ಮಾಚೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಹಿಂದೂ ಸಂಘಟನೆಗಳ ಕಣ್ಣುಗಳು ಕೆಂಪಾಗಿದ್ದೇಕೆ?ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೋಳಿ, ಕುರಿ ಮತ್ತು ಮೀನು ತ್ಯಾಜ್ಯ ಗಳನ್ನ ಪರಿಷ್ಕರಿಸಿ ಪೆಡಿಗ್ರೀ, ಫಿಶ್ ಮೀಲ್ ಮತ್ತು ಕೋಳಿ ಪೌಲ್ಟ್ರಿಗಳಿಗೆ ಆಹಾರ ಉತ್ಪನ್ನ ತಯಾರಿಸುವ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡು ಪ್ರೋ ರಿಚ್ ನಲ್ಲಿ ಸತ್ತ ಕರುವೊಂದು ಪತ್ತೆಯಾಗಿದ್ದು ಹಿಂದೂ ಸಂಘಟನೆಗಳ ಕಣ್ಣಿಗೆ ಗುರಿಯಾಗಿದೆ.
ಶಿವಮೊಗ್ಗ ಮತ್ತು ಭದ್ರಾವತಿಯಿಂದ ದಿನಾಲು ಮೂರು ವಾಹನಗಳು ಈ ಮಲ್ನಾಡು ರಿಚ್ ಪ್ರೋ ಕಾರ್ಖಾನೆಗಳಿಗೆ ದಿನಾಲು ಮೂರು ವಾಹನಗಳು ಬರುತ್ತದೆ. ಇಲ್ಲಿ ಚಿಕನ್ ಮತ್ತು ಫಿಶ್ ತ್ಯಾಜ್ಯ ಮಾತ್ರ ತರಲು ಪಾಲಿಕೆಯಿಂದ ಅನುಮತಿಯಿದೆ. ಆದರೆ ನಿನ್ನೆ ಬಂದ ತ್ಯಾಜ್ಯ ವಾಹನದಲ್ಲಿ ಕರುವಿನ ಶವ ಪತ್ತೆಯಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿವೆ. ಈ ತ್ಯಾಜ್ಯ ಚಿಕ್ಕಮಗಳೂರಿನಿಂದ ಬಂದ ತ್ಯಾಜ್ಯವೊಂದರಲ್ಲಿ ಮೃತ ಕರುವೊಂದು ಪತ್ತೆಯಾಗಿದೆ. ಇತ್ತೀಚೆಗಷ್ಟೆ ಚಿಕ್ಕಮಗಳೂರು ನಗರ ಸಭೆ ಸಹ ಎಂಒಯು ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ಒಂದುಡಿಎಆರ್ ವಾಹನ ನಿಯೋಜಿಸಲಾಗಿದೆ. ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್, ಪಾಲಿಕೆ ಆರೋಗ್ಯಾಧಿಕಾರಿ ರೇಖಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಪ್ರಕಾರ ಭದ್ರಾವತಿಯಿಂದ ಬಂದ ತ್ಯಾಜ್ಯದಲ್ಲಿ ಕರುವಿನ ಶವ ಬಂದಿರುವುದಾಗಿ ಅಂದಾಜಿಸಿದ್ದು ಈ ಸಂಬಂಧ ವಾಹನದ ಇಬ್ಬರು ಚಾಲಕರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಸ್ಥಳ ಮೇಯರ್ ಶಿವಕುಮಾರ್ ಅವರ ಸ್ಥಳವಾಗಿದ್ದು ಕೇರಳದ ಕಮಲೇಶ್ವರ ಈ ತ್ಯಾಜ್ಯಗಳ ಪರಿಷ್ಕರಣಯನ್ನ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸುಮೋಟೋ ದಾಖಲಾಗುವ ಸಾಧ್ಯತೆ ಇದೆ. ಕರುವಿನ ಶವವನ್ನ ಕಾರ್ಖಾನೆಯ ಅಂಗದಲ್ಲಿಯೇ ಗುಂಡಿ ತೆಗೆದು ಹೂತಾಕಲಾಗಿದೆ. ಮಲ್ನಾಡ್ ರಿಚ್ ಪ್ರೋ ಕಾರ್ಖಾನೆಯಲ್ಲಿ ಹೆಚ್ಚಿನ ವಾಸನೆ ಬಂದ ಹಿನ್ನಲೆಯಲ್ಲಿ ಈ ಪ್ರಕರಣ ಹಚ್ಚು ಪ್ರಚಾರ ಪಡೆದುಕೊಂಡಿದೆ.
ಈ ಪ್ರಕರಣಗಳ ಹಿಂದೆ ರಾಜಕಾರಣದ ಅನುಮಾನವಿದೆ ಎಂದು ಹಿಂದೂ ಸಂಘಟನೆ ಆರೋಪಿಸಿದೆ. ಕಸಾಯಿ ಕಾನೆಯಿಂದ ಹಸುವಿನ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಕಸಾಯಿ ಖಾನೆಗಳು ಎರಡೂ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಶಿವಮೊಗ್ಗ ನಗರ ಪಾಲಿಕೆ ಈ ಮಲ್ನಾಡ್ ಪ್ರೊ ರಿಚ್ ನೊಂದಿಗೆ ಎಂಒಯು ಮಾಡಿಕೊಂಡಿದೆ
ಇದನ್ನೂ ಓದಿ-https://suddilive.in/archives/1096
