ಶೈಕ್ಷಣಿಕ ಸುದ್ದಿಗಳು

ಕುವೆಂಪು ವಿವಿಯ ಕುಲಸಚಿವರ ದಿಡೀರ್ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ಬದಲಾವಣೆ ಆಗಿದೆ. ಎರಡೇ ದಿನಕ್ಕೆ ಕುಲಸಚಿವರರನ್ನ ಬದಲಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಮೈಸೂರಿನ ಎಡಿಸಿ ಆಗಿದ್ದ ಶಿವರಾಜು ಪಿ ಅವರನ್ನ ಕುವೆಂಪು ವಿವಿಯ ಕುಲಸಚಿವರನ್ನಾಗಿ ನೇಮಿಸಿದ್ದ ಸರ್ಕಾರ ಆಂತರಿಕ ಬದಲಾವಣೆ ಮಾಡಿ ಯಾದಗಿರಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ವಿಜಯಕುಮಾರ್ ಹೆಚ್ ಬಿ ಅವರನ್ನ ಕುಲಸಚಿವರನ್ನಾಗಿ ನೇಮಿಸಿ ಆದೇಶಿದೆ.

ಈ ದಿಡೀರ್ ಬದಲಾವಣೆ ಯಾಕೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಶಿವರಾಜು ಪಿ ವರ್ಗಾವಣೆ ಎಲ್ಲಿ ಹೋದರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ರೀತಿ ಬದಾವಣೆ ಕುತೂಹಲ ಭರಿಸಿದೆ. ಶಿವಮೊಗ್ಗ ಜಿಪಂನ ಸಿಇಒ ಅವರು ವಿವಿಯ ಕುಲಸಚಿವರಾಗಿ(ಆಡಳಿತ) ನೇಮಕಗೊಂಡಿದ್ದರು.

ಇವರ ಪ್ರಭಾರ ಅಧಿಕಾರವನ್ನ ತೆಗೆದ ಸರ್ಕಾರ ಶಿವರಾಜು ಪಿ ಅವರನ್ನ ನೇಮಿಸಿತ್ತು ಎರಡೇ ದಿನಗಳಲ್ಲಿ ಮತ್ತೋರ್ವ ಕೆಎಎಸ್ ಗ್ರೇಡ್ ಅಧಿಕಾರಿಯನ್ನ ನೇಮಿಸಿ ಆದೇಶಿಸಿದೆ. ವಿಜಯ ಕುಮಾರ್ ಹೆಚ್ ಬಿ ಗೂ ಕುಸಚಿವರ ಹುದ್ದೆ ಸವಾಲಾಗಲಿದೆ.

ಇದನ್ನೂ ಓದಿ-https://suddilive.in/archives/8288

Related Articles

Leave a Reply

Your email address will not be published. Required fields are marked *

Back to top button