಳ್ಳಿಯ ಶ್ರೀ ನಾರಾಯಣ ಗುರು ಸಹಕಾರ ಸಂಘ ಹಾಗೂ ಜೈನ ಬಸದಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಪತ್ತೆಹಚ್ಚಿದ್ದಾರೆ.‌

ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಭಾಗದಲ್ಲಿ ಡಿ.16 ರಂದು ಪೂಜ್ಯ ಶ್ರೀ ನಾರಾಯಣ ಗುರು ಸಹಕಾರ ಸಂಘ ಸಸಿಗೊಳ್ಳಿ ಸಾಗರ ತಾಲ್ಲೂಕಿನಲ್ಲಿ ಕಳ್ಳತನವಾಗಿದ್ದು, ಹಾಗೂ ಡಿ.29 ರಂದು ಹಾಲೆಮನೆಯ ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯಲ್ಲಿ ಕಳ್ಳತನವಾಗಿತ್ತು.

ಕಳ್ಳತನವಾಗಿರುವ ಮಾಲು ಮತ್ತು ಆರೋಪಿ ಪತ್ತೆಗಾಗಿ ಮಿಥುನ್ ಕುಮಾರ್ ಐ.ಪಿ.ಎಸ್, ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಅನಿಲ್ ಕುಮಾರ್ ಭೂಮರೆಡ್ಡಿ, ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು. ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಮತ್ತು ಕಾರಿಯಪ್ಪ, ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು. ಶಿವಮೊಗ್ಗ ಜಿಲ್ಲೆ, ಶಿವಮೊಗ್ಗರವರು ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ ಗೋಪಾಲ ಕೃಷ್ಣ ಟಿ ನಾಯಕ್ , ಮಾನ್ಯ ಪೋಲೀಸ್ ಉಪಧೀಕ್ಷಕರು. ಸಾಗರ ಉಪವಿಭಾಗ, ಸಾಗರ ರವರ ಮಾರ್ಗದರ್ಶನದ ಮೇರೆಗೆ ಸಾಗರ ಗ್ರಾಮಾಂತರ ವೃತ್ತ ಸಿಪಿಐ ರವರಾದ ಮಹಾಬಲೇಶ್ವರ ನಾಯ್ಕ ಮತ್ತು ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಹೊಳಬಸಪ್ಪ ಹೋಳಿ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಸನಾವುಲ್ಲಾ, ಸಿಹೆಚ್ ಸಿ 66. ಜಯೇಂದ್ರ ಸಿಹೆಚ್ಸಿ 220, ಮಂಜುನಾಥ್ ನಾಯ್ಕ್ ಸಿ ಹೆಚ್ ಸಿ 450, ಶ್ರೀಬಲೋಕೇಸ್ ಸಿ ಪಿ ಸಿ 1069, ಶ್ರೀ ಶರತ್ ಕುಮಾರ್ ಸಿಪಿಸಿ1686, ಪುರುಷೋತ್ತಮ, ಸಿಪಿಸಿ 1256 ಹಾಗೂ ಕಾರ್ಯಾಚರಣೆಗೆ ಸಹಕರಿಸಿದ ತಂತ್ರಿಕ ಸಿಬ್ಬಂದಿಯವರಾದ ವಿಜಯ್ ಹಾಗೂ ಇಂದ್ರೇಶ್ ರವರನ್ನೊಳಗೊಂಡ ತಂಡ ಜ.4 ರಂದು ಮಂಗಳೂರು ಮೂಲದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.‌

ಇನ್ನು ಈ ಪ್ರಕರಣದಲ್ಲಿ 3-4 ಜನ ಆರೋಪಿತರ ಕೈವಾಡವಿದ್ದು, ಇವರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುತ್ತೆ ಸದರಿ ಆರೋಪಿತರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣ ದಾಖಲಾದ ಒಂದು ವಾರದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಹುಮಾನ ಘೋಷಣೆ ಮಾಡುವುದರ ಜೊತೆಗೆ ಅಭಿನಂದಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/6407

Related Articles

Leave a Reply

Your email address will not be published. Required fields are marked *

Back to top button