ಬಗೆಹರಿಯದ ಮೆಗ್ಗಾನ್ ಸಮಸ್ಯೆ-ಮಾಧ್ಯಮಗಳ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವರೇ ಸುಸ್ತು!

ಸುದ್ದಿಲೈವ್/ಶಿವಮೊಗ್ಗ

ಮಾಧ್ಯಮಗಳ ಪ್ರಶ್ನೆಗಳ ಸುರಿಮಳೆಗೆ ವೈದ್ಯಕೀಯ ಶಿಕ್ಷಣ ಸಚಿವರೇ ಕಂಗಾಲಾಗಿದ್ದಾರೆ. ಕೇವಲ ಕಟ್ಟಡ ಬೆಳೆಯುತ್ತಿದೆ ಬಿಟ್ಟರೆ ವೈದ್ಯಕೀಯ ಸೌಲಭ್ಯಗಳು ಮರೀಚಿಕಿಕೆ ಆಗಿವೆ.
ಔಷಧಗಳ ಅಲಭ್ಯತೆ, ವೈದ್ಯರ ಅಲಭ್ಯತೆ, ಭೋಧನಾ ಆಸ್ಪತ್ರೆ ಆಗಿದ್ದರೂ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರೋಗಿಗಳ ಶಿಫಾರಸು ಮಾಡುವುದು. ಔಟ್ ಸೋರ್ಸ್ ಎಂಬ ಲಾಭಿ ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲರೆ ಕಂಗಾಲು ಆಗಿದ್ದಾರೆ.
ವೈದ್ಯರು ಬರೆದುಕೊಡುವ ಮೆಡಿಸಿನ್ ಗಳೇ ಮೆಗ್ಗಾನ್ ನಲ್ಲಿ ಸಿಗೊಲ್ಲ. ವೈದ್ಯರು ಆರಾಮಾಗಿ ಖಾಸಗಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ ಮೆಗ್ಗಾನ್ ನಲ್ಲಿ ಸಂಬಳಪಡೆಯುತ್ತಿದ್ದಾರೆ ಎಂಬ ಪ್ರಶ್ನೆ ಸಚಿವರಿಗೆ ಇರಿಸು ಮುರಿಸು ತಂದಿದ್ದು ನಿಜ! ಆದರೂ ಅಂಥ್ರೊಪಲಜಿ , ಆಂದ್ರೋಗ್ರಾಪಿಕ್, ಲ್ಯಾಬ್ ಟೆಕ್ನಿಷಿಯನ್ ಗಳು ನೇಮಿಸಲಾಗಿದೆ ಎಂಬ ಸಿದ್ದ ಉತ್ತರಗಳು ಸಚಿವರಿಂದ ಕೇಳಿ ಬರುತ್ತದೆ ಬಿಟ್ಟರೆ. ಇವುಗಳೇ ಸರಿಯಾಗ ಬೇಕಾದ ಪ್ರಾಥಮಿಕ ಹಂತಗಳು.
