ಸ್ಥಳೀಯ ಸುದ್ದಿಗಳು

ಎನ್ ಹೆಚ್ ಎಂ ಬೇಡಿಕೆ ಬಹುಪಾಲು ಈಡೇರಿಕೆ-ಆಯನೂರು ಸ್ವಾಗತ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರ ನ್ಯಾಷನ್ ಹೆಲ್ತ್ ಮಿಷನ್ ಯೋಜನೆ ಅಡಿ ಕೆಲಸ ಮಾಡುವ ನೌಕರರ ಪ್ರಮುಖ ಬೇಡಿಕೆಯನ್ನ ಈಡೇರಿಸುತ್ತಿದ್ದು ಅವರ ವೇತನವನ್ನ ಶೇ15 ಕ್ಕೆ ಏರಿಸಲಾಗಿದೆ   ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊರಗುತ್ತಿಗೆದಾರರಿಗೆ ಮತ್ತು ವೈದ್ಯರು ಸೇರಿ 150 ಕೆಟಗರಿ ನೌಕರರಿಗೆ ಈ ಬೇಡಿಕೆ ಈಡೇರಿಕೆಯಾಗುತ್ತಿದೆ. ಆದರೆ ಏಜೆನ್ಸಿ ನೌಕರರು,  ಡಿಗ್ರೂಪ್ ನೌಕರರು, ಕಮ್ಯೂನಿಟಿ ಡಾಕ್ಟರ್ ಗಳಿಗೆ ಸಂಬಳದಲ್ಲಿ ಶೇ15% ಹೆಚ್ಚಿಸಲಾಗುತ್ತಿಲ್ಲ. 150 ವಿವಿಧ ವರ್ಗಗಳಿಗೆ ಸಂಬಳ ಹೆಚ್ಚಿಸಿರುವುದು, ವರ್ಗಾವಣೆ, ವಿಮೆ ಮೊದಲಾದ ಬೇಡಿಕೆಯನ್ನ‌ಕಾಂಗ್ರೆಸ್ ರಾಜ್ಯ ಸರ್ಕಾರ ಈಡೇರಿಸುತ್ತಿದೆ ಎಂದರು.

ಈ ಹಿಂದೆ ಎನ್ ಹೆಚ್ ಎಂ ನೌಕರರ ಪರ ಹೋರಾಟ ಮಾಡಲಾಗಿತ್ತು. ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಹೋರಾಟ ನಡೆಸಿದ್ದರ ಪರಿಣಾಮ ಶ್ರೀನಿವಾಸ್ ಆಚಾರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆರೋಗ್ಯ ಇಲಾಖೆ ಮತ್ತು ಎನ್ ಹೆಚ್ ಎಂ ಅವರ ಸ್ಥಿತಿ ಗತಿಗಳ ಬಗ್ಗೆ ವರದಿ ನೀಡಲು ಸರ್ಕಾರ ಸೂಚಿಸಿತ್ತು. ವರದಿ ಬಂದ ಮೇಲೂ ಬೊಮ್ಮಾಯಿ ಸರ್ಕಾರ ಯಾವುದೇ ತೀರ್ಮಾನಕೈಗೊಂಡಿರಲಿಲ್ಲ.

ಈಗ ಸಿದ್ದರಾಮಯ್ಯ ಸರ್ಕಾರ ಶ್ರೀನಿವಾಸ್ ಆಚಾರ್ಯ ಸಮಿತಿಯ ಶಿಫಾರಸ್ಸಿನಲ್ಲಿ ಪ್ರಮುಖ ಅಂಶಗಳನ್ನ ಜಾರಿ ಮಾಡಲು ತೀರ್ಮಾನಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಮತ್ತು ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.

150 ಕೆಟಗರಿ ನೌಕರರ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ನೌಕರರಿಗೆ  ಹಿಂದಿನ ಮಾರ್ಚ್ 31 ರಂದು ಸ್ವೀಕರಿಸುವ ಸಂಬಳದಲ್ಲಿ ಶೇ.15% ಏರಿಕೆ ಮಾಡಲಾಗಿದೆ. ೧೦ ತಿಂಗಳ ಸಂಬಳ ಸೇರಿಸಿ ಕೊಡಲಾಗುತ್ತಿದೆ. ಡಾಕ್ಟರ್ ಗಳಿಗೂ 15% ಹೆಚ್ಚಿಸಲಾಗಿದೆ. 20 ಸಾವಿರ ಕಡಿಮೆ ಸಂಬಳ ಪಡೆದ ಎಲ್ಲರಿಗೂ ಈ ಸಮಿತಿಯ ಶಿಫಾರಸ್ಸು ಅನ್ವಯವಾಗಲಿದೆ ಎಂದರು.

