ಸ್ಥಳೀಯ ಸುದ್ದಿಗಳು

ಮೆಗ್ಗಾನ್ ನಲ್ಲಿ ಪತ್ರಕರ್ತರಿಗೆ ನಿರ್ಬಂಧ-ಕಾರಣ ಕೇಳಿದ್ರೆ ನೀವು ಸುಸ್ತಾಗ್ತೀರ!

ಸುದ್ದಿಲೈವ್/ಶಿವಮೊಗ್ಗ

ಪತ್ರಕರ್ತರಿಗೆ ಮೆಗ್ಗಾನ್ ನಲ್ಲಿ ನಿರ್ಬಂಧಿಸಲಾಗುತ್ತಿದೆ. ಸುದ್ದಿಗೆ ತೆರಳುವ ಪತ್ರಕರ್ತರಿಗೆ ಯಕಶ್ಚಿತ್ ನೋಟೀಸ್ ಅಂಟಿಸದೆ ಕೇವಲ ಸೆಕ್ಯೂರಿಟಿಗಳಿಂದ ಪತ್ರಕರ್ತರನ್ನ ತಡೆಯುವ ದುಸ್ಸಾಹಸಕ್ಕೆ ಮೆಗ್ಗಾನ್ ಮುಂದಾಗಿದೆ.

ಪತ್ರಕರ್ತರನ್ನ ಬಿಟ್ಟರೆ ತಾನೆ ಸುದ್ದಿ ಹೊರಗೆ ಬರುವುದು ಎಂಬ ಕಾರಣಕ್ಕೆ ಪತ್ರಕರ್ತರನ್ನೇ ತಡೆಯುವ ಹುನ್ನಾರ ನಡೆದಿದೆಯಾ ಎಂಬ ಶಂಕೆ ಮೂಡಿದೆ. ಅನುಸರಿಸುವ ಕಾನೂನುಗಳನ್ನ ಪಾಲಿಸದೆ ಕೇವಲ ಸೆಕ್ಯೂರಿಟಿಯವರನ್ನ ಬಿಟ್ಟು ಸುದ್ದಿಗೆ ಅಡ್ಡಿಪಡಿಸಲಾಗುತ್ತಿದೆ. ಇದನ್ನ ಮೆಗ್ಗಾನ್ ಅಧೀಕ್ಷಕರ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದವರ, ಅಥವ ರೋಗಿಗಳ ಸಂಬಂಧಿಕರ ಜೊತೆ ಮಾಧ್ಯಮ ಹೇಳಿಕೆ ಪಡೆಯಲು ಈ  ಡಿಜಿಟಲ್  ಪತ್ರಿಕೋಧ್ಯಮಕ್ಕೆ ಬಂದಾಗಿನಿಂದಲೂ ಹೋಗಿ ಬರುತ್ತಿದ್ದೇವೆ. ಯಾವುದೇ ನಿರ್ಬಂಧಗಳಿರಲಿಲ್ಲ. ಸಾರ್ವಭೌಮತ್ವದ ಆಡಳಿತವಿದ್ದಾಗಲೂ ಪತ್ರಕರ್ತರಿಗೆ ಮೆಗ್ಗಾನ್ ನಲ್ಲಿ ನಿರ್ಬಂಧವಿರಲಿಲ್ಲ. ಅವಕಾಶವಿತ್ತು.

ಯಾವುದೇ ಅಡತಡೆಗಳಿರಲಿಲ್ಲ. ಆದರೆ ಮೊನ್ನೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲರು ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಗೆ ಬಂದು ಹೋದ ನಂತರ ಪತ್ರಕರ್ತರನ್ನ ಸುದ್ದಿಗಾಗಿ ಮೆಗ್ಗಾನ್ ನಲ್ಲಿ ತಡೆಯಲಾಗಿದೆ. ಕಾರಣ ತುಂಬ ಸರಳ, 2023 ನೇ ಇಸವಿಯ ನವೆಂಬರ್11 ರಂದು  ಸಚಿವ ಶರಣಪ್ರಕಾಶ್ ಪಾಟೀಲ್ ಶಿವಮೊಗ್ಗದ ಮೆಗ್ಗಾನ್ ನಲ್ಲಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಬಂದಿದ್ದರು.

ಈ ವೇಳೆ ಮೆಗ್ಗಾನ್ ನ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳ ಜೊತೆ ಪತ್ರಿಕಾಗೋಷ್ಠಿ ನಡೆಸಿದ್ರು. ಪತ್ರಿಕಾಗೋಷ್ಠಿಯ ವೇಳೆ ಔಷಧಗಳ ಅಲಭ್ಯತೆ, ವೈದ್ಯರ ಅಲಭ್ಯತೆ, ಭೋಧನಾ ಆಸ್ಪತ್ರೆ ಆಗಿದ್ದರೂ  ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರೋಗಿಗಳ ಶಿಫಾರಸು ಮಾಡುವುದು. ಔಟ್ ಸೋರ್ಸ್ ಎಂಬ ಲಾಭಿ ಹೀಗೆ ಸಾಲು ಸಾಲು ಪತ್ರಕರ್ತರ ಪ್ರಶ್ನೆಗಳಿಗೆ ಸಚಿವ  ಡಾ.ಶರಣಪ್ರಕಾಶ್ ಪಾಟೀಲರೆ ಕಂಗಾಲು ಆಗಿದ್ದರು.

