ವಿಮಾನ ನಿಲ್ದಾಣದಲ್ಲಿ ಪೊಲೀಸ್ ಗಿರಿನಾ ದಾದಾಗಿರಿನಾ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಪೊಲೀಸ್ ಅವರದ್ದೇ ದರ್ಬಾರ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣ ಇವರದ್ಧೆ ಆಸ್ತಿ ಎಂಬಂತೆ ನಡೆದುಕೊಳ್ಳುತ್ತಿರುವ ದೃಶ್ಯ ಲಭ್ಯವಾಗಿದೆ.
ವಿಮಾನ ನಿಲ್ದಾಣದಲ್ಲಿ ಪತ್ರಕರ್ತರನ್ನ ಅಸ್ಪೃಶ್ಯತೆಯಾಗಿ ನೋಡುವ ಈ ಇಲಾಖೆ ಶೂಟಿಂಗ್ ಗೂ ಅಡ್ಡಪಡಿಸಿರುವ ಘಟನೆ ನಡೆದಿದೆ. ಅಡ್ಡಪಡಿಸದ್ದಲ್ಲಧೇ ಮೀಡಿಯಾ ಎಂದು ಗೊತ್ತಿದ್ದರೂ ಮೊಬೈಲ್ ವಿಡಿಯೋ ಶೂಟಿಂಗ್ ಮಾಡಿಕೊಂಡು ದರ್ಪ ಮೆರೆದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಾಯಿಗೆ ಅವಕಾಶವಿದೆ ಆದರೆ ಫೋಟೋ ಶೂಟ್ ಗೆ ಕಷ್ಟಪಡಬೇಕಿದೆ. ಏಣಿ ಹತ್ತಿ ಫೋಟೋ ಶೂಟ್ ಮಾಡಿಕೊಳ್ಳುವ ಸ್ಥಿತಿ ಇದೆ. ಏಣಿ ಹತ್ತಿದರೂ ಪೊಲೀಸರ ಕಾಟ ತಪ್ಪಿದ್ದಲ್ಲ. ಒಟ್ಟಿನಲ್ಲಿ ಪತ್ರಕರ್ತನ್ನ ಆಹ್ವಾನಿಸಿ ಅವರಿಗೆ ಬೇಕಾದ ಪೋಟೊ ಶೂಟ್ ಗೆ ಅವಕಾಶವಿಲ್ಲದಂತಾಗಿದೆ. ಈ ಚಂದಕ್ಕೆ ಸಂಸದರಿಗೆ ಈ ವಿಮಾನಗಳ ಪ್ರಚಾರ ಬೇಕಿತ್ತಾ ಎಂಬ ಚರ್ಚೆ ಆರಂಭವಾಗಿದೆ.
ಇದಕ್ಕೂ ಮೊದಲು ಅಲ್ಲಿನ ಪೊಲೀಸ್ ನವರು ಟ್ಯಾಕ್ಸಿ ಚಾಲಕರಿಗೂ ಕಿರಿಕಿರಿ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿನ 28 ಟ್ಯಾಕ್ಸಿಗಳಿದ್ದು. 28 ಟ್ಯಾಕ್ಸಿಗಳಲ್ಲಿ ಕೇವಲ 5 ಟ್ಯಾಕ್ಸಿಗಳಿಗೆ ಹಣಪಡೆದು ಲೋಕೇಶ್ ಎಂಬ ಸಿಬ್ಬಂದಿ ಆರೋಪಿಸಿದ್ದಾರೆ.
ಇಂದು ಶಾಸಕ ಚೆನ್ನಬಸಪ್ಪ ನವರು ವುಮಾನ ನಿಲ್ದಾಣಕ್ಕೆ ಭೇಟಿ ನೀಡಿದಾಗ ಟ್ಯಾಕ್ಸಿ ಚಾಲಕರು ಭೇಟಿಯಾಗಿ ಅಹವಾಲು ನೀಡಿದ್ದಾರೆ. ಲೋಕೇಶ್ ವಿರುದ್ಧ ದೂರು ನೀಡಿದ್ದಾರೆ. ಇನ್ಮೊಮ್ಮೆ ಈ ತಾರತಮ್ಯ ಮಾಡಿದರೆ ಸರಿಯಿರಲ್ಲ ಹುಷಾರ್ ಎಂದಿದ್ದಾರೆ. ಡಿವೈಎಸ್ಪಿ ಚಂದ್ರಶೇಖರ್ ತೇಪೆ ಹಚ್ಚಲು ಯತ್ನಿಸಿದ್ದಾರೆ. ಒಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಒಂದೋ ಪೊಲೀಸ್ ಗಿರಿ ನಡೆಯುತ್ತಿದೆ ಅಥವಾ ಪೊಲೀಸ್ ಡ್ರೆಸ್ ನಲ್ಲಿ ದಾದಾಗಿರಿ ನಡೆಯುತ್ಯಿದೆ ಎಂಬ ಅನುಮಾನವಿದೆ.
ಇದನ್ನೂ ಓದಿ-https://suddilive.in/archives/3377
