ರಾಷ್ಟ್ರೀಯ ಸುದ್ದಿಗಳು

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಏನಿದು ನಿಲ್ದಾಣ ಮಹೋತ್ಸವ?

ಸುದ್ದಿಲೈವ್/ಶಿವಮೊಗ್ಗ

01.12.1899 ರಂದು ಬೀರೂರಿನಿಂದ ಶಿವಮೊಗ್ಗಕ್ಕೆ ಮೀಟರ್ ಗೇಜ್ ರೈಲು ಮಾರ್ಗವನ್ನು ತೆರೆದ ಮತ್ತು ಮೊತ್ತ ಮೊದಲ ಪ್ಯಾಸೆಂಜರ್ ರೈಲನ್ನು ಬರಮಾಡಿಕೊಂಡ ರೈಲ್ವೆ ನಿಲ್ದಾಣದ ನೆನಪಿಗಾಗಿ ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ‘ನಿಲ್ದಾಣ ಮಹೋತ್ಸವ’ ಆಚರಿಸಲಾಯಿತು.

1889 ರಲ್ಲಿ ಈ ದಿನ ಅಂದಿನ ಮೈಸೂರು ಮಹಾಸಂಸ್ಥಾನದಿಂದ 37.92 ಮೈಲುಗಳ ಮೀಟರ್ ಗೇಜ್ ರೈಲುಮಾರ್ಗದ ಉದ್ಘಾಟನೆಯಾಗಿ ಮೊದಲ ಪ್ಯಾಸೆಂಜರ್ ರೈಲು ಶಿವಮೊಗ್ಗ ನಿಲ್ದಾಣವನ್ನು ಪ್ರವೇಶಿಸಿದುದರಿಂದ ಇಂದು ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣದಲ್ಲಿ ನಡೆದ ‘ನಿಲ್ದಾಣ ಮಹೋತ್ಸವ’ ಕಾರ್ಯಕ್ರಮವು ಅತ್ಯಂತ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಇದರ ಮುಖ್ಯ ಉದ್ದೇಶವೆಂದರೆ ರೈಲ್ವೆ ನೌಕರರು ಮತ್ತು ಸ್ಥಳೀಯ ಜನರಿಗೆ ರೈಲ್ವೆ ವ್ಯವಸ್ಥೆಯ ಸ್ಥಾಪನೆಯ ಇತಿಹಾಸ ಮತ್ತು ಅದರ ಪಾರಂಪರಿಕ ಆಸ್ತಿಗಳಾದ ರೈಲ್ವೆ ನಿಲ್ದಾಣಗಳು, ಉಪಯೋಗಿಸುವ ಉಪಕರಣಗಳು, ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ರೈಲ್ವೆ ನಿಲ್ದಾಣದೊಂದಿಗೆ ಜನರ ಸಂಬಂಧವನ್ನು ಪ್ರದರ್ಶಿಸುವುದು ಇದರ ಮುಖ್ಯ ಕಾರಣವಾಗಿದೆ.

ಮರುಕಳಿಸುವ ಕ್ಷಾಮಗಳ ವಿನಾಶಕಾರಿ ಪರಿಣಾಮಗಳ ವಿರುದ್ಧ ಹೋರಾಡಲು ಪ್ರಮುಖ ಸ್ಥಳಗಳಿಗೆ ರೈಲ್ವೆ ಸಂಪರ್ಕ ನೀಡುವ ಪ್ರಯೋಜನವನ್ನು ಮೈಸೂರು ಸಾಮ್ರಾಜ್ಯದ ರಾಜರುಗಳು ಮೊದಲಿನಿಂದಲೂ ಅರ್ಥಮಾಡಿಕೊಂಡಿದ್ದರು.

