ಸಿನಿಮಾ ಸುದ್ದಿಗಳು

ನಟಿ ಲೀಲಾವತಿ ಇನ್ನಿಲ್ಲ

ಸುದ್ದಿಲೈವ್

ಹಿರಿಯ ಜೀವಿ ಹಾಗೂ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಕಲಾವಿದಳಾಗಿ 50 ವರ್ಷಗಳ ಸುಧೀರ್ಘ ನಟನೆ ಅಭಿನಯಿಸಿದ ಲೀಲಾವತಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಇಂದು ಕೊನೆ ಉಸಿರು ಎಳೆದಿದ್ದಾರೆ.

ಬೆಳ್ತಂಗಡಿ ಮೂಲತರಾಗಿದ್ದ ಲೀಲಾವತಿಯವರು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. 400 ಕನ್ನಡ ಸಿನಿಮಾದಲ್ಲಿ ನಟಿಸಿದರು.  2006 ದಲ್ಲಿ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ 2008 ರಲ್ಲಿ ತುಮಕೂರು ವಿವಿಯಿಂದ ಡಾಕ್ಟರೇಟ್ ಪ್ರಶಸ್ತಿ, 2000 ನೇ ಇಸವಿಯಲ್ಲಿ ಡಾ.ರಾಜ್ ಕುಮಾರ್ ಜೀವಮಾನ ಪ್ರಶಸ್ತಿ ಪಡೆದಿದ್ದರು.

ಮಾಂಗಲ್ಯ ಯೋಗ ಮೊದಲ ಚಿತ್ರ, ನಾಲ್ಕು ಸಿನಿಮಾಗಳಿಗೆ ಪ್ರೊಡ್ಯೂಸರ್ ಆಗಿದ್ದರು. ಕಮಲ್ ಹಾಸನ್, ಶಿವಾಜಿ ಗಣೇಶನ್, ರಾಜ್ ಕುಮಾರ್, ಎನ್ ಟಿಆರ್, ರಜನಿಕಾಂತ್ ಜೊತೆ ನಟಿಸಿದ ಕೀರ್ತಿ ಲೀಲಾವತಿಗೆ ಸಲ್ಲುತ್ತದೆ. ರಾಣಿ ಹೊನ್ಬಮ್ಮ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದರು.

ತಾಯಿಯ ಮರಣದ ವಿಷಯ ಕೇಳಿ ವಿನೋದ್ ರಾಜ್ ಮೂರ್ಚೆ ಹೋಗಿದ್ದರು ಎಂಬ ವಿಷಯ ಕೇಳಿಬಂದಿದೆ. ಸಧ್ಯಕ್ಕೆ ವಿನೋದ್ ರಾಜ್ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.‌ ಲೀಲಾವತಿ ವಿಧಿವಶದ ವಿಷಯ ಕೇಳಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನಾಥರಾಗಿ ತಮ್ಮ ಜೀವನ ಆರಂಭಿಸಿದ ಲೀಲಾವತಿ 12 ನೇ ವಯಸ್ಸಿಗೆ ಬಣ್ಣ ಹಚ್ಚಿದ್ದಾರೆ. ಇವರ ಮೊದಲ ನಾಟಕ ಚಂಚಲ ಕುಮಾರಿ ಯಾಗಿದೆ.

ಇದನ್ನೂ ಓದಿ-https://suddilive.in/archives/4479

Related Articles

Leave a Reply

Your email address will not be published. Required fields are marked *

Back to top button