ರಾಷ್ಟ್ರೀಯ ಸುದ್ದಿಗಳು

ಜಿಲ್ಲೆಯಲ್ಲಿ ವರ್ಷದ ಮೊದಲ ಕೆಎಫ್ ಡಿ ಪ್ರಕರಣ ಪತ್ತೆ

ಸುದ್ದಿಲೈವ್/ತೀರ್ಥಹಳ್ಳಿ

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣ ಪತ್ತೆಯಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಶೇಡ್ಗಾರ್ ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಆರ್‌ಟಿಸಿಪಿಆರ್‌ನಲ್ಲಿ ಪಾಸಿಟಿವ್ ಬಂದಿದೆ.

ಪಾಸಿಟಿವ್ ಬಂದ ಮಹಿಳೆ ಆರೋಗ್ಯ ಸ್ಥಿರವಾಗಿದ್ದು ಅವರನ್ನು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ತಾಲೂಕಿನ ಕಾಡಂಚಿನ ಗ್ರಾಮವಾಗಿದ್ದು ಈ ಹಿಂದೆಯು ಈ ಭಾಗದಲ್ಲಿ ಕೆಎಫ್‌ಡಿ ಪ್ರಕರಣಗಳು ಕಂಡುಬಂದಿವೆ.

ಕೆಲ ದಿನಗಳ ಹಿಂದೆ ಕೊಪ್ಪ ತಾಲ್ಲೂಕಿನ ಗುಣವಂತೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿತ್ತು. ಮೊದಲನೆ ಟೆಸ್ಟ್ ನನಲ್ಲಿ ನೆಗೆಟಿವ್, ಎರಡನೇ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದ್ದರಿಂದ ಅದನ್ನು ಆರೋಗ್ಯ ಇಲಾಖೆ ಪರಿಗಣಿಸಿರಲಿಲ್ಲ. ಅತ್ತಿಸರದಲ್ಲಿ ಪಾಸಿಟಿವ್ ಬಂದಿದ್ದು ಅರೋಗ್ಯ ಇಲಾಖೆ ಕಾಡಂಚಿನ ಗ್ರಾಮದ ಜನರಲ್ಲಿ ಜಾಗೃತಿಗೆ ಮುಂದಾಗಿದೆ.

2019 ರಲ್ಲಿ ಸಾಗರದಲ್ಲಿ ಕೆಎಫ್ ಡಿ ಉಲ್ಬಣಗೊಂಡು ತಲ್ಲಣ ಮೂಡಿಸಿತ್ತು. ಅಧಿಕ ಸಾವಾಗಿತ್ತು. ಪ್ರತಿ ನವೆಂಬರ್ ತಿಂಗಳಲ್ಲಿ ಕೆಎಫ್ ಡಿ ಪತ್ತೆಯಾಗುತ್ತದೆ. ಟಿಕ್ಸ್ ನಿಂದ ಆರಂಭವಾಗುವ ಈ ಮಂಗನ ಕಾಯಿಲೆ ಮಲೆನಾಡಿಗರಿಗೆ ಹೊಸದೇನು ಅಲ್ಲವಾದರೂ ಮಲೆನಾಡಿನಲ್ಲಿ ಈ ಕಾಯಿಲೆಯನ್ನ ನಿಯಂತ್ರಿಸುವ ಮತ್ತು ನಿಭಾಯಿಸುವ ವ್ಯವಸ್ಥೆ ಇಲ್ಲದಿರುವುದು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ-https://suddilive.in/archives/4908

Related Articles

Leave a Reply

Your email address will not be published. Required fields are marked *

Back to top button