ಕ್ರೈಂ ನ್ಯೂಸ್

ಮುಂದುವರೆದ ಪೋಷಕರ ಆಕ್ರೋಶ-ಎಸ್ಪಿಯೊಂದಿಗೆ ಸಭೆ

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ದಿಡೀರ್ ಅಂತ ಕಟ್ಟಡದಿಂದ ಹಾರಿ ಜೀವ ಕಳೆದುಕೊಂಡ ಪ್ರಕರಣ ಈಗ ಕನ್ನಡ ಸಂಘಟನೆ ಮತ್ತು ಪೋಷಕರ ಆಕ್ರೋಶ ಸ್ಪೋಟವಾಗಲು ಕಾರಣವಾಗಿದೆ.  ಕಾಲೇಜಿನ ಮುಂಭಾಗದಲ್ಲಿ ಪೋಷಕರ ಜಮಾವಣೆ ದಟ್ಟವಾಗುತ್ತಾ ಹೋಗುತ್ತಿದೆ.

ಕಾಲೇಜಿಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಭೇಟಿ ನೀಡಿದ್ದಾರೆ.   ಎಸ್ಪಿ ಅವರ ಮುಂದೆ ಪೋಷಕರು ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಕಾಲೇಜಿನಲ್ಲಿ ಒಂದು ದಿನ ಶುಲ್ಕ ಕಟ್ಟೋದು ತಡವಾದರೆ ಪೋಷಕರನ್ನ ಕರೆಯಿಸುವ ಶಾಲಾ ಆಡಳಿತ ಮಂಡಳಿ ಒಂದು ವಿದ್ಯಾರ್ಥಿನಿಯ ಜೀವ ಕಳೆದಿದೆ. ಆಡಳಿತ ಮಂಡಳಿಯವರು ಒಬ್ಬರು ಸ್ಥಳದಲ್ಲಿ ಇಲ್ಲ. ಹಾಗಾಗಿ ಆಡಳಿ ಮಂಡಳಿಯವರನ್ನ ಮತ್ತು ಸ್ವಾಮೀಜಿಯವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಎಸ್ಪಿ ಅವರು ಬಂಧನದ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ಕೊಡಲ್ಲ ಏನು ನಿಮಗೆ ತಪ್ಪು ಅನಿಸಿದೆ ಅದನ್ನ ಲಿಖಿತ ರೂಪದಲ್ಲಿ ಕೊಡಿ ಎಂದು ತಿಳಿಸಿದ್ದಾರೆ. ಆಡಳಿತ ಕಚೇರಿಯಲ್ಲಿ ಶಾಲಾ ಆಡಳಿತ ಮಂಡಳಿ, ಪೋಷಕರನ್ನ ಕರೆಯಿಸಿ ಸಭೆ ನಡೆಸಲು ಎಸ್ಪಿ ಮುಂದಾಗಿದ್ದಾರೆ.

ವಿಧ್ಯಾರ್ಥಿನಿಯ ಸಾವಿನ ಬಗ್ಗೆ ತನಿಖೆಯಾಗ‌ಬೇಕು. ಆಡಳಿತ ಮಂಡಳಿಯವರನ್ನ ಬಂಧಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ. ಒಂದು‌ಮೂಲದ ಪ್ರಕಾರ ಪರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಯು ಕಾಫಿ ಹೊಡೆಯುತ್ತಿದ್ದ ಕಾರಣ ತರಗತಿಯಲ್ಲೇ ವಿದ್ಯಾರ್ಥಿನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅವಮಾನ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಕನ್ನಡ ಸಂಘಟನೆಯವರು ಆರೋಪಿಸಿದ್ದಾರೆ. ಸಿಸಿ ಟಿವಿ ಫೋಟೋದಲ್ಲಿ ಇವೆಲ್ಲಾ ಸೆರೆಯಾಗಿದ್ದು ಇವುಗಳನ್ನ ಪೋಷಕರು ತೋರಿಸುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ-https://suddilive.in/archives/4307

Related Articles

Leave a Reply

Your email address will not be published. Required fields are marked *

Back to top button