ಗಲಭೆ ನಡೆಸಿದವರಿಗೆ ಕಾನೂನು ಅಡಿಯಲ್ಲಿ ಕ್ರಮ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಕಲ್ಲು ತೂರಾಟ ನಡೆದ ವಿಚಾರದಲ್ಲಿ ಗಾಯಗೊಂಡ ಗಾಯಾಳುಗಳನ್ನ ಮತ್ತು ಗಲಭೆ ಸ್ಥಳಕ್ಕೆ ಇಂದು ಮಧು ಬಂಗಾರಪ್ಪ ಭೇಟಿಯಾಗಿ ಪರಿಶೀಲನೆ ನಡೆಸಿದರು.
ಕಲ್ಲು ತೂರಾಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವರು ಗಾಯಗೊಂಡವರ ಬಳಿ ಘಟನೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದರು. ಸಚಿವರಿಗೆ ಸಾಥ್ ನೀಡಿದ ಡಿಸಿ ಆರ್.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ತಿಮ್ಮಪ್ಪ ಸಾಥ್ ನೀಡಿದ್ದಾರೆ.
ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ, ರಾಗಿಗುಡ್ಡದ ಘಟನೆ ಆದ ಸಂದರ್ಭದಲ್ಲಿ ಮಡಿಕೇರಿಯಲ್ಲಿದ್ದೆ. ಗಣೇಶ ವಿಸರ್ಜನೆ ಅದ್ದೂರಿಯಾಗಿ ನಡೆಯಿತು. ರಾಗಿಗುಡ್ಡದಲ್ಲಿ ಕೆಲವರು ಘಟನೆಗೆ ಕಾರಣರಾಗಿದ್ದಾರೆ ಎಂದರು.
ಗಲಭೆಗೆ ಸಂಬಂಧಿಸಿದಂತೆ 60 ಜನರನ್ನು ಅರೆಸ್ಟ್ ಮಾಡಲಾಗಿದೆ. ಮೂಗು ಪ್ಯಾಕ್ಚರ್ ಆಗಿರೋದು ಒಂದು ಕೇಸ್ ಇದೆ. ಘಟನೆ ಯಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಬಯಸುತ್ತೇನೆ ಎಂದರು.
ಯಾರೋ ಕಿಡಿಗೇಡಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸಿ ಎಂ ಜೊತೆ ಮಾತನಾಡಿದಾಗ 144 ಸೆಕ್ಷನ್ ಹಾಕೋದು ಒಳ್ಳೆಯದು ಎಂದರು. ಅದರಂತೆ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಅದರಲ್ಲಿ ಈಗ ಕೆಲವು ಕಡೆ ಸಡಿಲ ಮಾಡಿದ್ದೇವೆ. ಗಲಭೆಯಾದ ಕಡೆ ಸ್ಟಿಕ್ಟ್ ಆಗಿ ನಿಭಾಯಿಸಲು ಸೂಚಿಸಿದ್ದೆನೆ ಎಂದರು.
ಎಲ್ಲಾ ಪಕ್ಷ ಧರ್ಮ ಬಿಟ್ಟು ಕಾನೂನು ಅಧಿಕಾರ ವ್ಯಾಪ್ತಿಯಲ್ಲಿ ಈ ಪ್ರಕರಣ ನೋಡುತ್ತೇನೆ. ಯಾರನ್ನು ಪ್ರಕರಣದಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ತೊಂದೆರೆ ಮಾಡಿರುವವರನ್ನು ಕಾನೂನು ಪ್ರಕಾರ ಶಿಕ್ಷಿಸುತ್ತೆವೆ. ಅಧಿಕಾರಿ ವರ್ಗದವರಿಗೆ ಎಲ್ಲಾ ಪವರ್ ಕೊಟ್ಟಿದ್ದೆವೆ ಅವರು ನಿಭಾಯಿಸುತ್ತಾರೆ. ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ-https://suddilive.in/2023/10/02/ಶಿವಮೊಗ್ಗದಲ್ಲಿ-ಯಾವುದೇ-ಕೊತ/
