ಅಡಿಕೆ ಕಳ್ಳರ ಬಂಧನ

ಸುದ್ದಿಲೈವ್/ಶಿವಮೊಗ್ಗ

ಹೊಸನಗರ ಪಟ್ಟಣದ ಸುಮೇಧಾ ವಿವಿದ್ಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ 2 ಕ್ವಿಂಟಾಲ್ 72 ಕೆ. ಜಿ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಅ.21ರಂದು ನಡೆದಿತ್ತು. ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ಅಡಿಕೆ ಕಳ್ಳನನ್ನ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಕಳುವಾದ ಅಡಿಕೆ ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿಯವರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮತ್ತು ಸಿಪಿಐ ಗುರಣ್ಣ ಹೆಬ್ಬಾರ್ ರವರ ಮೇಲ್ವಿಚಾರಣೆಯಲ್ಲಿ ಪಹೊಸನಗರ ಪೊಲೀಸ್ ಠಾಣೆಯ ಪಿಎಸ್ ಐ ಶಿವಾನಂದ್ ವೈಕೆ ನೇತೃತ್ವದ, ಎಎಸ್ಐ ಸತೀಶ್ ರಾಜ್ ಮತ್ತು ಸಿಬ್ಬಂಧಿಗಳಾದ ಸಿಪಿಸಿ – ಸುನಿಲ್, ರಂಜಿತ್, ಗಂಗಪ್ಪ, ಮಹೇಶ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಅ.27 ರಂದು ಪ್ರಕರಣದ ಆರೋಪಿತರಾದ 1) ರವಿರಾಜ, 32 ವರ್ಷ, ಮಾವಿನಕೊಪ್ಪ ಹೊಸನಗರ, 2) ನಾಗರಾಜ, 31 ವರ್ಷ, ಹೊಸನಗರ ಟೌನ್, 3) ರಾಜೇಶ್, 40 ವರ್ಷ, ಮಾವಿನಕೊಪ್ಪ ಹೊಸನಗರ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 1,33,000/- ರೂಗಳ 02 ಕ್ವಿಂಟಾಲ್ 72 ಕೆಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 01 ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇದನ್ನೂ ಓದಿ-https://suddilive.in/archives/2194
