ಕ್ರೈಂ ನ್ಯೂಸ್

ಮರ ಕಡಿದ ವಿಚಾರ-ನಾಲ್ವರನ್ನ ವಿಚಾರಣೆಗೆ ಕರೆತಂದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಹೊಸ ಜಂಬರಘಟ್ಟೆಯ ಖಬರ್ ಸ್ಥಾನದ ಜಾಗದಲ್ಲಿನ ಮರ ಕಡಿದ ವಿಚಾರಕ್ಕೆ ನಡೆದ ಹಲ್ಲೆ ಪ್ರಕರಣದಲ್ಲಿ ನಿನ್ನೆ ಹೊಳೆಹೊನ್ನೂರು ಠಾಣೆಯ ಮುಂದೆ ಭಾರಿ ಜನ ಸೇರ್ಪಡೆಗೊಂಡಿದ್ದು ಹಲ್ಲೆ ನಡೆಸಿವರನ್ನ ಬಂದಿಸುತೆ ಆಗ್ರಹಿಸಲಾಗಿತ್ತು. ಈ ಪ್ರರಣದಲ್ಲಿ ಪಲೀಸರು ವಿಚಾರಣೆಗಾಗಿ ನಾಲ್ವರನ್ನ ಠಾಣೆಗೆ ಕರೆದುಕೊಂಡು ಬಧಿದ್ದಾರೆ.

ಹೊಸ ಜಂಬರಘಟ್ಟೆಯ ರವಿ ಎಂಬಾತ ಜೀವನೋಪಾಯಕ್ಕಾಗಿ ಕುರಿಗಳನು ಸಾಕಿಕೊಂಡಿದ. ಮನೆಯಲ್ಲಿ ಕುರಿ ಕಟ್ಟುವ ಗೂಟ ಮುರಿದ ಕಾರಣ ಹೊಸ ಗೂಟ ಹುಡುಕಾಡಿಕೊಂಡು ಹೋದಾಗ ಖಬರ್ ಸ್ಥಾನದ ಬಳಿ ಇದ್ದ ಅಕೆಶಿಯ ಮರದಿಂದ ಕೊಂಬೆಯೊಂದನ್ನು ಕಡಿದಿದ್ದಾನೆ.

ರವಿ ಮರ ಕಡಿಯುವುದನ್ನು ಕಂಡ ಕೆಲ ಮುಸ್ಲಿಂ ಯುವಕರು ರವಿಯನ್ನು ತಡೆದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ ಕೆಲವರು ಸಮಾದಾನ ಪಡಿಸಿ ಪ್ರಕರಣ ಗ್ರಾಮ ಸಮಿತಿಯಯ ಬಳಿ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮ ಸಮೀತಿಯವರು ಸಣ್ಣದನ್ನೆ ದೊಡ್ಡದು ಮಾಡಿಕೊಂಡು ಹೋಗುವುದು ಬೇಡವೆಂದು ಎರಡು ಕಡೆಯವರಿಗೂ ತಿಳಿ ಹೇಳಿ ಎಲ್ಲರು ಇಲ್ಲಿಗೆ ಸುಮ್ಮನಾಗಿ ಎಂದು ಹೇಳಿ ಕಳಿಸಿದ್ದಾರೆ.

ಮರ ಕಡಿದ ವಿಚಾರ ಗ್ರಾಮ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಲ್ಲಿ ಇತ್ಯಾರ್ಥವಾಗಿದ್ದರೂ ಸುಮ್ಮನಾಗದ ಕೆಲ ಯುವಕರು ರವಿ ಮನೆ ಬಳಿ ಹೋಗಿ ಸಣ್ಣದಾಗಿ ಗಲಾಟೆ ಮಾಡಿದ್ದಾರೆ. ಗಲಾಟೆ ವಿಷಯ ಅಕ್ಕ ಪಕ್ಕದವರಿಗೆ ತಿಳಿದು ಗ್ರಾಮದಲ್ಲಿ ಜನ ಜಮಾಯಿಸಿದ್ದಾರೆ. ತಳ್ಳಾಟ ನೂಕಾಟದಲ್ಲಿ ಎರಡು ಕಡೆಯವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗುತ್ತಿದೆ.

ಎರಡು ಕೋಮ್ಮಿನ ಕಡೆಯವರು ಠಾಣೆಗೆ ಬಂದು ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರೆ. ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದು ಹೊಸ ಜಂಬರಘಟ್ಟೆ ಮಹಿಳೆಯರು ಠಾಣೆಯಲ್ಲಿ ಕುಳಿತ್ತಿದ್ದಾರೆ. ಗಲಾಟೆಯಲ್ಲಿ 6-7 ಜನರಿಗೆ ಗಾಯಾಗಳು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8430

Related Articles

Leave a Reply

Your email address will not be published. Required fields are marked *

Back to top button