ಜೇಬಿಗೆ ಕತ್ತರಿ ಹಾಕಿ ಗ್ಯಾರೆಂಟಿ ನೀಡಲಾಗುತ್ತಿದೆ-ಬಿವೈಆರ್

ಸುದ್ದಿಲೈವ್ ಶಿವಮೊಗ್ಗ

ರಾಜ್ಯ ಸರ್ಕಾರದ ಗ್ಯಾರೆಂಟಿ ಕಾರ್ಯಕ್ರಮಗಳು ಬಡವರ ಜೇಬಿಗೆ ಕೈ ಹಾಕಿ ಹಣಕಿತ್ತುಕೊಂಡು ಉಚಿತವಾಗಿ ಕೊಡುವ ಕಾರ್ಯಕ್ರಮವಾಗಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ. ಅನಿಶ್ಚಿತತೆಯಾಗಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಈ ಸಮಯದಲ್ಲಾದರೂ ಅಕ್ಕಪಕ್ಕದ ರಾಜ್ಯದಿಂದ ವಿದ್ಯುತ್ ಖರೀದಿಸಿ ರಾಜ್ಯಕ್ಕೆ ವಿದ್ಯುತ್ ಹಂಚಬೇಕೆಂದು ಎಂದು ಸಲಹೆ ನೀಡಿದರು.
ಮಲೆನಾಡಿನಲ್ಲಿ 225 ಬಿಎಸ್ ಎನ್ ಎಲ್ ಟವರ್ ಸ್ಥಾಪನೆಗೆ ಅದ್ಯತೆ ನೀಡುವ ಸಂಬಂಧ ನಿನ್ನೆ ಸಾಗರದಲ್ಲಿ ಅರಣ್ಯ, ಕಂದಾಯ, ಮೆಸ್ಕಾಂ ಮೊದಲಾದ ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಮಲೆನಾಡಿನಲ್ಕಿ ಮೊಬೈಲ್ ಟವರ್ ಗೆ ಹೆಚ್ಚಿನಆಧ್ಯತೆ ನ ಭಾಗದಲ್ಲಿ ಆದ್ಯತೆ ನೀಡಲಾಗುತ್ತಿದೆ.
100 ಬ್ಯಾಟರಿ ಗಳು ಬಿಡುಗಡೆ ಆಗಿದೆ. ಜನೆರೇಟರ್ ಬದಲು ಬ್ಯಾಟರಿ ಬಳಕೆ ಆಗುತಿದೆ. 2016-18 ರಿಂದ ಸುದೀರ್ಘವಾಗಿ ಎನ್ ಇಪಿ ಜಾರಿಗೊಳಿಸಿದೆ. ಅದರಲ್ಲೂ ಕಲ್ಲು ಹುಡುಕಲಾಗುತ್ತಿದೆ. ಶಿಕ್ಷಣ ನೀತಿ ಬದಲಾವಣೆ ಮಾಡಲಾಗುತ್ತಿದೆ. ಪದವಿಯಲ್ಲಿ ಪ್ರೌಡಶಾಲೆ ಪಿಯು ಕಾಲೇಜು ವೇಳೆ ಎಸ್ ಇಪಿ ತರ್ತಾಇದೆ ಸರ್ಕಾರಿ ಶಾಲೆ ಮಕ್ಕಳಿಗೆ ಇದು ತೊಂದರೆ ಆಗುತ್ತದೆ ಎಂದು ದೂರಿದರು.
ಡಿಸೆಂಬರ್ ಒಳಗೆ 100 ಟವರ್ ಸ್ಥಾಪನೆಗೆ ಗುರಿ ಹೊಂದಲಾಗಿದೆ. ಬರುವ ದಿನಗಳಲ್ಲಿ ಮಲೆನಾಡಿನಲ್ಲಿ ಟವರ್ ಗಳ ಬಗ್ಗೆ ಹೆಚ್ಚಿನ ಆಧ್ಯತೆ ನೀಡಲು ಕೇಂದ್ರ ಸರ್ಕಾರ ಗುರಿ ಹೊಂದಿದೆ ಎಂದರು. ಗ್ರಾಮಾಂತರ ಭಾಗದ ನೀರಾವರಿ ಯೋಜನೆ ಸೋರಬ ಮೂಡಿ ಮೂಗೂರು ನೀರಾವರಿ ಆಗಿದೆ ಈ ನೀರು ತುಂಬಿಸಲು ವಿದ್ಯುತ್ ಇಲ್ಲವಾಗಿದೆ. ಹತ್ತಿರದ ಕೆರೆಗಳಿಗೆ ನೀರು ತುಂಬಿಸಬೇಕಿದೆ.
ಇದನ್ನೂ ಓದಿ-https://suddilive.in/archives/1090
