ಸ್ಥಳೀಯ ಸುದ್ದಿಗಳು

ಕನ್ನಡವನ್ನ ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ಇದೆ-ಡಾ.ಎಸ್ ಪಿ ಪದ್ಮಪ್ರಸಾದ್ ವಿಷಾಧ

ಸುದ್ದಿಲೈವ್/ಶಿವಮೊಗ್ಗ,ಫೆ.01:

ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವು ಇದೆ. ಇದರಿಂದಲೇ ಕನ್ನಡ ಶಾಲೆಗಳು ಸೊರಗಿವೆ ಎಂದು ಶಿವಮೊಗ್ಗ ಜಿಲ್ಲಾ 18ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ್ ವಿಷಾದ
ವ್ಯಕ್ತಪಡಿಸಿದರು.

ಅವರು ಇಂದು ಜಿಲ್ಲಾ ಕ.ಸಾ.ಪ.ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿರುವ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದರು.

ಇಂಗ್ಲಿಷ್ ಮಾಧ್ಯಮನದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ
ಭ್ರಮೆಯಲ್ಲಿ ಪೋಷಕರಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳು ಸೊರಗುತ್ತಿವೆ.
ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 43 ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ. ಇದುಅತ್ಯಂತ ವಿಷಾಧದ ಸಂಗತಿಯಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಈ ಬಗ್ಗೆಮನವಿ ಮಾಡಿದ್ದಾರೆ ನಿಜ. ಆದರೆ, ಇಲಾಖೆಯವರು ಯಾರನ್ನು ಬಲವಂತ ಮಾಡಲು ಬರುವುದಿಲ್ಲ. ಹೀಗೆಯೇ ರಾಜ್ಯಾದದ್ಯಾಂತ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದರ ನಡುವೆಯೂ ಸರ್ಕಾರಿ ಶಾಲೆಗಳ ಉನ್ನತೀಕರಣ
ಆಗುತ್ತಿರುವುದು ಸಮಾಧಾನದ ವಿಷಯ ಎಂದರು.
ಕರ್ನಾಟಕದ ವಿವಿಧ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು
ನೀಡಬೇಕು ಎಂದು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳಾದರೂ ಕೂಡ
ಅದು ಈಡೇರಿಲ್ಲ. ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಇಲ್ಲವಾಗಿದೆ.ಇದು ನಮ್ಮ ವ್ಯವಸ್ಥೆಯ ಮತ್ತೊಂದು ರೂಪ. ಕಾನೂನುಗಳು ಬಲವಾಗಿ ಜಾರಿಯಾದರೆ ಮಾತ್ರ ಕನ್ನಡಿಗರಿಗೆ ಉದ್ಯೋಗ ಸಿಗಲು ಸಾಧ್ಯ ಎಂದರು.

ಪಾಂಡಿತ್ಯ ಪ್ರತಿಭೆ ಎನ್ನುವುದು ದಿನದಿನಕ್ಕೂ ಕ್ಷೀಣಿಸುತ್ತಿದೆ. ಇತಿಹಾಸವನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆ ಹಳೆಗನ್ನಡ, ಛಂದಸ್ಸು, ವ್ಯಾಕರಣ,
ಶಾಸನ ಶಾಸ್ತ್ರ ಹೀಗೆ ಹಲವು ವಿಷಯಗಳನ್ನು ಮರೆತು ಬಿಟ್ಟಿದೆ. ಪರ ಭಾಷೆಗಳ ಮುನ್ನುಗ್ಗುವಿಕೆ, ಶಿಕ್ಷಕರ ನಿರ್ಲಕ್ಷ್ಯ, ಕನ್ನಡ ಮಾಧ್ಯಮದ ಪೋಷಕರ
ಅನಾಧರ ಇವೆಲ್ಲವೂ ಕನ್ನಡಕ್ಕೆ ಶಕ್ತಿ ತುಂಬಲು ಸಾಧ್ಯವಿಲ್ಲವಾಗಿದೆ. ಕನ್ನಡವೇ ನಮ್ಮ
ಅಸ್ಮಿತೆ ಆದರೆ, ಅದರ ಅನಾಧರ ಸಲ್ಲದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶರಾವತಿ ಸೇರಿದಂತೆ ಮುಳುಗಡೆ. ಸಂತ್ರಸ್ಥರ ಬದುಕು ಇನ್ನು ನೆಟ್ಟಗೆ ಆಗಿಲ್ಲ. ಅಡಿಕೆಗೆ ಕೊಳೆ ರೋಗ ಪದೇ ಪದೇ
ಬಾದಿಸುತ್ತಿದೆ. ಕ್ಯಾಸನೂರು (ಮಂಗನ)ಖಾಯಿಲೆ ಮತ್ತೆ ಮರುಕಳಿಸಿದೆ.ಜಿಲ್ಲೆಯಾದ್ಯಂತ ಸಮಸ್ಯೆಗಳಿವೆ, ಈ ಸಮಸ್ಯೆಗಳಿಗೆ ಉತ್ತರ ಸಿಗಬೇಕಾಗಿದೆ. ಇದರನಡುವೆಯೂ ಒಂದಿಷ್ಟು ಪ್ರಗತಿಪರ ಕೆಲಸಗಳು ಆಗಿವೆ,

ಕಾಲೇಜುಗಳ ಸಂಖ್ಯೆ ಹೆಚ್ಚಿದೆ, ರಸ್ತೆಗಳ ಸ್ಥಿತಿ ಉತ್ತಮಗೊಂಡಿದೆ, ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತಿದೆ ಎಂಬುದಷ್ಟೇ ಸಮಾಧಾನ ಎಂದರು.

ಇದನ್ನೂ ಓದಿ-https://suddilive.in/archives/8177

Related Articles

Leave a Reply

Your email address will not be published. Required fields are marked *

Back to top button