ಬೀದಿ ನಾಯಿ ಹಾವಳಿ ತಪ್ಪಿಸಲು ಸಭೆ ಗಟ್ಟಿ ನಿರ್ಧಾರ-ಶಿಷ್ಠಾಚಾರ ಉಲ್ಲಂಘನೆಯ ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ನೇತ್ರತ್ವದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಚರ್ಚಿಸಿ ಯುದ್ಧೋಪಹಾದಿಯಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಯಿತು.
ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಏಪ್ರಿಲ್ ತಿಂಗಳಲ್ಲಿ ನಗರದ ಮಗುವೊಂದನ್ನ ಕಚ್ಚಿ ಸಾಯಿಸಿದೆ ಎಂದು ಎಂಎಲ್ ಸಿ ಅರುಣ್ ಸಭೆಗೆ ಪ್ರಸ್ತಾಪಿಸಿದರು. ಆಗ ಡಿಸಿ ಡಾ.ಸೆಲ್ವಮಣಿ ಮಾತನಾಡಿ ನಾಯಿಯ ಹಾವಳಿ ತಪ್ಪಿಸಲು ಎಬಿಸಿ ಅಂದರೆ ಸಂತಾನ ಹರಣ ಚಿಕಿತ್ಸೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಗ್ರಾಪಂ ಅಧಿಕಾರಿ ಮಾತನಾಡಿ ಮತ್ತೂರು ಭಾಗದಲ್ಲಿ ಬೀದಿ ನಾಯಿಯಿಂದಾಗಿ ಹಸುಗಳಿಗೂ ರೇಬಿಸ್ ಹರಡುತ್ತಿರುವುದು ಕಂಡು ಬಂದಿದೆ ಎಂದರು. ಈ ಕುರಿತು ಗಟ್ಟಿ ನಿರ್ಧಾರವನ್ನ ತೆಗೆದುಕೊಳ್ಳಬೇಕು ಎಂದು ಸಭೆ ನಿರ್ಧರಿಸಿತು. ಯುದ್ಧೋಪಹಾದಿಯಲ್ಲಿ ವಾರಕ್ಕೊಮ್ಮೆ ಎಬಿಸಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.
ಶಿಷ್ಠಾಚಾರ ಉಲ್ಲಂಘನೆ
ಇಂದು ನಡೆದ ಸಚಿವರ ತ್ರೈಮಾಸಿಕ ಸಭೆಯಲ್ಲಿ ಉದ್ಘಾಟನೆ, ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಪಾಲನೆ ಆಗುತ್ತಿಲ್ಲವೆಂಬ ಕೂಗು ಕೇಳಿಬಂದಿದೆ. ಸಂಸದ ರಾಘವೇಂದ್ರ ಈ ಕೂಗನ್ನ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ರಾಣೇಬೆನ್ನೂರು ಮತ್ತು ಬೈಂದೂರು ಹೈವೆ ಕಾಮಗಾರಿಗೆ 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಅದನ್ನ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದ್ದಾರೆ. ಕೇಂದ್ರ ಯೋಜನೆಯನ್ನ ಉದ್ಘಾಟಿಸಿದ್ದಾರೆ. ಆದರೆ ಇತರೆ ಚುನಾಯಿತ ಪ್ರತಿನಿಧಿಗಳನ್ನ ಕರೆದಿಲ್ಲ.
ಅಂಬಾರಗೊಪ್ಪದಲ್ಲಿ ಕೆಎಸ್ ಆರ್ ಟಿ ಸಿ ಬಸ್ ಬಿಡಲಾಯಿತು. ಅಲ್ಲೂ ಪುರಸಭೆ ಸದಸ್ಯರಿಂದ ಉದ್ಘಾಟಿಸಲಾಗಿದೆ. ಇತರೆ ಚುನಾಯಿತ ಪ್ರತಿನಿಧಿ ಯಾಕೆ ಬೇಕು ಎಂಬ ಚರ್ಚೆಯನ್ನ ಎಂಪಿ ಬಿ.ವೈ.ರಾಘವೇಂದ್ರ ಸಭೆಗೆ ತಿಳಿಸಿದರು. ಈವಿಷಯವನ್ನಗಂಭೀರವಾಗಿ ಪರಿಗಣಿಸಿದ ಸಚಿವ ಮಧು ಬಂಗಾರಪ್ಪ ಗ್ರಾಪಂ ಸದಸ್ಯರನ್ನೂ ಕರೆಯುವಂತೆ ಈ ಬಗ್ಗೆ ಡಿಸಿ ಶಿಷ್ಠಾಚಾರ ಪಾಲಿಸುವಂತೆ ಸೂಚಿಸಿದರು.
ಎಂಎಲ್ ಸಿ ಅರುಣ್ ಮಾತನಾಡಿ ಶಿವಮೊಗ್ಗದಲ್ಲಿ ಅತಿಹೆಚ್ಚು ಶಿಷ್ಠಾಚಾರ ಉಲ್ಲಂಘನೆ ನಡೆದಿದೆ ಮುಂದಿನ ದಿನಗಳಲ್ಲಿ ಈ ರೀತಿ ನಡೆಯಬಾರದು ಎಂದು ಕೋರಿದರು. ಡಿಸಿ ಮಾತನಾಡಿ ಸಂಸದರು ಪ್ರಸ್ತಾಪಿಸಿದ ಎರಡು ವಿಷಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಉಲ್ಲಂಘನೆಗೆ ಅಧಿಕಾರಿಗಳು ಶಿಷ್ಣಟಾಚಾರಪಾಲಿಸದಿದ್ದಲ್ಲಿ ಕಂಡು ಬಂದರೆ ಅಮಾನತ್ತು ಪಡಿಸುವುದಾಗಿ ಹೇಳಿದರು.
ಇದನ್ನೂ ಓದಿ-https://suddilive.in/archives/2722
