ಕ್ರೈಂ ನ್ಯೂಸ್

ಭಗವನ್ ಆಶ್ರಮ ಧ್ವಂಸ-ಮಲೆನಾಡು ಕೇಸರಿ ಪಡೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಭಗವಾನ್ ಆಶ್ರಮವನ್ನ ಧ್ವಂಸ ಮಾಡಿರುವುದನ್ನ ಖಂಡಿಸಿ ಮಲೆನಾಡ ಕೇಸರಿ ಪಡೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ನಗರದ 13ನೇ ವಾರ್ಡಿನ ಮೀನಾಕ್ಷಿಭವನ್ ಹಿಂಭಾಗದ ಟಿಜಿಎನ್ ಲೇಔಟ್ ಹಿಂಭಾಗದ ಭಗವಾನ್ ಆಶ್ರಮದ ರಸ್ತೆಯಲ್ಲಿರುವ ಭಗವಾನ್ ಆಶ್ರಮವು ಅವಧೂತ ಪರಂಪರೆಗೆ ಸೇರಿದ್ದು, ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿದೆ.

ಅನೇಕ ತಲೆಮಾರುಗಳಿಂದ ಈ ಜಾಗದಲ್ಲಿ ಪೂಜಾ ಪುನಸ್ಕಾರಗಳು ಸತ್ಸಂಗ, ಅನ್ನಸಂತರ್ಪಣೆ ಅದರಲ್ಲೂ ವಿಶೇಷವಾಗಿ ದತ್ತ ಜಯಂತಿ ಸಂದರ್ಭದಲ್ಲಿ ಇಡೀ ನಗರ ಮತ್ತು ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಗುರುಬಂಧುಗಳು ಬಂದು ಸೇವೆ ಸಲ್ಲಿಸುತ್ತಿದ್ದಾರೆ.

ಇಂತ ಶ್ರದ್ಧಾ ಕೇಂದ್ರವು ಹಳೇಯ ಹಂಚಿನ ಮತ್ತು ಮಣ್ಣಿನ ಗೋಡೆಯ ಕಟ್ಟಡವಾಗಿದ್ದರಿಂದ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದ ಸಂದರ್ಭದಲ್ಲಿ ಬಿಳುವ ಹಂತದಲ್ಲಿದ್ದಾಗ ಆ ಜಾಗದ ಮುಂಭಾಗದಲ್ಲಿ ತಾತ್ಕಲಿಕ ಷೆಡ್‌ ನಲ್ಲಿ ಗುರುಗಳ ಪಾದಿಕೆಯನ್ನು ಪ್ರತಿಷ್ಟಾಪಿಸಿ ನಿತ್ಯವೂ ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು.

ದಿನಾಂಕ:21-11-2023 ರಂದು ಕೆಲವು ಭೂಮಾಫಿಯಾಗಳು ಪಟ್ಟಭದ್ರಾ ಹಿತಾಸಕ್ತಿಗಳು ಏಕಾಏಕಿ ಒಂದು ತಂಡವಾಗಿ ಬಂದು ಗೂಂಡಾ ವರ್ತನೆಯಿಂದ ಈ ಜಾಗದ ಹಕ್ಕುದಾರಿಕೆ ನಮ್ಮ ಬಳಿ ಇದೆ ಎಂದು ಸುಳ್ಳು ಹೇಳುತ್ತಾ ಜೆ.ಸಿ.ಬಿ ಯಂತ್ರವನ್ನು ಬಳಸಿ ಧ್ವಂಸ ಮಾಡಿರುತ್ತಾರೆ. ನಂತರ ಭಕ್ತರು ಮತ್ತು ಟ್ರಸ್ಟಿಗಳು ಮತ್ತು ಸ್ಥಳೀಯರು ಕೋಟೆ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಪುನಃ ಭಕ್ತರ ಸಹಾಯದಿಂದ ತಾತ್ಕಲಿಕ ಷೆಡ್ಡಿನಲ್ಲಿ ದೇವರನ್ನು ಪ್ರತಿಷ್ಠಾಪಿಸಿರುತ್ತಾರೆ.

ಧ್ವಂಸ ಮಾಡಿದ ವ್ಯಕ್ತಿಗಳು ಈ ಕ್ಷಣದವರೆಗೂ ನ್ಯಾಯಾಲಯದ ಆದೇಶವಾಗಲೀ ಹಕ್ಕುದಾರಿಕೆಗೆ ಸಂಬ ಸಂಬಂಧಪಟ್ಟಂತಹ ಪತ್ರವನ್ನಾಗಲೀ ಠಾಣೆಗೆ ಕೊಟ್ಟಿರುವುದಿಲ್ಲ. ಈಗಲೂ ಸಹಾ ಭಯದ ವಾತವರಣ ನಿರ್ಮಿಸುತ್ತಿದ್ದು, ಇವರ ಮೇಲೆ ಕಾನೂನ್ಯಾತಕವಾಗಿ ಕ್ರಮ ಕೈಗೊಳ್ಳುವುದರ ಜೊತೆಗೆ ರಕ್ಷಣೆಯನ್ನು ಕೊಡಬೇಕಾಗಿ ಕೇಸರಿ ಪಡೆ ಮನವಿಯಲ್ಲಿ ವಿನಂತಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/4056

Related Articles

Leave a Reply

Your email address will not be published. Required fields are marked *

Back to top button