ಸ್ಥಳೀಯ ಸುದ್ದಿಗಳು

ಅವೈಜ್ಞಾನಿಕವಾಗಿ ಗೋಪಿ ವೃತ್ತದ ಬಳಿ ಜೀಬ್ರಾ ಕ್ರಾಸಿಂಗ್ ನಿರ್ಮಾಣ

ಸುದ್ದಿಲೈವ್/ಶಿವಮೊಗ್ಗ

ಜೀಬ್ರಾ ಕ್ರಾಸಿಂಗ್ ಹೇಗಿರುತ್ತೆ, ಬಹುತೇಕ ಕಡೆ ಜೀಬ್ರಾ ಕ್ರಾಸಿಂಗ್ ನಲ್ಲಯೇ ಪಾದಾಚಾರಿಗಳು ರಸ್ತೆ ದಾಟುತ್ತಾರೆ. ದಟ್ಟವಾದ ವಾಹನ ಸಂಚಾರದ ವೇಳೆ ಸುಗಮವಾಗಿ ರಸ್ತೆ ದಾಟುವಂತೆ ಮಾಡುವುದೇ ಜೀಬ್ರಾ ಕ್ರಾಸಿಂಗ್. ಆದರೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಅಳವಡಿಸಿರುವ ಜೀಬ್ರಾ ಕ್ರಾಸಿಂಗ್ ಮಾತ್ರ ಸ್ಮಾರ್ಟ್ ಸಿಟಿಯ ಹಣೆಬರಹವನ್ನೇ ಬಿಚ್ಚಿಡುತ್ತದೆ.

ಶಿವಮೊಗ್ಗದಲ್ಲಿ 17 ಸಿಗ್ನಲ್ ಲೈಟ್ ಗಳಲ್ಲಿ ಜೀಬ್ರಾ ಕ್ರಾಸಿಂಗ್ ರಚಿಸಲಾಗಿದೆ. ರಸ್ತೆ ಸಂಚಾರದ ವೇಳೆ ಜನ ರಸ್ತೆ ದಾಟಲು ಜೀಬ್ರಾ ಕ್ರಾಸಿಂಗ್ ರಚಿಸಲಾಗಿದೆ. ಒಂದೊಂದು ವೃತ್ತದ ಬಳಿ ಹಳದಿ ಬಣ್ಣದಲ್ಲಿ ರಂಗೋಲಿ ಇಟ್ಟಂತೆ ಕಾಣುತ್ತದೆ. ಜೊತೆಗೆ ಜೀಬ್ರಾ ಕ್ರಾಸಿಂಗ್ ರಚಿಸಲಾಗಿದೆ. ಈ ಜೀಬ್ರಾ ಕ್ರಾಸಿಂಗ್ ಅವೈಜ್ಞಾನಿಕವಾಗಿರುವುದು ಕಂಡು ಬಂದಿದೆ.

ಗೋಪಿ ವೃತ್ತದ ಬಳಿ ಜೀಬ್ರಾ ಕ್ರಾಸಿಂಗ್ ರಚಿಸಲಾಗಿದೆ. ಪೊಲೀಸರ ಮನವಿ ಮೇರೆಗೆ ಜೀಬ್ರಾ ಕ್ರಾಸಿಂಗ್ ನ ಪೇಟಿಂಗ್ ಮಾಡಲಾಗಿದೆ. ಆದರೆ ಅವೈಜ್ಞಾನಿಕವಾಗಿ ಮಾಡಿ ಜನರ ತೆರಿಗೆ ಹಣವನ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಜೀಬ್ರಾ ಕ್ರಾಸಿಂಗ್ ಒಂದು ತುದಿಯಿಂದ ಮತ್ತೊಂದು ತುದಿಗೆ ನೇರವಾಗಿ ಇರಬೇಕು. ಆದರೆ ಗೋಪಿವೃತ್ತದ ಬಳಿಯ ಜೀಬ್ರಾ ಕ್ರಾಸಿಂಗ್  ಡಿವೈಡರ್ ದಾಟಿ ಹೋಗುವಂತೆ ಮಾಡಿರುವುದು ಅಧಿಕಾರಿಗಳ ಕಾಳಜಿ, ನೈಪುಣ್ಯತೆ ಎಲ್ಲವನ್ನೂ ಎತ್ತಿ ತೋರುತ್ತದೆ. ಈ ರೀತಿ ಜೀಬ್ರಾ ಕ್ರಾಸಿಂಗ್ ನಿರ್ಮಿಸಲು ಕಾನೂನಲ್ಲಿ ಅವಕಾಶವಿದೆಯಾ? ಎಂಬ ಪ್ರಶ್ನೆ ಮೂಡುತ್ತದೆ.

ಜನರು ಹೇಗೆ ಬೇಕೋ ಹಾಗೆ ನಡೆದುಕೊಂಡು ಹೋಗ್ತಾರೆ ಬಿಡಿ ಎಂದು ನಿರ್ಲಕ್ಷ ವಹಿಸಿದ ಕಾರಣ ಈ ರೀತಿಯ ಬೇಜವಬ್ದಾರಿಯಾಗಿ ನಡೆದುಕೊಳ್ಳಲಾಗುತ್ತಿದೆ. ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಾದ ಇಲಾಖೆ ಮತ್ತು ಅಧಿಕಾರಿಗಳು ಬೇಜವಬ್ದಾರಿತನ ತೋರಿ ಅವೈಜ್ಞಾನಿಕ ಮಾತ್ರವಲ್ಲ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತಾಗಬೇಕು.

ಸುಮೋಟೋ ಪ್ರಕರಣ ದಾಖಲಾಗುವಂತಾಗ ಬೇಕು. ಜನರು ಸಹ ಅಡ್ಡಾದಿಡ್ಡಿ ರಸ್ತೆ ದಾಟುವುದರಿಂದ ಜೀಬ್ರಾ ಕ್ರಾಸಿಂಗ್ ನ ಬೆಲೆ ಕಳೆದುಕೊಂಡಂತಾಗಿದೆ.  ಜೀಬ್ರಾಕ್ರಾಸಿಂಗ್ ನಲ್ಲಿ ಜನ ಅಡ್ಡಾಡುತ್ತಿಲ್ಲವೆಂದಾದರೆ ಆ ಕ್ರಾಸಿಂಗ್ ನ್ನ ನಿರ್ಮಿಸದೆ ಇರುವುದು ಒಳ್ಳೆಯದು. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ರೀತಿಯ ಜೀಬ್ರಾ ಕ್ರಾಸಿಂಗ್ ನಿರ್ಮಿಸಿದರೆ ಸಿಗ್ನಲ್ ಜಂಪ್ ಮಾಡಿದ ವಾಹನಕ್ಕೆ ಬೀಳುವ ದಂಡದಂತೆ ಅಧಿಕಾರಿಗಳಿಗೂ ವಿಧಿಸುವಂತಾಗ‌ಬೇಕು.

ಇದನ್ನೂ ಓದಿ-https://suddilive.in/archives/4981

Related Articles

Leave a Reply

Your email address will not be published. Required fields are marked *

Back to top button