ರೋಹನ್ ರಾವ್ ದೊಣ್ಣೆ ಹಿಡಿದಿದ್ದು ಯಾಕೆ? ಈತನಿಂದಲೇ ಕಲ್ಲು ತೂರಾಟ ನಡೆಯಿತಾ?

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ ಗಲಭೆ ಪ್ರಕರಣದಲ್ಲಿ ಇದುವರೆಗೂ 27 ಎಫ್ಐಆರ್ ದಾಖಲಾಗಿದೆ. ಆದರೆ ಇದು ವರೆಗೂ ಯಾಕೆ ಕಲ್ಲುತೂರಾಟವಾಯಿತು, ಯಾಕೆ ಗಲಭೆ ನಡೆಯಿತು ಎಂಬುದರ ಬಗ್ಗೆ ದೂರು ದಾಖಲಾಗಿಲ್ಲ.
ಈಗಾಗಲೇ ರೋಹನ್ ರಾವ್ ದೊಣ್ಣೆ ಹಿಡಿದ ವಿಡಿಯೋವೊಂದು ವೈರಲ್ ಆಗಿದೆ. ಈತನೇ ಈದ್ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದಾನಾ ಎಂದು ಶಂಕೆ ವ್ಯಕ್ತಪಡಿಸಿ ಕೆಲ ಸುದ್ದಿ ಮಾಧ್ಯಮಗಳು ಸುದ್ದಿ ಮಾಡಿದೆ. ಆದರೆ ಯಾವ ಎಫ್ಐಆರ್ ನಲ್ಲೂ ಮೆರವಣಿಗೆಯ ಮೇಲೆ ಹೇಗೆ ಕಲ್ಲೂ ತೂರಲಾಗಿದೆ ಎಂದು ಸುಮೋಟೊ ದಾಖಲಾಗಿಲ್ಲ.
ಹಿಂದೂ ಹುಡುಗರನ್ನ ನೋಡಿ ಮೆರವಣಿಗೆಯಲ್ಲಿದ್ದ ಒಂದು ಗುಂಪು ದಾಳಿ ನಡೆಸಿದೆ ಎಂದು ದೂರು ದಾಖಲಾಗಿದೆ. ಆದರೆ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದರಿಂದ ಗಲಭೆ ಆರಂಭವಾಗಿದೆ ಎಂದು ದೂರು ದಾಖಲಾಗಿಲ್ಲ.
ಮೆರವಣಿಗೆಯ ಮೇಲೆ ಕಲ್ಲು ತೂರಿದ್ದಕ್ಕೆ ನೂರಾರು ಜನ ಹಿಂದಕ್ಕೆ ಹೋಗಿದ್ದಾರೆ. ಆದರೆ ಪೊಲೀಸರ ಸಿಸಿ ಟಿವಿಯಲ್ಲಿ, ಡ್ರೋಣ್ ನಲ್ಲಿ ಮೆರವಣಿಗೆಯ ಮೇಲೆ ಕಲ್ಲುತೂರಿರುವ ಬಗ್ಗೆ ದೃಶ್ಯಗಳು ಸೆರೆಯಾಗಿಲ್ಲ. ಮೆರವಣಿಗೆ ಹೊರಟ ವೇಳೆ ಪೊಲೀಸರ ಬಂದೋಬಸ್ತ್ ಹೇಗಿತ್ತು ಎಂದರೆ ಕಟ್ಟಡದ ಮೇಲೂ ನಿಂತು ಪೊಲೀಸ್ ಸಿಬ್ಬಂದಿಗಳು ಕ್ಯಾಮೆರ ಹಿಡಿದು ಸೆರೆ ಹಿಡಿಯುತ್ತಿದ್ದರು. ಆದರೆ ಎಲ್ಲೂ ಕಲ್ಲು ತೂರಾಟದ ದೃಶ್ಯ ಕಂಡು ಬಂದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ ಶನಿಶ್ವರ ದೇವಾಲಯದ ಬಳಿ ಹಸಿರು ಧ್ವಜ ತಿರುಗಿಸುತ್ತಿದ್ದ ವೇಳೆ ಕೈಯಿಂದ ಸ್ಲಿಪ್ ಆದ ಬಾವುಟ ಮಹಿಳೆಗೆ ತಗುಲುತ್ತೆ ಎನ್ನಲಾಗಿದೆ. ಬಾವುಟ ತಗುಲಿದ ಮಹಿಳೆ ಕಲ್ಲೇಟು ಬಿದ್ದಿದೆ ಎಂದಿದ್ದೆ ಗೊಂದಲಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಹಿಳೆ ಕಲ್ಲುತೂರಲಾಗಿದೆ ಎಂದು ಕೂಗಿದ ತಕ್ಷಣ ಮೆರವಣಿಗೆಯಲ್ಲಿದ್ದ ಅನೇಕರು ಹಿಂಬದಿಗೆ ನುಗ್ಗುತ್ತಾರೆ. ಅಲ್ಲಿಂದ ಗಲಭೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗೆ ಯಾವುದೇ ಸ್ಪಷ್ಟತೆ ಇಲ್ಲದ ಮಾಹಿತಿಗಳು ಹರಿದಾಡುತ್ತಿದೆ. ಇದೇ ವೇಳೆ ದೊಣ್ಣೆ ಹಿಡಿದುಕೊಂಡು ನಿಂತಿರುವ ರೋಹನ್ ರಾವ್ ಮೇಲೆ ಹಲ್ಲೆ ಮುಂದು ವರೆದಿತ್ತು. ಶನೀಶ್ವರ ದೇವಾಲಯದ ಬಳಿ ನಡೆದುಕೊಂಡು ಬರುತ್ತಿದ್ದ ರೋಹನ್ ಮೆಲೆ ದಾಳಿ ನಡೆದಿದೆ. ಅದಕ್ಕೆ ಪ್ರತಿಯಾಗಿ ಆತ ದೊಣ್ಣೆ ಹಿಡಿದಿರುವುದಾಗಿ ಸುದ್ದಿ ಲೈವ್ ಗೆ ಮಾಹಿತಿ ನೀಡಿದ್ದಾನೆ. ಆದರೆ ಈತನ ಮತ್ತು ಸಹಚರರಿಂದ ಗಲಭೆ ನಡೆದಿದೆ ಎಂದು ಎಫ್ಐಆರ್ ದಾಖಲಾಗಿದೆ.
ಇಂದು ಬಿಜೆಪಿಯ ಸತ್ಯಶೋಧನ ಸಮಿತಿಯ ಹಾಗೂ ಎಂಎಲ್ ಸಿ ಭಾರತಕಿ ಶೆಟ್ಟಿಯ ಮುಂದೆ ರೋಹನ್ ರಾವ್ ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ನನ್ನ ಮಗ ತಪ್ಪು ಮಾಡಿಲ್ಲ. ನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಲಿ. ಪಲಾಯನವೇ ವಾರ್ಗ ಅನಿಸುತ್ತೆ ಎಂದು ರಾಗಿಗುಡ್ಡದ ಮನೆ ಖಾಲಿ ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/597