ವೈದ್ಯರು ಬರೆದುಕೊಡುವ ಮೆಡಿಸಿನ್ ಗಳೇ ಮೆಗ್ಗಾನ್ ನಲ್ಲಿ ಸಿಗೊಲ್ಲ. ವೈದ್ಯರು ಆರಾಮಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ ಜೊತೆಯಲ್ಲಿ ಮೆಗ್ಗಾನ್ ನಲ್ಲಿ ಸಂಬಳಪಡೆಯುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆ  ಸಚಿವರಿಗೆ ಇರಿಸು ಮುರಿಸು ತಂದಿದ್ದು ನಿಜ!  ಅಂಥ್ರೊಪಾಲಜಿ , ಆಂದ್ರೋಗ್ರಾಪಿಕ್, ಲ್ಯಾಬ್ ಟೆಕ್ನಿಷಿಯನ್ ಗಳು ನೇಮಿಸಲಾಗಿದೆಯೇ ಎಂಬ ಮಾಧ್ಯಮ ಪ್ರಶ್ನೆಗಳಿಗೆ ಸಚಿವರಿಂದ ಸಿದ್ದ ಉತ್ತರಗಳು  ಕೇಳಿ ಬಂದಿತ್ತು ಬಿಟ್ಟರೆ, ಯಾವುದೂ ಖಚಿತ ಮಾಹಿತಿ ಹೊರಬೀಳಲಿಲ್ಲ.

ಈ ಎಲ್ಲಾ ಪ್ರಶ್ನೆಗಳು ಸಚಿವರವರೆಗೆ ಹೇಗೆ ಕೇಳಲಾಯಿತು? ಪತ್ರಕರ್ತರು ಆಸ್ಪತ್ರೆಯ ಒಳಗೆ ಬಿಟ್ಟುಕೊಂಡ ಕಾರಣ ಎಂಬ ಸರಳ ಉತ್ತರ ಕಂಡುಕೊಂಡ ಆಡಳಿತ ಮಂಡಳಿ ಪತ್ರಕರ್ತರನ್ನೇ ನಿರ್ಬಂಧಿಸಲು ಮುಂದಾಗಿದ್ದಾರೆ. ಆದರೆ ಸಬೂಬು ಮಾತ್ರ ಬೇರೆಯದ್ದೇ ಇದೆ.

ಮಾಧ್ಯಮಗಳ‌ ಬೈಟ್ ನಿಂದ ಅನ್ಯರೋಗಿಗಳಿಗೆ ತೊಂದರೆ ಆಗುತ್ತೆ ಎಂಬ ಸಬೂಬು ಕೊಡಲಾಗುತ್ತಿದೆ. ಮಾಧ್ಯಮದವರು ಒಂದು ಪ್ರಕರಣದ ಮಾಧ್ಯಮ ಹೇಳಿಕೆ ಪಡೆಯುವ ವೇಳೆ ಇತರೆ ರೋಗಿಗಳು ಅಥವಾ ರೋಗಿಗಳ ಸಂಬಂಧಿಕರು ಸಹ ನಮ್ಮ ಸಮಸ್ಯೆ ಇದೆ. ನಮ್ಮ ಸುದ್ದಿಯನ್ನೂ ಮಾಡಿ ಎಂಬ ಕೋರಿಕೆಗಳು ಕೇಳಿ ಬಂದಿವೆ. ಹಾಗಾಗಿ ಮೆಗ್ಗಾನ್ ಆಡಳಿತ ಮಂಡಳಿ ಕೊಡುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ.

ಈ ರೀತಿಯ ನಿರ್ಬಂಧಕ್ಕೆ ಸೂಕ್ತ ಕಾರಣ ನೀಡಿ ನೋಟೀಸ್ ಅಂಟಿಸಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಬಾಯಿಯಲ್ಲಿ ಅದರಲ್ಲೂ ಗುತ್ತಿಗೆ ಆಧಾರದ ಮೇಲೆ ಇರುವ ಸೆಕ್ಯೂರಿಟಿಯ ಮೂಲಕ ಪತ್ರಕರ್ತರನ್ನ ತಡೆಯೋದು ಎಷ್ಟು ಸರಿ? ಪತ್ರಕರ್ತರನ್ನ ತಡೆಯುವ ಬದಲು ಆಸ್ಪತ್ರೆಯಲ್ಲಿ ಮೈ ಹೊದ್ದಿಕೊಂಡಿರುವ ಸಮಸ್ಯೆಗಳನ್ನ ಬಗೆಹರಿಸಿ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿ… ನಿರ್ಬಂಧಿಸಲೇ ಬೇಕೆಂದರೆ ಸೂಕ್ತ ಕಾರಣಗಳೊಂದಿಗೆ ನೋಟೀಸ್ ಅಂಟಿಸಿ.

ಇದನ್ನೂ ಓದಿ-https://suddilive.in/archives/5984

Related Articles

Leave a Reply

Your email address will not be published. Required fields are marked *

Back to top button