ಸ್ಥಳೀಯ ಸುದ್ದಿಗಳು

ಹುಂಚದಕಟ್ಟೆಯಲ್ಲಿ ಷಷ್ಠಿ‌ ದೀಪೋತ್ಸವ

ಸುದ್ದಿಲೈವ್/ಶಿವಮೊಗ್ಗ

ತೀರ್ಥಹಳ್ಳಿ: ತಾಲೂಕಿನ ಹುಂಚದಕಟ್ಟೆ ಗ್ರಾಮದ ರಾಮನಸರ ಶ್ರೀ ನಾಗದೇವತೆ ಕ್ಷೇತ್ರದಲ್ಲಿ ಡಿ.18ರ ಸೋಮವಾರ 17ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ಆಯೋಜಿಸ ಲಾಗಿದೆ.

ಅಂದು ಬೆಳಿಗ್ಗೆ ದೇವರಿಗೆ ಗಣಹೋಮ, ಪಂಚ ವಿಂಶತಿ ಕಲಶ, ಕಲಾತತ್ವ ಅಧಿವಾಸ ಹೋಮ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ, ಆಶ್ಲೇಷ ಬಲಿ, ರಾತ್ರಿ ವಿಶೇಷ ಸಿಡಿಮದ್ದು ಪ್ರದರ್ಶನ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದ ಸುತ್ತಮುತ್ತ ಬಣ್ಣ ಬಣ್ಣದ ವಿದ್ಯುತ್ ಅಲಂಕಾರ ಮತ್ತು ಹೂವಿನ ಅಲಂಕಾರ ಹಾಗೂ 70ಕ್ಕೂ ಹೆಚ್ಚು ಗ್ರಾಮೀಣ ಕಲಾ ತಂಡಗಳಿಂದ ಕಲಾ ಪ್ರದರ್ಶನ ಮತ್ತು ರಾಜಬೀದಿ ಉತ್ಸವ ನಡೆಯಲಿದೆ.

ಅಂದು ಸಂಜೆ 6:30ಕ್ಕೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮಂದಾರ್ತಿ ಇವರಿಂದ ಐದು ಮೇಳಗಳ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ವ್ಯವಸ್ಥಾಪಕರಾದ ಸುನಂದಮ್ಮ, ಚಂದ್ರಶೇಖರ್ (ಪುಟ್ಟ), ನಾಗರಾಜ್ ರಾಮನಸರ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4706

Related Articles

Leave a Reply

Your email address will not be published. Required fields are marked *

Back to top button