ಸ್ಥಳೀಯ ಸುದ್ದಿಗಳು

ಶಾಸಕ ಸಂಗಮೇಶ್ ರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ನಡೆಯುತ್ತಿದೆ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಘಟನೆಯನ್ನು ಬಿಜೆಪಿಯ ನಾಯಕರು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ಗೂಂಡಾಗಿರಿ ನಡಿದಿದೆ ಅಂತ ಸದನದಲ್ಲಿ ಸಂಗಮೇಶ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಗೋಕುಲ್ ಮೇಲೆ ಯಾರು ಹಲ್ಲೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ಮಾಡಿ ಹೇಳಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಕುಲ್ ಕಾಂಗ್ರೆಸ್ ಮುಖಂಡರ ಮೇಲೆ ಗೂಂಡಾಗಿರಿ ಮಾಡುತ್ತಿದ್ದ. ಅವನಿಂದ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆ ಮಾಡಬೇಕಿದೆ.ಅಂತಹ ಗೂಂಡಾನ ಪರವಾಗಿ ಸದನದಲ್ಲಿ ಬಿಜೆಪಿ ನಾಯಕರು ಚರ್ಚೆ ಮಾಡುತ್ತಿದ್ದಾರೆ.ಕಾಂಗ್ರೆಸ್ ಮುಖಂಡ ಕುಮಾರ್ ಅವರಿಗೆ ಕಾಲ್ ಮಾಡಿ ಅಶ್ಲೀಲವಾಗಿ ಮಾತಾಡಿದ್ದಾನೆ ಎಂದು ದೂರಿದರು.

ಗೋಕುಲ್ ಮೇಲೆ ಪ್ರಕರಣ ದಾಖಲಿಸುವಂತೆ ಪೌರ ಕಾರ್ಮಿಕರು ಆಗ್ರಹ ಮಾಡಿದ್ದಾರೆ. ಗೋಕುಲ್ ನನ್ನ ನಿಯಂತ್ರಿಸುವ ಬದಲಿಗೆ ಬಿಜೆಪಿಯವರು ಅವನನ್ನು ಬೆಂಬಲಿಸುತ್ತಿದ್ದಾರೆ. ಪ್ರಚೋದಿಸುವ ಪೋಸ್ಟ್ ಗಳನ್ನು ಗೋಕುಲ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ. ಶಾಸಕ ಸಂಗಮೇಶ್ ಹಾಗೂ ಅವರ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ದೂರಿದರು.

ಈ ಘಟನೆಗೂ ಸಂಗಮೇಶ್ವರಗು ಸಂಬಂಧ ಇಲ್ಲ. ಸಂಗಮೇಶ್ ಅವರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ನಡೆಯುತ್ತಿದೆ‌.ಬಿಜೆಪಿ ಅಧಿಕಾರದಲ್ಲಿದ್ದಾಗ ಸಂಗಮೇಶ್ ಮೇಲೆ ಗೂಂಡಾಗಿರಿ ಮಾಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಗೊಂದಲಗಳು ಬೇಕು ಹಾಗಾಗಿ ಹೀಗೆ ಮಾಡುತ್ತಾರೆ. ಎಂಪಿಎಂ ಪ್ರಾರಂಭ ಮಾಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಐಎಸ್ಎಲ್ ಪ್ರಾರಂಭಿಸುವ ಕೆಲಸವನ್ನು ಸಂಸದರು ಮಾಡಿಲ್ಲ.ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಗೋಕುಲ್ ಮಾತಾಡಿರೋ ಆಡಿಯೋ ಪ್ರಸ್ತಾವನೆ ಮಾಡಿ ಬಿಜೆಪಿಯವರು ಮಾತಾಡಲಿ. ಪುಂಡ ಪೋಕರಿಗಳನ್ನು ಪೋಷಿಸಬಾರದು. ಶಿವಮೊಗ್ಗದಲ್ಲಿ ಗಲಾಟೆ ಮಾಡುವ ಪ್ರಯತ್ನಗಳು ವಿಫಲವಾದವು. ರಾಗಿಗುಡ್ಡದ ಪ್ರಕರಣ ಇಟ್ಟುಕೊಂಡು ಏನೇನೋ ಮಾಡಿದರು.ಬಿಜೆಪಿಯವರ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದರು.

ಶಾಸಕ ಸಂಗಮೇಶ್ ಮೇಲೆ ಮಾಡುವ ತೇಜೋವಧೆಯನ್ನು ನಿಲ್ಲಿಸಬೇಕು. ಸಂಗಮೇಶ್ ಅವರನ್ನು ಸೋಲಿಸಲು ಆಗದೆ ಹೀಗೆ ಆರೋಪ ಮಾಡುತ್ತಿದ್ದಾರೆ.ಬಿಜೆಪಿ ಕಾರ್ಯಕರ್ತ ಗೋಕುಲ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿದರು.

ಇದನ್ನೂ ಓದಿ-https://suddilive.in/archives/4866

Related Articles

Leave a Reply

Your email address will not be published. Required fields are marked *

Back to top button