ರಾಷ್ಟ್ರೀಯ ಸುದ್ದಿಗಳು

ಇನ್ನೆಷ್ಟು ಬೇಕೆನ್ನ ಹೃದಯಕ್ಕೆ ರಾಮ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಇಂದು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಇನ್ನೆಷ್ಟು ಬೇಕೆನ್ನ ಹೃದಯಕೆ ರಾಮ ಎಂಬ ವಿಶೇಷ ಕಾರ್ಯಕ್ರಮ ನಡೆದಿದೆ.

ಚಿಂತಕ ರೋಹಿತ್ ಚಕ್ರತೀರ್ಥ, ಮಾಜಿ ಸಚಿವ ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ, ಶಾಸಕ ಚೆನ್ನಬಸಪ್ಪ ಮೊದಲಾದ ಗಣ್ಯವ್ಯಕ್ತಿಗಳು ಭಾಗಿಯಾಗಿದ್ದರು‌

ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡಿ, ರಾಮಾಯಣ ಯಾವುದೋ ಕಟ್ಟು ಕಥೆಯಲ್ಲ, ಐತಿಹ್ಯವಲ್ಲ.‌ ಸೃಷ್ಟಿಸಿದ ಕಥೆಯಲ್ಲ. ಅದೊಂದು ನೈಜ ಜೀವನದ ಕಥೆಯಾಗಿದೆ. ರಾಮ ಎಂಬುದೇ ನಮ್ಮ ಅಸ್ಮಿತೆ ಎಂದರು.

ಅಯೋಧ್ಯೆ ಮರು ನಿರ್ಮಾಣ ಮಾಡಿದ ವರ್ಷವೇ ವಿಕ್ರಮ ಶಕೆಯಾಗಿದೆ. ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ೭೫ ವರ್ಷಗಳ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ.
ಎಂಟು ಕೊಟಿ ರೂ. ಆಗಿನ ಕಾಲದಲ್ಲೇ ಸಂಗ್ರಹ‌ ಮಾಡಲಾಗಿತ್ತು.

ರಾಮಲಲ್ಲಾನ ವಿಗ್ರಹ ರಕ್ಷಣೆ ಮಾಡಿದ್ದು
ಹೊಸ ದಾಖಲೆ ನಿರ್ಮಾಣ ಆಗಿದೆ. ೪೪ ದಿನದಲ್ಲಿ ೩ಸಾವಿರ ಕೋಟಿ ರೂ. ಸಂಗ್ರಹವಾಗಿದೆ.
ರಾಮನ ಕಟ್ಟಡ ಕೆವಲ ಕಟ್ಟಡವಲ್ಲ. ದೇಶದ ಅಸ್ಮಿತೆಯಾಗಿದೆ. ರಾಮ ಮಮದಿರದ ಮೂಲಕ ಸನಾತನ ಧರ್ಮ ಚಿಕ್ಕ ಮಕ್ಕಳಲ್ಲೂ ಬೆಳೆಗಬೇಕಿದೆ.
ಅಯೋಧ್ಯೆ, ಶ್ರೀರಾಮ ಎಮಬ ಹೆಸರಲ್ಲೆ ಸಾಕಷ್ಟು ಶಕ್ತಿ ಅಡಕವಾಗಿದೆ ಎಂದರು.

ಶಾಸಕ‌ ಚೆನ್ನಬಸಪ್ಪ ಮಾತನಾಡಿ,
ಸಂಘಟನೆ ಚಟುವಟಿಕೆ ಕಾರಣ ಅಂದು ಅಯೋಧ್ಯೆಯ ಕರಸೇವೆಗೆ ಹೋಗಬೇಕಾಯಿತು. ಅದೊಂದು‌ ದೊಡ್ಡ ಆಂದೋಲನವಾಗಿ‌ ರೂಪುಗೊಂಡಿತ್ತು.
ಅನೇಕರು ವಿರೋಧವನ್ನು ಮಾಡಿದರು.
ಎಂತಹದ್ದೇ ವಿರೋಧ ವ್ಯಕ್ತವಾದರೂ ಇಂದು ರಾಮಮಂದಿರ ನಿರ್ಮಾಣ ಆಗಿದೆ ಎಂದರು.‌

ಎಲ್.ಕೆ.ಅಡ್ವಾಣಿ ಅವರನ್ನು ಸ್ಮರಿಸಲೇಬೇಕು.
ಕರಸೇವೆಯಲ್ಲಿ ಭಾಗವಹಿಸಿದ್ದು ಪುಣ್ಯದ ಕಾರ್ಯ. ಅದರಲ್ಲೂ ಕೊನೆ ಹಂತದಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ. ಇಡೀ ದೇಶದಲ್ಲಿ ರಾಮನ ಪರ ವಾತಾವರಣ ಸೃಷ್ಟಿಯಾಗಿತ್ತು. ಕಳಂಕಿತ ಕಟ್ಟಡ ಉರುಳಿದರೂ ಒಂದೇ ಒಂದು ಸಾವು ಆಗಲಿಲ್ಲ. ಅದು ರಾಮ ಇದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿತ್ತು.‌

ಅದೇ ದಿನ ರಾಮ ಮಂದಿರ ನಿರ್ಮಾಣಕ್ಕೆ ತೀರ್ಮಾನ ಆಗಿತ್ತು.‌ ಯಾವ ನೋವು ಕಂಡು ಬರಲಿಲ್ಲ. ಮಿಲಿಟರಿ ಬರುತ್ತದೆ ಎಂದರೂ ಯಾರೊಬ್ಬರೂ ಹೆದರಲಿಲ್ಲ. ಖಾಲಿ ಕೈಯಲ್ಲಿ ಹೋಗಿರಲಿಲ್ಲ.‌ ರಾಮ ಮಂದಿರ ಕಟ್ಟಿದ ಬಳಿಕ ಮಿಲಿಟರಿ ಬಂದಿತ್ತು. ಆದರೆ ಅವರು ಕಟ್ಟಡಕ್ಕೆ ಯಾವುದೇ ಹಾನಿ ಮಾಡದೇ ಅದನ್ನು ಕಾಯಲು ಆರಂಭಿಸಿದರು. ಇದೀಗ ಭವ್ಯ ಮಂದಿರ ನಿರ್ಮಾಣ ಆಗಿದೆ.

ಅಯೋಧ್ಯೆ ತೀರ್ಪು ಬಂದಾಗ ಇಡೀ ದೇಶದಲ್ಲಿ ಬೆಂಕಿ ಹತ್ತಿ ಉರಿಯುತ್ತದೆ ಎಂದು ಹಲವರು ಭಾವಿಸಿದ್ದರು. ಆದರೆ ಸಣ್ಣ ಕಿಡಿಯೂ ಹತ್ತಲಿಲ್ಲ. ಒಟ್ಟಾರೆ ದೊಡ್ಡ ಹೋರಾಟಕ್ಕೆ ಅಯೋಧ್ಯೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button