ಕ್ರೈಂ ನ್ಯೂಸ್

ಬೈಕ್ ವಿಚಾರದಲ್ಲಿ ಮಾರಾಮಾರಿ-ಗಲಾಡೆ ವಿಡಿಯೋ ವೈರಲ್

ಶಿಕಾರಿಪುರ ತಾಲೂಕು ಹಾರೋಕೊಪ್ಪದಲ್ಲಿ ನಡೆದ ಸಣ್ಣ ಗಲಾಟೆ ದೊಡ್ಡ ಕಿಚ್ಚನ್ನೇ ಎಬ್ಬಿಸಿದೆ. ಬೈಕ್ ವಿಚಾರದಲ್ಲಿ ನಡೆದ ಗಲಾಟೆ ಕುರೊತು ವಿಡಿಯೋವೊಂದು ವೈರಲ್ ಆಗಿದೆ. 

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರದಲ್ಲಿ ಬೈಕ್ ಚಲಿಸುವ ವಿಷಯದಲ್ಲಿ ಗಲಾಟೆಯಾಗಿದೆ. ಯುವಕನೋರ್ವ ಮದ್ಯವಯಸ್ಕನ ಮೇಲೆ ಹತ್ತಿಸುವ ರೀತಿಯಲ್ಲಿ ವಾಹನ ಚಲಾಯಿಸಿಕೊಂಡು ಹೋದ ಪರಿಣಾಮ ತಾಂಡದಲ್ಲಿ ಮಚ್ಚು ಪೈಪ್ ಗಳು ಹಿಡಿದುಕೊಂಡು ಪರಸ್ಪರ ಎಳೆದಾಡಿಕೊಂಡು ಗಲಾಟೆ ನಡೆದಿರುವ ವಿಡಿಯೋವೊಂದು ವೈರ್ ಆಗಿದೆ.

ಶಿಕಾರಿಪುರ ತಾಲೂಕಿನ ಪ್ರವೀಣ್ ನಾಯ್ಕ್ ಎಂಬ ಯುವಕ ಬೈಕ್ ನ್ನ ಸ್ಪಿಡಾಗಿ ಓಡಿಸಿಕೊಂಡು ಬಂದು ಉಮೇಶ್ ನಾಯ್ಕ್ ನ ಮೇಲೆ ಹತ್ತಿಸಿದಂತೆಚಲಾಯಿಸಿದ್ದಾನೆ. ಇದರಿಂದ ಗಾಬರಿಗೊಂಡ ಉಮೇಶ್ ನಾಯ್ಕ್ ಸ್ವಲ್ಪದರಿಂದ ಪಾರಾಗಿದ್ದನು.

ವೇಗವಾಗಿ ಹೋದ ಬಗ್ಗೆ ಹರೀಶ್ ಬಳಿ ಯಾರು ಈ ರೀತಿಯಲ್ಲಿ ಬೈಕ್ ಓಡಿಸಿಕೊಂಡು ಬಂದಿದ್ದು ಎಂಬುದರ ಬಗ್ಗೆ ಹರೀಶ್ ಗೆ ಕೇಳಿದಾಗ ಪ್ರವೀಣ್ ನಾಯಗಕ್ ಎಂಬ ಹೆಸರು ಕೇಳಿಬಂದಿದೆ. ಇದೇ ಬೈಕ್ ನ್ನ ಉಮೇಶ್ ನಾಯ್ಕ್ ನ ಮನೆ ಮುಂದೆ ನಿಂತಿದ್ದ ಪ್ರವೀಣ್ ಗೆ ಯಾಕೆ ನನ್ನ ಮೇಲೆ ಹತ್ತಿಸಿಕೊಂಡು ಹೋದ ರೀತಿ ಬೈಕ್ ಚಲಾಯಿಸಿಕೊಂಡು ಬಂದೆ ಎಂದು ಹೇಳಿದ್ದಕ್ಕೆ ಪ್ರವೀಣ್ ಮುಗಿಬಿದ್ದಿದ್ದಾನೆ.

ಅವ್ಯಚ್ಯಶಬ್ದಗಳಿಂದ ಬೈದ ಪ್ರವೀಣ ಉಮೇಶನ ಬೆನ್ನಿಗೆ ಹೊಡೆದಿದ್ದಾನೆ. ಜೋರು ಜೋರು ಮಾತು ಕೇಳಿದ ಕಾರಣ ಮನೆಯಿಂದ ಹೊರಬಂದ ಉಮೇಶ್ ಪತ್ನಿ ಶೀಲಾಬಾಯಿ, ತಾಯಿ ಲಚ್ಚಿಬಾಯಿ ಹಾಗೂ ಅಕ್ಕ ಪಾಪಿಬಾಯಿ ಬಂದು ಜಗಳ ಬಿಡಿಸಲು ಯತ್ನಿಸಿದ್ದಾರೆ. ಜಗಳ ಬಿಡಿಸಲು ಬಂದವರ ಮೇಲೆಯೇ ಪ್ರವೀಣ್ ನಾಯ್ಕ, ಮಾವ ಶಿವನಾಯ್ಕ್ ಪೂರ್ಯನಾಯ್ಕ, ರುಕ್ಮಿಣಿ ಬಾಯಿ ಹೊಡೆದಿದ್ದಾರೆ.

ಅವರವರ ಕುಟುಂಬ ಅವರ ಬೆನ್ನಿಗೆ ನಿಂತು ಜಗಳವಾಡಿದೆ ತಾಂಡದಲ್ಲಿ ವಿಪರಮಿತ ಗಲಾಟೆಯಾಗಿದೆ. ಮಚ್ಚನ್ನ ಹಿಡಿಕೊಂಡು ಬರುವ ದೃಶ್ಯಗಳು ಲಭ್ಯವಾಗಿದೆ.

ಘಟನೆಗೆ ಕಾರಣ

ಈ ಘಟನೆಗೆ ಕಾರಣವನ್ನ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದಲ್ಲಿ ಉಮೇಶ್ ನಾಯ್ಕ್ ಅವರ ತಾಯಿ ಲಚ್ಚಿಬಾಯಿ ಅಂಗಡಿಯಲ್ಲಿ ಉದ್ರಿ ಕೊಡಬೇಂಬ ವಿಷಯದಲ್ಲಿ ವಾಗ್ಯುದ್ಧ ನಡೆದಿತ್ತು. ಎರಡು ದಿನಗಳ ನಂತರ ಈ ಗಲಟೆ ಸ್ಪೋಟಗೊಂಡು ಕೈಕೈ ಮಿಲಾಯಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/7114

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373