ಸ್ಥಳೀಯ ಸುದ್ದಿಗಳು

ಭದ್ರಜಲಾಶಯದಲ್ಲಿ ನೀರಿನ ಸ್ಥಿತಿ ಏನಿದೆ?

ಸುದ್ದಿಲೈವ್/ಭದ್ರಾವತಿ

ಡಿ.25 ರಂದು ಭದ್ರಾ ಜಲಾಶಯದಿಂದ  ನಾಲೆಗಳಿಗೆ ನೀರು ಹರಿಸ ಬೇಕೆಂಬ ವಿಷಯ ಕಾರಣಾಂತರದಿಂದ ಮುಂದೂಡಿರುವ ಬೆನ್ನಲ್ಲೇ ನೀರಾವರಿ ಸಲಹಾ ಸಮಿತಿ ಮುಂದಿನ ಮೂರರಿಂದ ಐದು ದಿನಗಳಲ್ಲಿ ಕಾಡಾ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.

ಇದರಿಂದ ಭದ್ರ ಬಲದಂಡೆ ನಾಲೆ ಅವಲಂಭಿತ ರೈತರಲ್ಲಿ ಭರವಸೆ ಹೆಚ್ಚಿಸಿದೆ. ಡಿ.25 ರಂದು ಭದ್ರಾವತಿ ಬಲದಂಡೆ ನಾಲೆಯಲ್ಲಿ ನೀರು ಬಿಡಲಿದ್ದಾರೆ ಎಂಬ ಆದೇಶ ಹೊರಬಿದ್ದಿತ್ತು. ಆದರೆ ಈ ಆದೇಶ ಹುಸಿಯಾಗಲಿಲ್ಲ.‌ ಇದರಿಂದ ನೀರು ಹರಿದು ಬರಲಿದೆ ಎಂಬ ನಿರೀಕ್ಷೆ ಹುಸಿಯಾಗಿ ಅಡಿಕೆ ಸಸಿಗಳು ಸಾಯುವ ಸ್ಥಿತಿ ತಲುಪಿತ್ತು.

ಈಗೆ ನೀರು ಸಲಹಾ ಸಮಿತಿ ಮುಂದಿನ ಮೂರರಿಂದ ಐದು ದಿನಗಳ ವರೆಗೆ ಸಭೆ ನಡೆಸಿ ಬಲದಂಡೆಗಳಿಗೆ ನೀರು ಹರಿಸುವ‌ನಿರೀಕ್ಷೆ ಹುಟ್ಟಿಸಿದೆ. ಈ‌ ಬಾರಿ ಭದ್ರ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯ ಮೈದುಂಬಿಕೊಂಡಿರಲಿಲ್ಲ. ಇದರ ಬೆನ್ನ ಹಿಂದೆ ಜಲಾಶಯವನ್ನೇ ನಂಬಿಕೊಂಡ ಅನೇಕ ಕೃಷಿ ಜಮೀನುಗಳಿಗೆ ಈಗಾಗಲೇ ನೀರು ಹರಿಸಲಾಗಿತ್ತು. ಈಗ ಎಷ್ಟಿದೆ ಜಲಾಶಯ ಮಟ್ಟ ತಿಳಿದುಕೊಳ್ಳೋಣ

186 ಅಡಿ ಭದ್ರ ಜಲಾಶಯದಲ್ಲಿ ಇವತ್ತಿಗೆ 151 ಟಿಎಂಸಿ ನೀರು ಸಂಗ್ರಹವಾಗಿದೆ. 116 ಅಡಿ ಟಿಎಂಸಿಗೆ ಜಲಾಶಯ ಡೆಡ್ ಸ್ಟೋರೇಜ್ ಗ ಬರಲಿದೆ.  ಅಂದರೆ 35  ಟಿಎಂಸಿ ನೀರು ಮಾತ್ರ ಬಳಕೆಯಾಗಲಿದೆ. ಇದರಲ್ಲಿ 7.5 ಕುಡಿಯುವ ನೀರಿಗೆ ತೆಗೆದಿಟ್ಟರೆ 13 ಟಿಎಂಸಿ ನೀರು ಬಳಕೆ ಮಾಡುವಂತಿಲ್ಲ. ಅಲ್ಲಿ 129 ಟಿಎಂಸಿ ನೀರು ಬಳಕೆ ಮಾಡುವಂತಿಲ್ಲ.  ಇದರಿಂದ 20.5 ಟಿಎಂಸಿ ನೀರನ್ನ ತೆಗೆದಿಡಬೇಕಿದೆ.

35 ಟಿಎಂಸಿ ನೀರಲ್ಲಿ 20.5 ಟಿಎಂಸಿ ನೀರು ತೆಗದಿಟ್ಟರೆ ಬಾಕಿ ಉಳಿಯುವ 13.5 ಟಿಎಂಸಿ ಕೃಷಿಗೆ ಬಳಕೆಯಾಗಲಿದೆ. ಇದು ಜೂನ್ ವರೆಗೂ ಬರಲಿದೆ. ಜೂನ್ ನಲ್ಲಿ ಮುಂಗಾರು ಮಳೆಯಾದರೆ ಬಜಾವ್, ಇಲ್ಲವಾದರೆ ಕಷ್ಟ. ಮುಂದಿನ ಜೂನ್ ಎಂದರೆ 6 ತಿಂಗಳು ಸಮಯವಿದೆ. ಸಧ್ಯಕ್ಕೆ 6 ತಿಂಗಳ ವರಗೆ ಉಸಿರಾಡಬಹುದು. ತಿಂಗಳಲ್ಲಿ 10 ದಿನಗಳ ವರೆಗೆ ಬಲದಂಡೆಯಲ್ಲಿ ನೀರನ್ನ ನಿರ್ವಹಿಸಬಹುದಾಗಿದೆ.

ಇದನ್ನೂ ಓದಿ-https://suddilive.in/archives/5994

Related Articles

Leave a Reply

Your email address will not be published. Required fields are marked *

Back to top button