ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಸಲ್ಲ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಗ್ಗೆ ಸಂಸದ ರಾಘವೇಂದ್ರ ಚಾಣಾಕ್ಷತನದಿಂದ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಸಿದ್ದತೆ‌ನೋಡಲು ಬಂದವೇಳೆ ಮಾಧ್ಯಮಗಳ ಜೊತೆ ಮಾತನಾಡಿ ಮೋದಿ ಕಾರ್ಯಕ್ರಮದ ಕಾರಣ ಆ ಬಗ್ಗೆ ಮಾತನಾಡೊಲ್ಲ. ಅವರ ಆಗಮನವಿಕೆಯೇ ಸಿದ್ದತೆಯ ಬಗ್ಗೆ ಗಮನ ಹರಿಸಲಾಗುವುದು ಎಂದರು.

ಮಾ.18 ರಂದು ಮಧ್ಯಾಹ್ನ 1-15 ಗಂಟೆಗೆ ಪ್ರಧಾನಿ ಶಿವಮೊಗ್ಗಕ್ಕೆ  ಬರುತ್ತಿದ್ದಾರೆ. ತಯಾರಿ ಭರದಿಂದ ಸಾಗುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಇಂದು ಮಧ್ಯಾಹ್ನದಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಕಾನೂನು ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾದರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಬಂದು ಹೋಗುವರು ವ್ಯವಸ್ಥೆ ಇರುತ್ತದೆ ಎಂದರು.

12-30 ರ ಒಳಗೆ ಸಾರ್ವಜನಿಕರು ಪೆಂಡಾಲ್ ಒಳಗೆ ಬರಬೇಕು. ಪ್ರಧಾನಿ ಅವರು ಮೂರನೇ ಬಾರಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಹೊರಗಡೆಯಿಂದ ಬರುವ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬೊಮ್ಮನ್ ಕಟ್ಟೆಯಲ್ಲಿ ಸಾಗರ, ಶಿಕಾರಿಪುರ, ಸೊರಬ ದಿಂದ ಬರುವವರಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.  ಸಾಗರ ತೀರ್ಥಹಳ್ಳಿ, ಬೈಂದೂರಿನಿಂದ ಬಂದವರಿಗೆ ಎಪಿಎಂಸಿ ಮಾರ್ಕೆಟ್ ನಲ್ಲಿ ಅವಕಾಶವಿದೆ.

ಭದ್ರಾವತಿ, ಹೊಳೆಹೊನ್ನೂರು ಕ್ಷೇತ್ರದವರಿಗೆ ಸೈನ್ಸ್ ಮೈದಾನ ವ್ಯವಸ್ಥೆ ಮಾಡಲಾಗಿದೆ. 99% ಶಿವಮೊಗ್ಗ ಕ್ಷೇತ್ರಕ್ಕೆ ಮೋದಿಯವರ ಕಾರ್ಯ್ರಮ ಸೀಮಿತವಾಗಿದೆ. ಜಿಲ್ಲೆಯ ಎಲ್ಲಾ‌ ನಾಯಕರು, ಯಡಿಯೂರಪ್ಪನವರು, ರಾಜ್ಯಾಧ್ಯಕ್ಷ ವಿಜೇಂದ್ರ ಹಾಗೂ ಜೆಡಿಎಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button