ಸ್ಥಳೀಯ ಸುದ್ದಿಗಳು

ಕೋಟೆ ಮತ್ತು ದೊಡ್ಡಪೇಟೆಯಲ್ಲಿ ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಈ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದ್ವಜಾರೋಹಣ ಮಾಡಲಾಗಿದೆ. ಆದರೆ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ ಗಣರಾಜ್ಯೋತ್ಸವ ಆಚರಿಸಿರುವುದು ಗಮನ ಸೆಳೆದಿದೆ.

ಬುತೇಕ ಇಲಾಖೆಗಳಲ್ಲಿ ಮತ್ತು ಠಾಣೆಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ಮಾಡಲಾಗುತ್ತದೆ. ಎರಡೂ ಠಾಣೆಗೆ ಪಿಐ ಆಗಿರುವ ರವಿ ಸಂಗನ ಗೌಡ ಪಾಟೀಲ್ ಈ ಬಾರಿ ಗಮನ ಸೆಳೆಯುವ ರೀತಿ ಆಚರಿಸುವಂತೆ ಮಾಡಿದ್ದಾರೆ.

ಕೋಟೆ ಪೊಲೀಸ್ ಠಾಣೆಯಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಸುರೇಂದ್ರ ಅವರಿಂದ ಬಾವುಟ ಹಾರಿಸಲಾಗಿದೆ. ಸುರೇಂದ್ರ ಅವರಿಂದ ಧ್ವಜ ಹಾರಿಸಲು ಕಾರಣವಿದೆ. ಮಂಗಳವಾರ ಅವರ ಇಡ್ಲಿ ಅಂಗಡಿಗೆ ತಿಂಡಿ ತಿನ್ನಲು ಬಂದ ಗಿರಾಕಿ ಒಬ್ಬರು ಐಫೋನ್ ಬಿಟ್ಟು ಹೋಗಿದ್ದರು.

ಸಂಜೆಯವರೆಗೆ ಕಾಯ್ದ ಸುರೇಂದ್ರ ನಂತರ ಕೋಟೆ ಠಾಣೆ ನೀಡಿ ಔದಾರ್ಯತೆ ತೋರಿದ್ದಾರೆ. ಅರ ಔದಾರ್ಯತೆಯನ್ನ ಗುರುತಿಸಿ ಕೋಟೆ ಠಾಣೆಯಲ್ಲಿ ಈ ಬಾರಿ ಕೋಟೆ ಠಾಣೆಯ ಅತಿಥಿಯಾಗಿ ಬಂದು ಧ್ವಜಾರೋಹಣ ಮಾಡಿದ್ದಾರೆ.

ಎಎಸ್ಐ ಹರ್ಷರಿಂದ ದೊಡ್ಡಪೇಟೆಯಲ್ಲಿ ಧ್ವಜಾರೋಹಣ

ಈ ಬಾರಿಯ 75 ನೇ ಗಣರಾಜ್ಯೋತ್ಸವದಲ್ಲಿ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಹರ್ಷ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ಮಾಡಿದ್ದಾರೆ. ಮೊನ್ನೆ ತಾನೆ ಎಸ್ಪಿ ಅವರಿಂದ ಸನ್ಮಾನಿಸಲ್ಪಟ್ಟ ಹರ್ಷ ಠಾಣೆಗೆ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ಮಾಡಿದ್ದಾರೆ.

ಅವರ ಕರ್ತವ್ಯ ಪ್ರಜ್ಞೆಯನ್ನ ಗುರುತಿಸಿರುವ ಪಿಐ ರವಿಯವರು ಅವರಿಗೆ ಈ ಅವಕಾಶ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಎರಡು ಠಾಣೆಯಲ್ಲಿ ವಿಶೇಷವಾಗಿ ಗಣರಾಜ್ಯೋತ್ಸವ ಆಚರಿಸಲಾಗಿದೆ. ನಂತರ ಸುರೇಂದ್ರ ಮತ್ತು ಎಎಸ್ಐ ಹರ್ಷರವರನ್ನ ಸನ್ಮಾನಿಸಲಾಯಿತು.

ಇದನ್ನೂ ಓದಿ-https://suddilive.in/archives/7737

Related Articles

Leave a Reply

Your email address will not be published. Required fields are marked *

Back to top button