ಸ್ಥಳೀಯ ಸುದ್ದಿಗಳು
ಬಿ.ಕೆ ಮೋಹನ್ ಗೆ ರಸ್ತೆ ಅಪಘಾತ

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ಶಾಸಕ ಸಂಗಮೇಶ್ವರ ಅವರ ಸಹೋದರ ಬಿಕೆ ಮೋಹನ್ ಅವರಿಗೆ ರಸ್ತೆ ಅಪಘಾತ ಸಂಭವಿಸಿದ್ದು ಸಧ್ಯಕ್ಕೆ ಸಣ್ಣಪುಟ್ಟ ಗಾಯಗಳಿಂದ ಮೋಹನ್ ಪಾರಾಗಿದ್ದಾರೆ.
ಹೊಸ ಸಿದ್ದಾಪುರ ಕೆರೆಯ ಬಳಿಯ ಚೌಡೇಶ್ವರಿ ದೇವಸ್ಥಾನದ ಬಳಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಂಪ್ಸ್ ಬಂದ ಕಾರಣ ವಾಹನ ನಿಧಾನವಾಗಿದೆ. ಹಿಂಬದಿಯಿಂದ ಬಂದ ಯುವಕರ ಮತ್ತೊಂದು ಇನ್ನೋವಾ ವಾಹನ ಡಿಕ್ಕಿ ಹೊಡೆದಿದೆ.
ಮೋಜು ಮಸ್ತಿಯಲ್ಲಿದ್ದ ಯುವಕರ ವಾಹನ ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಸಧ್ಯಕ್ಕೆ ಮೋಹನ್ ಅವರಿಗೆ ಕಣ್ಣಿನ ಭಾಗ ಮತ್ತು ತಲೆಯ ಭಾಗಕ್ಕೆ ಸಣ್ಣದೊಂದು ಗಾಯವಾಗಿದೆ. ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಪಡೆದು ಭದ್ರಾವತಿಗೆ ವಾಪಾಸಾಗಿದ್ದಾರೆ.
ಸಧ್ಯಕ್ಕೆ ದೂರು ದಾಖಲಾಗಿಲ್ಲ. ಸುದ್ದಿಲೈವ್ ಸುದ್ದಿಮೂಲದಿಂದ ಈ ಘಟನೆ ತಿಳಿದು ಬಂದಿದೆ. ಸಧ್ಯಕ್ಲೆ ಮೋಹನ್ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ-https://suddilive.in/archives/2043
