ಸ್ಥಳೀಯ ಸುದ್ದಿಗಳು

ನಾಳೆ ನವ್ಯಶ್ರೀ ಸಭಾಂಗಣದಲ್ಲಿ ಉಚಿತ ಚಲನಚಿತ್ರ ಪ್ರದರ್ಶನ

ಸುದ್ದಿಲೈವ್/ಶಿವಮೊಗ್ಗ

ಇತ್ತೀಚೆಗೆ ಬಿಡುಗಡೆಯಾಗಿ ಪರಿಸರಾಸಕ್ತರ ಗಮನ ಸೆಳೆದ *’ಜಲಪಾತ’* ಚಲನಚಿತ್ರದ ಉಚಿತ ಪ್ರದರ್ಶನ ಹಾಗೂ ವೀಕ್ಷಣೆಯನ್ನು ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ನಾಳೆ ( ಮಾ.3l ಸಂಜೆ 6.30 ಗಂಟೆಗೆ ಏರ್ಪಡಿಸಲಾಗಿದೆ.

ಮಲೆನಾಡಿಗರೇ ನಿರ್ಮಿಸಿ, ನಿರ್ದೇಶಿಸಿದ ಈ ಸಿನಿಮಾದ ಮುಕ್ತ ವೀಕ್ಷಣೆಯನ್ನು ಸಾರ್ವಜನಿಕರು ಹಾಗೂ ಪರಿಸರಾಸಕ್ತರಿಗಾಗಿ ಏರ್ಪಡಿಸಲಾಗಿದೆ.
ಮಲೆನಾಡಿನಲ್ಲಿ ಇತ್ತೀಚೆಗೆ ಆಗುತ್ತಿರುವ ಪರಿಸರ ವೈಪರೀತ್ಯಗಳ ಕಾರಣ ಅಲ್ಲಿನ ಜನ ಜೀವನದ ಮೇಲಿನ ಅಡ್ಡ ಪರಿಣಾಮಗಳನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ಬಿಂಬಿಸಲಾಗಿದೆ. ಪರಿಸರಪ್ರೇಮಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ನ ನಾಗೇಶ್ ಎಂ.ವಿ. ಕೋರಿದ್ದಾರೆ.

ಇಂದು ಮಾನವ ಜನಾಂಗಕ್ಕೆ ದೊಡ್ಡ ಸವಾಲಾಗಿ ಎದುರು ನಿಂತಿರುವ ಭೂತಾಕಾರದ ಸಮಸ್ಯೆ ಎಂದರೆ ಅದು ಪರಿಸರ ನಾಶ ಹಾಗೂ ಮಾಲಿನ್ಯ . ನಾವು ಕುಡಿಯುವ ನೀರು, ಸೇವಿಸುವ ಆಹಾರ, ಉಸಿರಾಡುವ ಗಾಳಿ ಪ್ರತಿಯೊಂದು ಕಲುಷಿತಗೊಂಡು ಜೀವನ ದುರ್ಭರವಾಗಿದೆ. ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಾನವ ಎಷ್ಟೇ ಮುಂದುವರೆದರೂ ನಮ್ಮ ಅಸಡ್ಡೆ, ಅಜ್ಞಾನದ ಕಾರಣ ಪರಿಸರ ನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಈ ಉಚಿತ ವೀಕ್ಷಣೆಗೆ ಆಸಕ್ತರು ತಮ್ಮ ಹೆಸರನ್ನು .98442 82504, 94481 39271.ನೊಂದಾಯಿಸಲು ಕೋರಲಾಗಿದೆ.

ಇದನ್ನೂ ಓದಿ

ಸೂಡಾ ನೂತನ ಅಧ್ಯಕ್ಷ ಸುಂದರೇಶ್ ಜಾತ್ಯಾತೀತ ನಾಯಕರಾ? ಒಂದು ಜಾತಿಗೆ ಸೀಮಿತರಾದವರಾ?

Related Articles

Leave a Reply

Your email address will not be published. Required fields are marked *

Back to top button