ರಾಗಿಗುಡ್ಡ ಮತ್ತು ಗಾಯಾಳುಗಳನ್ನ ಭೇಟಿ ನೀಡಿದಸತ್ಯಶೋಧನಾ ಸಮಿತಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗಕ್ಕೆ ಬಿಜೆಪಿಯ ಸತ್ಯ ಶೋಧನ ಸಮಿತಿ ಯು ಭೇಟಿ ನೀಡಿ ಮೊದಲಿಗೆ ಮೆಗ್ಗಾನ್ ನಲ್ಲಿ ದಾಖಲಾಗಿರುವ ಗಾಯಾಳುಗಳನ್ನ ಭೇಟಿ ನೀಡಿದರು. ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಈಶ್ವರಪ್ಪ, ರವಿಕುಮಾರ್ ಭಾರತೀ ಶೆಟ್ಟಿ ಮೊದಲಾದ ತಂಡ ಭೇಟಿ ನೀಡಿತು.
ರಾಗಿ ಗುಡ್ಡದಲ್ಲಿ ದಾಳಿಯ ವೇಳೆ ಗಾಯಾಳುಗಳಾದ ರೋಹನ್, ಭರತ್, ಕಿರಣ್, ಪ್ರದೀಪ್ ರ ಆರೋಗ್ಯವಿಚಾರಿಸಲಾಯಿತು.
ರಾಗಿಗುಡ್ದಲ್ಲಿ ನಡೆದ ದಂಗೆಯ ವೇಳೆ ರೋಹನ್ ಗೆ ಅಟ್ಯಾಕ್ ಆಗಿದ್ದು ಆತನ ತಲೆಗೆ ಗಾಯಗಳಾಗಿತ್ತು. ರೋಹನ್ ಅಟ್ಯಾಕ್ ಆದಾಗ ದೊಣ್ಣೆಹಿಡಿದಚಿತ್ರವೊಂದು ವೈರಲ್ ಆಗಿದೆ. ಈವೇಳೆ ರೋಹನ್ ಗೆ 6 ಹೊಲಿಗೆ ಹಾಕಲಾಗಿದೆ. ಆತನನ್ನ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರು. ಹೊರಗಡೆ ಚಿಕಿತ್ಸೆ ಕೊಡಿಸುವ ಬಗ್ಗೆಸೂಚಿಸಲಾಗಿತ್ತು.
ಸಧ್ಯಕ್ಕೆ ಬೇಡ ನಾಲ್ಕು ದಿನ ಇರು ಆಮೇಲೆ ಹೊರಗಡೆ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿದ್ದು ಅದರಂತೆಸತ್ಯಶೋಧನಾ ಸಮಿತಿ ಸೂಚನೆ ನೀಡಿದ್ದಾರೆ. ನಂತರ ಭರತ್, ಕಿರಣ್, ಪ್ರದೀಪ್ ರ ಆರೋಗ್ಯ ವಿಚಾರಿಸಲಾಯಿತು.
ನಂತರ ಹಾನಿಗೊಳಗಾದ ರಾಗಿಗುಡ್ಡದಲ್ಲಿರುವ ನಿವಾಸಿಗಳ ಮನೆಗಳಿಗೆ ಸಮಿತಿ ಭೇಟಿ ನೀಡಿತು. ರಾಗಿಗುಡ್ಡ, ಮೇಸ್ಟ್ರು ಪ್ರಸನ್ನ, ಪೀಟರ್, ಲಕ್ಷ್ಮಿ, ವೆಂಕಟೇಶ್, ಚಂಧ್ರಣ್ಣ, ಲಕ್ಷ್ಮಣ್ಣ ಗೌಡ, ರೋಹನ್ ಲಾಯರ್ ರ್ರಾಮಚಂದ್ರರವರ ಮನೆಗೆ ಭೇಟಿ ನೀಡಲಾಯಿತು.
ಶಾಸಕ ಚೆನ್ನಬಸಪ್ಪರವರ ಕೈಹಿಡಿದು ಮಾತನಾಡಿದ ಮೇಸ್ಟ್ರು ಪ್ರಸನ್ನಇವರು ನನ್ನ ಸ್ಟ್ಯೂಡೆಂಟ್ ನಾನು ಬದುಕೋದು ಕಷ್ಟವಾಗಿದೆ. ಹೀಗೆ ನುಗ್ಗಿ ದಾಂಧಲೆ ಮಾಡಿದ ವೇಳೆ ಬದುಕೋದೆ ಕ್ಷಣವಾಗಿದೆ. ಆತ ಕೆಲಸವಿತ್ತು. ಈಗ ಕೆಲಸವಿಲ್ಕ. ಹಣವಿಲ್ಲ. ಆಗ ದುಡಿಮೆ ಇದ್ದಾಗ ಮನೆ ಮಾಡಿಕೊಂಡೆ ಗಲಭೆಯಲ್ಲಿ ಗ್ಲಾಜು ಹಾಕಿಸಲು ಹಣವಿಲ್ಲವೆಂದರು.
ಅನಿತಾರವರು ಈ ಏರಿಯಾದಲ್ಲಿ ಒಂದಾಗಿ ಹಿಂದು ಮುಸ್ಲೀಂರುಬದುಕುತ್ತಿದ್ದೇವೆ ಗಣಪತಿ ಹಬ್ಬಕ್ಕೆಗಣಪತಿ ಹೋಮನಡೆದಾಗೆಲ್ಲರನ್ನೂ ಕರೆದು ಪೂಜಿಸಲಾಯಿತು ಎಲ್ಲರೂ ಬಂದರು ಆದರೆ ಈದ್ ಮೆರವಣಿಗೆವೇಳೆದಾಂಧಲೆ ನಡೆಸಿದರು ಎಂದು ಆತಂಕ ವ್ಯಕ್ತಪಡಿಸಿದರು.
ಈವೇಳೆ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ್ ರಾಗಿಗುಡ್ಡದ ಜನ ಆತಂಕದಲ್ಲಿದ್ದಾರೆ. ಅಮಾಯಕರ ಮೇಲೆ ದಾಳಿ ನಡೆದಿದೆ. ಅವರಿಗೆ ಧೈರ್ಯ ತುಂಬುವ ಕೆಲಸ ಆಗಿದೆ ಎಂದರು.
ಇದನ್ನೂ ಓದಿ-https://suddilive.in/archives/548
