ಸ್ಥಳೀಯ ಸುದ್ದಿಗಳು

ಪ್ಯಾಲಸ್ತೇನಿಯರ ಪರ ಪ್ರತಿಭಟನೆಗೆ ಅವಕಾಶ ನೀಡಿ ಹಿಂದೂಗಳಿಗೆ ಸಾಂತ್ವಾನ ಹೇಳಲು ಬರುವವರನ್ನ ಗಡಿಯಲ್ಲೇ ಬಂಧಿಸುತ್ತೀರಾ-ಶಾಸಕ ಚೆನ್ನಬಸಪ್ಪ ಅಸಮಾಧಾನ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ, ದಸರಾ ಆಚರಣೆಯಲ್ಲಿ ಸೆಕ್ಷನ್ ಜಾರಿ,  ನೋವಿನಲ್ಲಿರುವ ಹಿಂದೂಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವವರಿಗೆ ಬಂಧನದ ಭಾಗ್ಯ, ಪ್ಯಾಲೆಸ್ತೇನಿಗಳ ಪರ ನಿಲ್ಲುವವರಿಗೆ ಪ್ರತಿಭಟನೆಗೆ ಅವಕಾಶ ಮೊದಲಾದ ವಿಚಾರದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಚೆನ್ನಬಸಪ್ಪ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಅತ್ಯಂತ ದುರಾದೃಷ್ಟಕರ ಸಂಗತಿ. ಇದು ಸಂವಿಧಾನಕ್ಕೆ ವಿರೋಧಿಯಾದ ಆಡಳಿತ ವ್ಯವಸ್ಥೆಯಾಗಿದೆ. ಗಡಿಯಲ್ಲೇ ಬಂಧನ ಮಾಡುವ ಪ್ರಕ್ರಿಯೆಗೆ ರಾಜ್ಯ ಸರಕಾರ ಕೈ ಹಾಕಿದೆ. ಹಿಂದುಗಳನ್ನು ಬಂಧಿಸಿ ಹೊರಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಇದು ಖಂಡನೀಯ ಎಂದು ಆಗ್ರಹಿಸಿದ್ದಾರೆ.

ಮಹಿಷಾ ದಸರಾ ಆಚರಣೆ ವಿಚಾರದ ಕುರಿತು ಅಸಮಾಧಾನ ಹೊರಹಾಕಿರುವ ಶಾಸಕ ಚೆನ್ನಬಸಪ್ಪ, ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ.‌ಸಹಿಸದ ಅನೇಕರು ಪರ್ಯಾಯವಾದ ದುರಾಲೋಚನೆ ಮಾಡ್ತಿದ್ದಾರೆ. ಇದಕ್ಕೆ ರಾಜ್ಯ ಸರಕಾರ ಶಕ್ತಿ ಕೊಡ್ತಿದೆ. ಚಾಮುಂಡಿಬೆಟ್ಟಕ್ಕೆ ನಿಷೇಧ ಹಾಕಿದರು. ಹಿಂದು ಸಮಾಜಕ್ಕೆ ಆತಂಕ ಸೃಷ್ಟಿ ಮಾಡುವ ಕೆಲಸಕ್ಕೆ ಕೈಹಾಕಿದ್ರು. ಇದು ಹಿಂದುಗಳಿಗೆ ಮಾಡಿದ ಅಪಮಾನ ಎಂದು ಗುಡುಗಿದರು.

ಚಿಕ್ಕಮಗಳೂರಿನಲ್ಲಿ ಮಹಿಷಾ ದಸರಾ ಮಾಡ್ತಾರೆ. ಮಹಿಷಾ ದಸರಾಕ್ಕೆ ಅನುಮತಿ ಕೊಡ್ತಾರೆ. ನೋವಿನಲ್ಲಿರುವ ಹಿಂದುಗಳಿಗೆ ಸಾಂತ್ವಾನ ಹೇಳುವವರನ್ನು ಬಂಧಿಸುತ್ತಾರೆ. ಪ್ಯಾಲೆಸ್ಟೈನ್ ಪರವಾಗಿ ಬೆಂಗಳೂರಿನಲ್ಲಿ ‌ಪ್ರತಿಭಟನೆ ನಡೆಯುತ್ತದೆ. ಇವರಿಗೆ ಪ್ರತಿಭಟನೆ ನಡೆಸಲು ಅನುಮತಿ‌ ಕೊಡುತ್ತದೆ. ಚಕ್ರವರ್ತಿ ಸೂಲಿಬೆಲೆ, ಈಶ್ವರಪ್ಪ ವಿರುದ್ದ ಸುಮೋಟೋ ಕೇಸ್ ಹಾಕಲಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಹಿಂದೂಗಳ ಬಗ್ಗೆ ಇರುವ ಕಾಳಜಿ ಎಂದು ಗುಡುಗಿದರು.

ದೇಶದ್ರೋಹಿಗಳನ್ನ ಒಂದೇ ತಕ್ಕಡಿಯಲ್ಲಿ ಹಾಗೂ ರಾಷ್ಟ್ರ ಭಕ್ತರನ್ನು‌ ಒಂದೇ ತಕ್ಕಡಿಯಲ್ಲಿ‌ ತೂಗುತ್ತೀರಾ? ದೇಶದ್ರೋಹಿ ಚಟುವಟಿಕೆಗೆ ರಾಜ್ಯ ಸರಕಾರ ಬೆಂಬಲ ಕೊಡ್ತಿದೆ. ಇಂಟಲಿಜೆನ್ಸ್ ಫೇಲ್ಯೂರ್ ಆಗಿದೆ. ಬೆಂಗಳೂರಿನಲ್ಲಿ ಹೋರಾಟಕ್ಕಿಳಿದವರ ಎಡೆಮುರಿ ಕಟ್ಟಬೇಕು. ಬಹುತ್ವ ಕರ್ನಾಟಕ ಸಂಘಟನೆ ಹೆಸರಿನಲ್ಲಿ ಹೋರಾಟ ನಡೆದಿದೆ. ಈ ಸಂಘಟನೆ ಬಗ್ಗೆ ಸರಕಾರ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಆಗ್ರಹಿಸಿದರು.

ಬಹುತ್ವ ಸಂಘಟನೆ ‌ನಿಷೇಧ ಮಾಡಬೇಕು. ಸಂಪೂರ್ಣ ಬಹುಮತ ಬಂದಿದೆ ಅಂತಾ ಏನು ಬೇಕಾದರೂ ‌ಮಾಡಬಹುದು ಅಂದುಕೊಂಡ್ರೆ ಅದು  ತಪ್ಪು ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/1503

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373