ಈ ಬಾರಿ ಬನ್ನಿ ಕಡಿಯುವ ಅದೃಷ್ಟ ಯಾವ ತಹಶೀಲ್ದಾರ್ ಗೆ?

ಸುದ್ದಿಲೈವ್/ಶಿವಮೊಗ್ಗ

ಈ ಬಾರಿಯ ಬನ್ನಿ ಕಡಲಿಯುವ ಅದೃಷ್ಟಶಾಲಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಯಾರು ಎಂಬ ಚರ್ಚೆ ಆರಂಭವಾಗಿದೆ. ಮೈಸೂರಿನಲ್ಲಿ ನಡೆಯುವ ದಸರಾ ಹಬ್ವದಂತೆ ಶಿವಮೊಗ್ಗದಲ್ಲಿಯೂ ಸಹ ದಸರಾ ಅಷ್ಟೇ ವೈಭವ ಮತ್ತು ಸಂಭ್ರಮದಿಂದ ಹಬ್ಬ ನಡೆಯಲಿದೆ.
ಈ ಹಬ್ಬವನ್ನ ಕಳೆದ ಐದಾರು ವರ್ಷದಿಂದ ಇತ್ತೀಚೆಗೆ ಫ್ರೀಡಂ ಪಾರ್ಕ್ ನಲ್ಲಿ ಆಚರಿಸಲಾಗುತ್ತಿತ್ತು. ಈ ಹಬ್ಬವನ್ನ ಈ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ಆಚರಿಸಲಾಗುತ್ತಿತ್ತು. ನಗರ ಬೆಳೆದಂತೆ ಕ್ರೀಡಾಂಗಣದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಡುವ ದೃಷ್ಠಿಯಿಂದ ಇದನ್ನ ಡಿಎಆರ್ ಗ್ರೌಂಡ್ ನಲ್ಲಿ ಆಚರಿಸಲಾಗುತ್ತಿತ್ತು. ಕಳೆದ ಮೂರು ನಾಲ್ಕು ವರ್ಷದಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಆಚರಿಸಲಾಗುತ್ತಿದೆ.
ಅದರಂತೆ ವಿಜಯದಶಮಿ ದಿನ ನಗರದಲ್ಲಿ ವಿಜೃಂಭಣೆಯ ದಸರಾ ಮೆರವಣಿಗೆ ನಡೆದು ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಮುರಿಯುವ ಕಾರ್ಯಕ್ರಮದೊಂದಿಗೆ ನವರಾತ್ರಿ ಕೊನೆಗೊಳ್ಳಲಿದೆ. ಪ್ರತಿ ವರ್ಷವೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬರುವ ಖಡ್ಗದಿಂದ ತಹಶೀಲ್ದಾರ್ ಬನ್ನಿ ಮುರಿಯಲಿದ್ದಾರೆ.
ಆದರೆ ಈ ಬಾರಿ ಶಿವಮೊಗ್ಗದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್ ನಿಕ್ಕಂ ಬನ್ನಿ ಮುರಿಯಲಿದ್ದಾರಾ ಎಂಬ ಚರ್ಚೆಗೆ ಬ್ರೇಕ್ ಬಿದ್ದಿದೆ. ಕಾರಣ ಅಧಿಕ ಆಸ್ತಿ ಗಳಿಕೆಯ ಆರೋಪದ ಅಡಿ ಅಮಾನತ್ತುಗೊಂಡ ತಹಶೀಲ್ದಾರ್ ಡಾ.ನಾಗರಾಜ್ ಎನ್ ಜೆ ಮತ್ತೆ ಶಿವಮೊಗ್ಗ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.
ಇಂದು ಮಧ್ಯಾಹ್ನ ನಾಗರಾಜ್ ಅವರು ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ವಿಜಯ ದಶಮಿ ಹಬ್ಬಕ್ಕೆ ನಾಲ್ಕೈದು ದಿನ ಬಾಕಿ ಉಳಿದಿರುವ ಹಿನ್ನಲೆಯಲ್ಲಿ ನಾಗರಾಜ್ ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ ಬನ್ನಿ ಮುರಿಯುವ ಅದೃಷ್ಠ ಅವರಿಗೆ ಒಲಿಯಲಿದೆ. ನಾಗರಾಜ್ ಅವರ ಅಮಾನತ್ತಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಹಿನ್ನಲೆಯಲ್ಲಿ ಅವರ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ದೊರೆತಿದೆ.
ಇದನ್ನೂ ಓದಿ-https://suddilive.in/archives/1561
