ರಾಜಕೀಯ ಸುದ್ದಿಗಳು

ಬಿಜೆಪಿ ಮತ್ತು ಜೆಡಿಎಸ್ ನವರು ಕಾನೂನು ಬಾಹಿರ ದಂಧೆ ಮೂಲಕ ಲಕ್ಷಾಂತರ ರೂ.ಗಳಿಸಿದವರು -ಬಿ.ಕೆ.ಮೋಹನ್ ಆರೋಪ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ಮೇಲಿನ ಸಂಬಂಧಿಸಿದಂತೆ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದು ಭದ್ರಾವತಿ ಮಾಜಿ ನಗರ ಸಭಾ ಅಧ್ಯಕ್ಷ ಬಿ.ಕೆ.ಮೋಹನ್ ತಿಳಿಸಿದರು.

ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿಯವರು, ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ.ಕ್ಷೇತ್ರದ ಅಭಿವೃದ್ಧಿ ಮಾಡಿದ ಹಿನ್ನೆಲೆ ಬಿ.ಕೆ. ಸಂಗಮೇಶ್ವರ ರನ್ನು ಶಾಸಕರನ್ನಾಗಿ ಕ್ಷೇತ್ರದ ಜನತೆ ಆರಿಸಿದ್ದಾರೆ.ಗೋಕುಲ್ ಕೃಷ್ಣರ ಮೇಲೆ ನಡೆದ ಹಲ್ಲೆಯನ್ನು ಕ್ಷೇತ್ರದ ಶಾಸಕರ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ದೂರಿದರು.

ಗೋಕುಲ್ ಕೃಷ್ಣ ಭ್ರಷ್ಟಾಚಾರ ನಡೆಸಿ ಆಕ್ರಮ ಅಸ್ತಿ ಸಂಪಾದನೆ ಮಾಡಿದ್ದಾರೆ.ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇದ್ದರೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೇಳಿದ್ದೇವೆ. ಕಳೆದ ವಿಧಾನಸಭೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಗೋಟ್ಟಿ ರುದ್ರೇಶ್ ಪ್ರಕರಣ ಒಂದನ್ನು ಕೋಮು ಗಲಭೆಗೆ ತಿರುಗಿಸಲು ಯತ್ನಿಸಿದರು ಎಂದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಈ ಪ್ರಕರಣದ ಹಿನ್ನೆಲೆ ಭದ್ರಾವತಿಯಲ್ಲಿ ಭಾಷಣ ಮಾಡಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದರಿಂದ ಕೋಮುಗಲಭೆ ಆಗುವುದು ತಪ್ಪಿತ್ತು. ಭದ್ರಾವತಿಯಲ್ಲಿ ಬಿಜೆಪಿಯನ್ನು ಬೆಳೆಸುವುದಕ್ಕಾಗಿ ಆಗಾಗ್ಗೆ ಗಲಾಟೆ ಮಾಡುತ್ತಾರೆ

ಮಂಗೋಟೆ ರುದ್ರೇಶ್ ರೌಡಿ ಲಿಸ್ಟ್ ನಲ್ಲಿ ಇರುವವರು.ಭದ್ರಾವತಿಯಲ್ಲಿ ಓಸಿ ಬಿಡ್ಡರ್, ಇಸ್ಪೀಟ್ ದಂಧೆ ನಡೆಸುತ್ತಿದ್ದವರು.ಲಕ್ಷಾಂತರ ಮೌಲ್ಯದ ಮನೆ ಆಸ್ತಿ ಸಂಪಾದನೆ ಮಾಡಿದ್ದಾರೆ. ಇವರಲ್ಲಿ ಜೆಡಿಎಸ್ ಪಕ್ಷದ ಪ್ರಮುಖರೆ ಹೆಚ್ಚಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಖಾದರ್ ಕೂಡ ಮಾತನಾಡಿ ಜೆಡಿಎಸ್ ಮುಖಂಡರು ನಡೆಸುವ ಇಸ್ಪೀಟ್ ದಂದೆಗೆ ಕಡಿವಾಣ ಹಾಕಿ ಎಂದಿದ್ದಾರೆ.

ಗೋಕುಲ್ ಕೃಷ್ಣ ಅನಗತ್ಯವಾಗಿ ನಮ್ಮ ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಕಳೆದ ಎರಡು ತಿಂಗಳಿಂದ ಪೊಲೀಸ್ ಇಲಾಖೆ ಇಸ್ಪೀಟ್ ದಂದೆಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಂಡಿದೆ ಎಂದರು.

ಇದನ್ನೂ ಓದಿ-https://suddilive.in/archives/4861

Related Articles

Leave a Reply

Your email address will not be published. Required fields are marked *

Back to top button