ಕ್ರೈಂ ನ್ಯೂಸ್

ಮಕ್ಕಳಾಟಿಕೆಯ ಗನ್!

ಸುದ್ದಿಲೈವ್/ಸಾಗರ

ಇಂದು ಸಾಗರದ ಮಾಧ್ಯಮಗಳಲ್ಲಿ ಗಲಾಟೆ ನಡೆಯುತ್ತಿದ್ದ ವೇಳೆ ಗನ್ ಪ್ರದರ್ಶನ ಮಾಡಲಾಗಿದೆ ಎಂದು ಅಡಿಬರಹ ಇರುವ ವಿಡಿಯೋವೊಂದು ಪ್ರಸಾರವಾಗಿತ್ತು. ಸಾಗರ ಠಾಣೆ ಪಿಎಸ್ ಐ ಸೀತಾರಂ, ಸಿಬ್ಬಂಧಿಗಳ ತಂಡವು ಸದರಿ ವಿಡಿಯೋವನ್ನು ಪರಿಶೀಲಿಸಿ ಪ್ರಕರಣವನ್ನ ಭೇಧಿಸಿದ್ದು ಮಕ್ಕಳಾಟಿಕೆಯ ಗನ್ ಎಂದು ಪತ್ತೆಹಚ್ಚಿದ್ದಾರೆ.

ವಿಡೀಯೋದಲ್ಲಿದ್ದ ಯುವಕರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ. ಸ್ನೇಹಿತರಾದ 1)ದರ್ಶನ್, 19 ವರ್ಷ ಆಯನೂರು ಶಿವಮೊಗ್ಗ ಮತ್ತು 2) ನವೀನ್ 25 ವರ್ಷ ಸಾಗರ ಟೌನ್ ಎಂದು ತಿಳಿದು ಬಂದಿದೆ.

ನಿನ್ಬೆ ರಾತ್ರಿ ಸಾಗರ ಟೌನ್ ನ ಜಿ.ಪಿ ರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ದು, ಆ ಸಂದರ್ಭದಲ್ಲಿ ದರ್ಶನ್‌ ಎಂಬಾತನು ಮಕ್ಕಳ ಆಟಿಕೆಯ ನಕಲೀ ಏರ್ ಪಿಸ್ತೂಲ್ ಅನ್ನು ತೋರಿಸಿರುವುದು ವಿಚಾರಣೆಯಿಂದ ಕಂಡುಬಂದಿದೆ. ಈ ಬಗ್ಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ-https://suddilive.in/archives/8851

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373