ಆರ್ ಎಂ ಎಂನವರ ಮೂರು ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಈಡಿ ಅಧಿಕಾರಿಗಳಿಂದ ದಾಳಿ.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಈಡಿ ಅಧಿಕಾರಿಗಳಿಂದ ದಾಳಿ ನಡೆಸಿದೆ. ಈ ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನಿಗೆ ಈಡಿ ಶಾಕ್.ನೀಡಿದೆ.
ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕರಾದ ಆರ್.ಎಂ.ಮಂಜುನಾಥ್ ಗೌಡರ ಮನೆ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿರುವ ಕರಕುಚ್ಚಿ ಮತ್ತು ಕಲ್ಲುಕೊಪ್ಪ ಗ್ರಾಮದಲ್ಲಿರುವ ನಮನೆಗಳ ಮೇಲೆ ಈಡಿ ದಾಳಿ ನಡೆದಿದೆ.
5 ಕ್ಕೂ ಹೆಚ್ಚು ವಾಹನಗಳಲ್ಲಿ 15 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ. ಶಿವಮೊಗ್ಗದ ಶರಾವತಿ ನಗರ, ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಮಂಜುನಾಥ್ ಗೌಡ ಮನೆಯ ಮೇಲೂ ದಾಳಿ ನಡೆದಿದೆ.ಜೊತೆಗೆ ತೀರ್ಥಹಳ್ಳಿ ತಾಲ್ಲೂಕಿನ ಕರಕುಚ್ಚಿ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿದೆ.
ಮನೆಗಳ ಮೇಲೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆಯನ್ನ ಈಡಿ ಅಧಿಕಾರಿಗಳು ನಡೆಸುತ್ತಿವೆ. ಪ್ರತ್ಯೇಕ ಫೋರ್ಸ್ ನೊಂದಿಗೆ ದಾಳಿಗೆ ಬಂದಿರುವ ಈಡಿ ಟೀಂ.ತೀರ್ಥಹಳ್ಳಿ ಮನೆಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಆರ್ ಎಂ ಗಾಗಿ ಈಡಿ ಅಧಿಕಾರಿಗಳು ಕಾಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ ತನಿಖೆ ಸಂಬಂಧ ಈಡಿ ದಾಳಿ ನಡೆದಿದೆ ಎನ್ನಲಾಗಿದೆ. ಕೆಲ ತಿಂಗಳ ಹಿಂದೆಯೇ ಈ ಸಂಬಂಧ ಡಿಸಿಸಿ ಬ್ಯಾಂಕ್ ನಿಂದ ಈಡಿ ಮಾಹಿತಿ ಕೇಳಿತ್ತು. ಇದೀಗ ದಾಳಿ ಮಾಡಿ, ತನಿಖೆ ಆರಂಭಿಸಿದ ಈಡಿ ಟೀಂ.
ಶರಾವತಿ ನಗರದಲ್ಲಿರುವ ಮನೆಯ ಮೇಲೂ ದಾಳಿ
ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡೆ ಶರಾವತಿ ನಗರದಲ್ಲಿರುವ ಮನೆಗೆ ಮೂರು ವಾಹನದಲ್ಲಿ ಬಂದಿರುವ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆಯ ಮೂರು ಕೋಣೆಗಳ ಪೈಕಿ ಎರಡಕ್ಕೆ ಬೀಗ ಹಾಕಲಾಗಿದೆ. ಮನೆಯಲ್ಲಿ ಕೆಲಸವರು ಮಾತ್ರ ಇರುವ ಹಿನ್ನೆಲೆಯಲ್ಲಿ.ಮಂಜುನಾಥ್ ಗೌಡರನ್ನು ಕರೆತರಲು ತೀರ್ಥಹಳ್ಳಿ ಗೆ ಅಧಿಕಾರಿಗಳು ತೆರಳಿದ್ದಾರೆ ಎನ್ನಲಾಗಿದೆ. ರೂಂ ಬೀಗ ತೆಗೆದು ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ.
ಇದನ್ನೂ ಓದಿ-https://suddilive.in/archives/543
