ಎರಡು ವಿಡಿಯೋ ಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಎರಡು ವಿಡಿಯೋಗಳ ವಿರುದ್ಧ ದೊಡ್ಡಪೇಟೆ ಮತ್ತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಂದು ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೋರ್ವನಿಗೆ ಆಯುಧಗಳಿಗೆ ಹಲ್ಲೆ ನಡೆಸಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿವಿಟ್ಟು ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಎಂದಿರುವುದು.
ಮತ್ತೊಂದು ಹಜರತ್ ಟಿಪ್ಪು ಸುಲ್ತಾನ್ ವಿಡಿಯೋವನ್ನ ಬೇರೊಂದು ಕೋಮುವನ್ನ ಧಮನಗೊಳಿಸಿ ತಮಗೆ ಇಷ್ಟ ಇರುವ ಕೋಮನ್ನ ಬೆಂಬಲ ತೋರಿಸುವಂತೆ ಬಿಂಬಿಸಿರುವ ವಿಡಿಯೋ ವಿರುದ್ಧ ದೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮತ್ತು ಗ್ರೀನ್ ಶಾಟ್ ಪ್ರತಿ ಹರಿದಾಡುತ್ತಿದ್ದು ಅದನ್ನು ಪರಿಶೀಲಿಸಿದ ಪೊಲೀಸರು ಗ್ರೀನ್ ಶಾಟ್ ಪ್ರತಿಯಲ್ಲಿ ಕರ್ನಾಟಕ ರಾಜ್ಯ ಕೇಸರಿ ಪಡೆ(ರಿ) ಎಂದು ಇದ್ದು ಕೆಳಭಾಗದಲ್ಲಿ, ಮೊಬೈಲ್ ನಂಬರ್ ಇರುತ್ತದೆ ಸದರಿ ವಿಡಿಯೋವನ್ನು ನೋಡಲಾಗಿ ಒಬ್ಬ ವ್ಯಕ್ತಿಗೆ ಹೊಟ್ಟೆ, ಎದೆ ಕೈಗೆ ಆಯುಧದಿಂದ ಹಲ್ಲೆ ಮಾಡಿ ರಕ್ತಗಾಯವಾಗಿದ್ದು, ಆತನು ಶಿವಮೊಗ್ಗ ಹುಡುಗರು ಇರ್ಫಾನ್ ಜುಭಿ ಮತ್ತು ಸಾತು ಇವರು ಸಹರ ಪೆಟ್ರೋಲ್ ಬಂಕ್ ಬಳಿ ಹಲ್ಲೆ ಮಾಡಿರುತ್ತಾರೆ ಎಂಬ 30 ಸೆಕೆಂಡ್ಸ್ ಗಳ ವಿಡಿಯೋ ಹರಿಬಿಡಲಾಗಿತ್ತು.
ಚಿಕ್ಕಮಗಳೂರು ಜಿಲೆ, ಸರಹದ ಪೆಟ್ರೋಲ್ ಬಂಕ್ ಬಳಿ ಹಲ್ಲೆ ನಡೆಸಿರುವ ವಿಡಿಯೋ ಹಳೇಯ ವಿಡಿಯೋ ತುಣುಕಾಗಿದ್ದು, ಆದರೆ ಕೆಲವು ಕಿಡಿಗೇಡಿಗಳು ತಿರುಚಿದ ವಿಡಿಯೋವೊಂದು ಹರಿಬಿಟ್ಟು ಈಗ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ದೊಡ್ಡಪೇಟೆ ಪೊಲೀಸರು ಸುಮೋಟೋ ಪ್ರಕರಣದಾಖಲಾಗಿದೆ.
ಸೆನ್ ಠಾಣೆಯಲ್ಲಿ ದೂರು ದಾಖಲು
ಫೇಸ್ ಬುಕ್ ನಲ್ಲಿ Zabi Ulla ಎಂಬ ಫೇಸ್ ಬುಕ್ ನಲ್ಲಿ Hazarat Tipu Sultan ಎಂದು ಬರೆದು ಅದರ ಕೆಳಗೆ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಟಿಪ್ಪು ಸುಲ್ತಾನ್ ಬಲಗೈಯಲ್ಲಿ ಖಡ್ಗ ಹಿಡಿದು ಎಡಗಾಲಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಆತನ ಬೆನ್ನಿನ ಮೇಲೆ ಇಸ್ಲಾಂ ಧ್ವಜವನ್ನು ನಿಲಿಸಿ ಇನ್ನೊಬ್ಬ ಹಿಂದೂ ಮನುಷ್ಯನ ರೀತಿ ಕಾಣುವ ಭಾವ ಚಿತ್ರದ ಎದೆಯ ಮೇಲೆ ಮಂಡಿಯೂರಿ ಒಂದು ವರ್ಗವನ್ನು ಹಿಂಸೆಗೆ ಪ್ರಚೋದಿಸುವ ಕಟೌಟ್ ನ ವಿಡಿಯೋ ಮಾಡಿ ಅದಕ್ಕೆ ಯಾವುದೋ ಒಂದು ಹಿಂದಿ ಸಿನಿಮಾದ ಹಾಡನ್ನು ವಿಡಿಯೋಗೆ ಬಾಗ್ರೆಂಡ್ ಸಾಂಗ್ ಹಾಕಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಇದರ ವಿರುದ್ಧ ಸೆನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/882