ಮೆಗ್ಗಾನ್ ಗೆ ಮೆಡಿಸಿನ್ ಮತ್ತು ವೈದ್ಯರ ಅಲಭ್ಯತೆ ಸಂಬಂಧ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಅದೆಷ್ಟೋ ಸಭೆಗಳನ್ನ ಕರೆದು ಸುಸ್ತಾಗಿ ಹೋಗಿದ್ದಾರೆ. ಈ ನಾಯಕರೆಲ್ಲಾ ಸ್ಥಳೀಯರೆ ಇವರಿಗೆ ಚಳ್ಳೆಹಣ್ಣು ತಿನಿಸಿದ ಮೆಗ್ಗಾನ್ ದೂರದ ಗುಲ್ಬರ್ಗದ ಶರಣಪ್ರಕಾಶ್ ಪಾಟೀಲ್ ರನ್ನ ನೀರು ಕುಡಿಸದೆ ಬಿಡುತ್ತಾ ಎಂಬ ಪ್ರಶ್ನೆ ಮೂಡಿಸಿದೆ
ಬಡಾವಣೆಗಳಲ್ಲಿ ತಲೆ ಎತ್ತುತ್ತಿರುವ ಆಸ್ಪತ್ರೆಗಳಿಗೆ ಸೂಕ್ತ ವೈದ್ಯ ಹಾಗೂ ಲ್ಯಾಬ್ ಟೆಕ್ನಿಷಿಯನ್ ಸಿಗ್ತಾರೆ ಆದರೆ ಬೃಹದಾಕಾರಣದ ಮೆಗ್ಗಾನ್ ಗೆ ಸೂಕ್ತ ವೈದ್ಯರು ಸಿಗೊಲ್ಲ ಅಂದರೆ ಖಾಸಗಿ ಆಸ್ಪತ್ರೆಗಳ ಲಾಭಿ ಎಷ್ಟರ ಮಟ್ಟಿಗೆ ಇದೆ ಎಂಬುದು ಗೊತ್ತಾಗುತ್ತೆ. ಇಂದು ಕ್ಯಾನ್ಸರ್ ಆಸ್ಪತ್ರೆಗೆ ಶಂಕುಸ್ಥಾಪನೆ ಕಾರ್ಯಕ್ರಮದ ವೇದಿಕೆಯ ಮೇಲೆ ಇದ್ದ ಶಿಕ್ಷಣ ವೈದ್ಯಕೀಯ ಸಚಿವರಿಗೆ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ ಔಟ್ ಸೋರ್ಸ್ ಬಗ್ಗೆ ಮಾತನಾಡಿ ಸಾಕಷ್ಟು ಬದಲಾವಣೆ ತರಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಹೆರಿಗೆ ವಾರ್ಡ್ ನಲ್ಲಿ ಹೆಣ್ಣು ಮಗು ಹುಟ್ಟಿದರೆ ಒಂದು ರೇಟು, ಗಂಡು ಮಗು ಹುಟ್ಟಿದರೆ ಒಂದು ರೇಟು ಇದೆ. ಹೆಣ್ಣು ಹುಟ್ಟಿದರೆ 1000 ಗಂಡು ಮಗು ಹುಟ್ಟಿದರೆ 2000 ರೂ.ನಡೆಯುತ್ತಿದೆ ಎಂದು ಪ್ರಶ್ನೆ ಕೇಳಿದ ಸಚಿವರು ವೈದ್ಯರು ಇಸ್ಕೋಂತಾರಾ? ವೈದ್ಯರ ಮುಂದೆ ಪಡೆಯುತ್ತಾರಾ ಎಂಬ ಮರು ಪ್ರಶ್ನೆಯನ್ನ ಹಾಕಿದ್ದಾರೆ. ವೈದ್ಯರ ಮುಂದೆ ಈ ಹಣದ ವ್ಯವಹಾರ ನಡೆಯದಿದ್ದರೂ ವೈದ್ಯರ ಹಿಂದೆ ಈ ವ್ಯವಹಾರ ನಡೆಯತ್ತೆ ಎಂಬುದು ಸಹ ಅಷ್ಟೇ ಸತ್ಯ.
ಹೀಗೆ ಮೆಗ್ಗಾನ್ ಅಲ್ಲಿರುವ ಕೆಲವರಿಗೆ ಮಾತ್ರ ಅನುಕೂಲವಾಗಿದೆ. ಹೋಗಲಿ,,ರೋಗಿಗಳಿಗೆ ಅನುಕೂಲವಿದೆಯಾ ಎಂದು ಕೇಳಿದರೆ ಸಿರಿಯಸ್ ಕೇಸ್ ಗಳೇ ಬದುಕುಳಿಯುವುದು ಕಷ್ಟ ಎನ್ನತ್ತಾರೆ ರೋಗಿಗಳ ಸಂಬಂಧಿಕರು. ಇಂತಹ ಸಭೆಗಳನ್ನ ಬಿಜೆಪಿ ನಡೆಸಿ ನಡೆಸಿ ಸುಸ್ತಾಗಿದೆ. ಈಗ ಕಾಂಗ್ರೆಸ್ ನ ಸರದಿ. ಆದರೆ ಫಲಿತಾಂಶ ಶೂನ್ಯ… ಈ ಘನಂಧಾರಿಗೆ ಮೆಗ್ಗಾನ್ ಬೇಕಾ?
ಇದನ್ನೂ ಓದಿ-https://suddilive.in/archives/2918