1890 ಮತ್ತು 1899 ರ ನಡುವೆ, ಯಶವಂತಪುರದಿಂದ ದೊಡ್ಡ ಕುರುಗೋಡಿನವರೆಗಿನ ಮೀಟರ್ ಗೇಜ್ ಮಾರ್ಗ, ಕೋಲಾರ ಗೋಲ್ಡ್ ಫೀಲ್ಡ್ಸ್ ರೈಲ್ವೆ ಎಂದು ಕರೆಯಲ್ಪಡುವ ಬ್ರಾಡ್ ಗೇಜ್ ವಿಭಾಗ, ಬೌರಿಂಗ್‌ಪೇಟೆಯಿಂದ ಮಾರಿಕುಪ್ಪಂವರೆಗೆ ವಿಸ್ತರಿಸುವುದು ಮತ್ತು ಬೀರೂರಿನಿಂದ ಶಿವಮೊಗ್ಗದವರೆಗಿನ ಮೀಟರ್ ಗೇಜ್ ಮಾರ್ಗವನ್ನು ಮೈಸೂರು ರಾಜ್ಯವೇ ನಿರ್ಮಿಸಿತು. ಈ ರೈಲ್ವೆ ಯೋಜನೆಯು ಈ ಪ್ರದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು.

ಈ ಘಟನೆಯು ಒಂದರ್ಥದಲ್ಲಿ ರೈಲ್ವೆಯ ಶ್ರೀಮಂತ ಮತ್ತು ಜವಾಬ್ದಾರಿಯ ಪರಂಪರೆಯ ಆಚರಣೆಯಾಗಿತ್ತು ಮತ್ತು ಸ್ಥಳಗಳ ನಡುವೆ ಸಂಪರ್ಕ ಬೆಳೆಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದು ರಾಜ್ಯದ ಅನೇಕ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಮತ್ತು ಪ್ರಗತಿಯ ಯುಗವನ್ನು ಪರಿಚಯಿಸುತ್ತದೆ. ಈ ಸರಳ ಸಮಾರಂಭದಲ್ಲಿ ಈ ರೈಲ್ವೆಯಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದ ಮತ್ತು ಈ ಪರಂಪರೆಯನ್ನು ಮುನ್ನಡೆಸುವಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ವ್ಯಕ್ತಿಗಳ ಕೊಡುಗೆಗಳನ್ನು ಗುರುತಿಸಲಾಯಿತು. ಇವೇ ಅಲ್ಲದೆ ಮೈಸೂರಿನ ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸ್ಮರಣೀಯ ಕಾರ್ಯಕ್ರಮದ ಮತ್ತಷ್ಟು ವಿಶೇಷವಾಗಿದ್ದವು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸಹಾಯಕ ವಾಣಿಜ್ಯ ವ್ಯವಸ್ಥಾಪಕರಾದ ಶ್ರೀ ರಾಜ್‌ಕುಮಾರ್ ರವರು ಈ ಸಮಾರಂಭಕ್ಕೆ ಆಹ್ವಾನಿಸಿದ ಗಣ್ಯ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಚುಟುಕು ಭಾಷಣದಲ್ಲಿ ಅವರು, ಮರುಕಳಿಸುವ ಕ್ಷಾಮಗಳಿಗೆ ಸಾಕ್ಷಿಯಾದ ಈ ಪ್ರದೇಶದ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಲು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಾಪಿಸಲು ಆಗಿನ ಮೈಸೂರು ಸಾಮ್ರಾಜ್ಯದ ಆಡಳಿತಗಾರರ ದೂರಾಲೋಚನೆ ಮತ್ತು ದೂರದೃಷ್ಟಿಯನ್ನು ಅವರು ಸ್ಮರಿಸಿಕೊಂಡರು.

ಮೈಸೂರು ರಾಜ್ಯದ ಮಾಜಿ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯ ರವರಂತಹ ದೂರದೃಷ್ಟಿಯ ರಾಜನೀತಿಜ್ಞರಿಗೆ ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಈ ರೈಲುಮಾರ್ಗ ಅಡಿಪಾಯ ಹಾಕಿತು ಎಂದು ಅವರು ಹೇಳಿದರು.

ಇದನ್ನೂ ಓದಿ-https://suddilive.in/archives/4079

Related Articles

Leave a Reply

Your email address will not be published. Required fields are marked *

Back to top button