ಕ್ರೈಂ ನ್ಯೂಸ್

ಕೊಲೆಯತ್ನಕ್ಕೆ ಕುಮ್ಮಕ್ಕು ನೀಡಿದ ಉಮೇಶ್ ಮಗಳ ಬಂಧನಕ್ಕೆ ಆಗ್ರಹಿಸಿ ಸಂತ್ರಸ್ತೆ ಲಲಿತಮ್ಮ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಮಂಡೇನಕೊಪ್ಪದಲ್ಲಿ ಕಸ ತುಂಬಿಸುವ ವಿಚಾರದಲ್ಲಿ ಚಿಕ್ಕಪ್ಪ ಮತ್ತು ಅಣ್ಣನ ಮಗನ ನಡುವೆ ಜಗಳ ಉಂಟಾಗಿದ್ದು ಅಣ್ಣನ ಮಗನಿಗೆ ಚಿಕ್ಕಪ್ಪನೇ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚಾಕು ಇರಿತಕ್ಕೆ ಒಳಗಾದ ಯುವಕನ ತಾಯಿ ಲಲಿತಮ್ಮ ಡಿವೈಎಸ್ಪಿ ಸುರೇಶ್ ರವರನ್ನ‌ ಭೇಟಿ ಮಾಡಿ ಪ್ರಕರಣದ  ಮೂರನೇ ಆರೋಪಿಯನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಮುಖಂಡರೊಂದಿಗೆ ಡಿವೈಎಸ್ಪಿ ಸುರೇಶ್ ರವರನ್ನ ಭೇಟಿ ಮಾಡಿದ ಲಲಿತಮ್ಮ  ತುಂಗನಗರ ಠಾಣೆಯ ಪೊಲೀಸರು ಚಿಕ್ಕಪ್ಪ ಉಮೇಶ್ ಮತ್ತು ಪತ್ನಿ ಮಂಜುಳ ಬಾಯಿ ವರನ್ನ ಬಂಧಿಸಿದ್ದಾರೆ. ಆದರೆ  ಮತ್ತೊಬ್ಬಳು ಆರೋಪಿ ಉಮೆಶ್ ಮಗಳನ್ನ ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.

ಗ್ರಾಮದ ದೇವಸ್ಥಾನ ಕಮಿಟಿಯ ಅಧ್ಯಕ್ಷ ಸೂರ್ಯನಾಯ್ಕ್ ಮಾತನಾಡಿ, ಆಶಾ ಕಾರ್ಯಕರ್ತರಾಗಿರುವ ಲಲಿತಮ್ಮ ಆರೋಗ್ಯ ವಿಚಾರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.  ಅವರ ಮಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗ ಆಕಾಶ್ ಯಾವ ತಪ್ಪು ಮಾಡಿಲ್ಲ  ಆತ ಬದುಕಬೇಕು. ಆದರೆ ತಪ್ಪಿತಸ್ಥ ಉಮೇಶ್ ಗೆ ಚಾಕು ಚುಚ್ಚುವಂತೆ ಪತ್ನಿ ಮಂಜುಳ ಬಾಯಿ ಮತ್ತು ಮಗಳು ಈ ವಿಷಯದಲ್ಲಿ ಕುಮ್ಮಕ್ಕು ನೀಡಿದ್ದಾರೆ.

ಕುಮ್ಮಕ್ಕು ನೀಡಿದ ಪತ್ನಿ ಮಂಜುಳ ಬಾಯಿಯನ್ನ ಬಂಧಿಸಿದ್ದಾರೆ. ಆದರೆ ಮಗಳನ್ನ ಬಿಟ್ಟಿದ್ದಾರೆ. ಅಲ್ಲದೆ ಚಾಕು ಇರಿತಕ್ಕೆ ಒಳಗಾಗಿದ್ದರು ಲಲಿತಮ್ಮ ಮತ್ತು ಮಗ ಆಕಾಶ್ ಮೇಲೆ ದೂರು ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ದೂರಿದರು.

ದೂರುದಾರೆ ಲಲಿತಮ್ಮ ಮಾತನಾಡಿ, ಘಟನೆ ನಡೆದು ಮೂರುದಿನದ ನಂತರ‌ಎಫ್ಐಆರ್ ಆಗಿದೆ. ನನ್ನ ಸಹಿಯನ್ನ  ವೈಟ್ ಪೇಪರ್ ಮೇಲೆ ಪೊಲೀಸರು ಮಾಡಿಸಿಕೊಂಡಿದ್ದಾರೆ. ತನಿಖೆನಡೆಸುವುದಾಗಿ ಹೇಳಿದ್ದಾರೆ. ಮೂರು ಜನದ ಮೇಲೆ ದೂರು ನೀಡಲಾಗಿದೆ ಆದರೆ ಇಬ್ವರನ್ನ ಅರೆಸ್ಟ್ ಮಾಡಲಾಗಿದೆ. ಮಗಳನ್ನ ಇನ್ನೂ ಬಂಧಿಸಿಲ್ಲ.  ತುಂಗನಗರ ಪೊಲೀಸರು ಗಮನಕ್ಕೆ ತರಲಾದರೂ ಸಹ  ಹೇಳಿದ್ದನ್ನ ಮಾಡಲು ಆಗಲ್ಲ ಎಂದಿದ್ದಾರೆ.

ನ್ಯಾಯಕ್ಕಾಗಿ ಡಿವೈಎಸ್ಪಿ ಬಳಿ ಬಂದಿದ್ದೇನೆ. ‌ನಾನು ನೀಡಿದ ದೂರು ಬೇರೆಯಾಗಿದೆ. ಆದರೆ ಎಫ್ಐಆರ್ ಬೇರೆಯಾಗಿದೆ. ಘಟನೆ ನಡೆದು ಮೂರು ದಿನ ಆಗಿದೆ. ಇರಿತಕ್ಕೆ ಒಳಗಾದ ಮಗ ಕಣ್ಣು ಬಿಡುತ್ತಿಲ್ಲ.

ರೋಹಿಣಿ ಯಾನೆ ರೂಪನ ಮೇಲೆ  ದೂರಿದ್ದರೂ ಬಂಧನವಾಗಿಲ್ಲ. ಊರಿನವರ ಮೇಲೆ ಜಾತಿ ನಿಂದನೆ ಮತ್ತು ರೇಪ್ ಕೇಸು ಹಾಕಿಕೊಂಡು ಆಕೆ ಓಡಾಡುತ್ತಿದ್ದಾಳೆ. ತಂದೆ ತಾಯಿಯನ್ನ ಬಂಧಿಸಲಾಗಿದೆ. ಮೂರನೇ ಹೆಸರು ಮಗಳ ಹೆಸರಿದ್ದರೂ ಯಾಕೆ ಬಂಧಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ-https://suddilive.in/archives/6026

Related Articles

Leave a Reply

Your email address will not be published. Required fields are marked *

Back to top button