ಯಾರು ವಂಚಿತರಿದ್ದಾರೆ ಅವರಿಗೂ ಕೊಡಬೇಕಿದೆ. ಸ್ಟಾಫ್ ನರ್ಸ್ 2000, ಆಯುಷ್ ವೈದ್ಯರು 2000,  ಮ್ಯಾನೇಜ್ ಮೆಂಟ್ ಸ್ಟಫ್ 2000 ಸೇರಿ 17 ಸಾವಿರ ಜನ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.  ಕಮ್ಯೂನಿಟಿ ಡಾಕ್ಟರ್ ನ್ನೂ ಇದರಲ್ಲಿ ಸೇರಿಸಬೇಕೆಂಬ ಬೇಡಿಕೆ ಇದೆ. ಇವರಿಗೆ ವರ್ಗಾವಣೆಯ ಬೇಡಿಕೆಯನ್ನ ಇಡಲಾಗಿದೆ.  ಇದನ್ನ ಪರಿಶೀಲಿಸುವುದಾಗಿ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

ರಿಸ್ಕ್ ಫ್ಯಾಕ್ಟರ್ ಹೆಚ್ಚಿಗೆ ಇದೆ ಜೀವ ವಿಮೆ ನೀಡಬೇಕುಎಂದು ಸಹ ಬೇಡಿಕೆ ಇಡಲಾಗಿದೆ. ಸ್ಕೀಂಇರುವವರೆಗೆ ಇವರು ನೌಕರರಾಗಿರುತ್ತಾರೆ. ಸ್ಕೀಂ ನಂತರ ಕೆಲಸ ಕಳೆದುಕೊಳ್ಳುವ ಭೀತಿ ಇತ್ತು. ಈ ಬಗ್ಗೆ ಕಳೆದ 15 ವರ್ಷದಿಂದ ಕೆಲಸ ಮಾಡಿಕೊಂಡು ಬಂದಿದ್ದ ಇವರನ್ನ ಆದರೆ ಇವರನ್ನ ಖಾಯಂ ಮಾಡಬೇಕೆಂಬ ಬೇಡಿಕೆ ಇಡಲಾಗಿತ್ತು. ಆದರೆ 60 ವರ್ಷ ಆಗುವರೆಗೆ ತೆಗೆಯುವ ಹಾಗಿಲ್ಲವೆಂಬ ಬೇಡಿಕೆಯನ್ನ ಸರ್ಕಾರ ಪರಿಗಣಿಸಿದೆ ಎಂದರು.

ಖಾಯಂ ನೌಕರಾತಿಯ ಬೇಡಿಕೆ ಸಿಗದಿದ್ದರೆ ಭದ್ರತೆ ನೀಡಲಾಗಿದೆ. ಸರ್ಕಾರ ಬದಲಾದಾಗ ಬದ್ಧತೆಯ ಆರೋಗ್ಯ ವಿಮೆ, ಜೀವ ವಿಮೆ ವರ್ಗಾವಣೆ ಬಗ್ಗೆ ಭರವಸೆ ದೊರೆತರೂ ಇದು ಜಾರಿಯಾಗುವವರೆಗೂ ಹೋರಾಟ ಮಾಡಲಾಗುವುದು ಎಂದರು.

ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಲಾಗಿದೆ ಎಂಬ ಸುದ್ದಿ ಕೇಳಿದ್ದೇನೆ ಆ ಬಗ್ಗೆ ಅಧ್ಯಾಯನ ಮಾಡಿ ಪ್ರತಿಕ್ರಿಯೆ ನಡೆಸಲಾಗುವುದು.ವಿಶ್ವ ವಿದ್ಯನಿಲಯದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಇದೆ. ಇದು ವಿವಿಯ ತಪ್ಪಾಗಿದೆ ಇದು ಪ್ರತ್ಯೇಕರ ವಿಷಯವೆಂದರು.

ಸಿಎಂ ಬಿಟ್ಟು ಯಾವುದೇ ಡಿಸಿಎಂ ಸಚಿವರ ಪೋಸ್ಟ್ ಗಳೆಲ್ಲವೂ ಸಚಿವ ಸಂಪುಟದ ದರ್ಜೆಗೆ ಬರಲಿದೆ.ಕೆಲ ಸಚಿವರು  ಬೇಡಿಕೆ ಇಟ್ಟಿದ್ದಾರೆ. ಹೈಕಮ್ಯಾಂಡ್ ಏನು ಪ್ರತಿಕ್ರಿಯೆ ನೀಡುತ್ತೆ ಕಾದುನೋಡೋಣ ಎಂದರು.

ಸುದ್ದಿಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ಅವರ ಪುತ್ರ ಸಂತೊಷ್, ಪಾಲಿಕೆ ಮಾಜಿ ಸದಸ್ಯ ಧೀರಾಜ್ ಹೊನ್ನವಿಲೆ, ಐಡಿಯಲ್ ಗೋಪಿ, ಹಿರಣಯ್ಯ, ಶಿ.ಜು.ಪಾಶ, ಪದ್ಮನಾಭ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5805

Related Articles

Leave a Reply

Your email address will not be published. Required fields are marked *

Back to top button