ಸ್ಥಳೀಯ ಸುದ್ದಿಗಳು

ಸಾಲ ಸೆಟ್ಲುಮೆಂಟ್ ಗೆ ಹೊಸ ಯೋಜನೆ ಜಾರಿ-ಮಂಜುನಾಥ್ ಗೌಡ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ನಲ್ಲಿ ಸುಸ್ತಿ ಸಾಲದ ಬಡ್ಡಿ ಮನ್ನ ಮಾಡಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆಯನ್ನ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ‌ ಮಂಜುನಾಥ್ ಗೌಡ ತಿಳಿಸಿದರು

ಬ್ಯಾಂಕ್ ನ ಸಭಾಂಗಣದಲ್ಲಿ 2024 ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ರೈತರ, ಕಾರ್ಮಿಕರ ಪರವಾಗಿ ಆದೇಶವಾಗಿದೆ. ಒನ್ ಟೈಮ್ ಸೆಟ್ಲಮೆಂಟ್ ನ್ನ ತೆಗೆದು ಕಾಂಪ್ರಮೈಸ್ ಸೆಟ್ಲಮೆಂಟ್ ಎಂಬ ಹೊಸ ಯೋಜನೆಯನ್ನ ಜಾರಿಗೊಳಿಸಲಾಗಿದೆ. ಹಾಗಾಗಿ ಮಾರ್ಚ್ 31 ರ ಒಳಗೆ ಸಾಲ ಅವಕಾಶವಿದೆ. ನ್ಯಾಯಾಲಯಕ್ಕೆ ಹೋಗಿ ಡಿಕ್ರಿ ಆದ ಪ್ರಕರಣಕ್ಕೆ ಈ ಅವಕಾಶ ಆಗಲಿದೆ.

ಆರ್ ಬಿ ಐ ಈ ಆದೇಶ ಮಾಡಿದೆ. ಸೌಹಾರ್ಧ ಮತ್ತು ಸಹಕಾರಿ ಕಾಯ್ದೆ ಒಂದೇ ಆಗಿ ಜಾರಿಯಾಗಲಿದೆ. ಇದುವರೆಗೂ ಎರಡು ಕಾಯ್ದೆ ಜಾರಿಯಿತ್ತು. ಮುಂದಿನ ದಿನಗಳಲ್ಲಿ ಒಂದೇ ಕಾಯ್ದೆ ಜಾರಿಯಾಗುವ ಮೂಲಕ ಕೆಲ ಗೊಂದಲಗಳನ್ನ ನಿವಾರಣೆ ಆಗಲಿದೆ ಎಂದರು.

15 ಲಕ್ಷದ ವರೆಗೆ ವರಮಾನ ಪಡೆಯುವ ರೈತರಿಗೆ ಪಿಕಪ್ ವಾಹನವನ್ನ ಸಾಲದ ರೂಪದಲ್ಲಿ ಬರಲಿದೆ. ಆಯನೂರು ಹೊಳಲೂರು ಬಾರಂದೂರ ಕಲ್ಲಿಹಾಳ್, ತೀರ್ಥಹಳ್ಳಿ ಹೊಸನಗರದಲ್ಲಿ 10 ಹೊಸ ಬ್ರಾಂಚ್ ಆರಂಭವಾಗಲಿದೆ. ಶೀಘ್ರದಲ್ಲಿ ಮೊಬೈಲ್ ಬ್ಯಾಂಕಿಂಗ್ ಆರಂಭಿಸುವ ಮೂಲಕ ಫೋನ್ ಪೇ ವ್ಯವಸ್ಥೆಗೆ ಡಿಸಿಸಿ ಬ್ಯಾಂಕ್ ಒಳಪಡಲಿದೆ ಎಂದು ವಿವರಿಸಿದರು.

174 ಪ್ರಾಥಮಿಕ ಸಹಕಾರ ಸಂಘಗಳಿಗೆ 15 ಕೋಟಿ ಕಟ್ಟಡಗಳಿಗೆ ಬಿಡುಗಡೆ ಮಾಡುವ ಮೂಲಕ ಮಲ್ಟಿ ನಗರದಲ್ಲಿ ಸರ್ವಿಸ್ ಸೆಂಟರ್ ಆರಂಭವಾಗಲಿದೆ ಹೋಬಳಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ 4% ಬಡ್ಡಿದರದಲ್ಲಿ ಸೌಲಭ್ಯಗಳನ್ನ ಆರಂಭಿಸಲಾಗುವುದು. ಸಂಪೂರ್ಣವಾಗಿ ಸ್ವತಂತ್ರವಾಗಿ ಬ್ಯಾಂಕಿಂಗ್ ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಹಣವನ್ನೇ ವಾಪಾಸ್ ನೀಡುವ ಯೋಚನೆ ಇದೆ ಎಂದರು.

ಡಿಸೆಂಬರ್ 31 ರ ಒಳಗೆ 100 ಕೋಟಿ ಠೇವಣಿ ಹಣ ಕಟ್ಟಿಸಿಕೊಳ್ಳಲು ಗುರಿಯನ್ನ ಹೊಂದಿದೆ. ಶಾಲೆ, ಪೆಟ್ರೋಲ್ ಬಂಕ್, ಆರಂಭಿಸುವವರಿಗೆ ಸಾಲ ನೀಡಲು ಯೋಚಿಸಲಾಗಿದೆ. ಖಾಸಗಿ ರೈತರು 20 ಲಕ್ಷರೂ ಸಾಲನ್ನ‌ 7% ಬಡ್ಡಿಗೆ ಗೋಡಾನ್ ಕಟ್ಟಿಕೊಳ್ಳಲು ಸಾಲ ಸಿಗಲಿದೆ ಎಂದರು.

ಇದನ್ನೂ ಓದಿ-https://suddilive.in/archives/5554

Related Articles

Leave a Reply

Your email address will not be published. Required fields are marked *

Back to top button