ಸಿನಿಮಾ ಸುದ್ದಿಗಳು

ನಟ ದರ್ಶನ್ ಹುಟ್ಟುಹಬ್ಬ-ಶಿವಮೊಗ್ಗದಲ್ಲಿ ಉಚಿತ ಜ್ಯೂಸ್ ವಿತರಣೆ

ಸುದ್ದಿಲೈವ್/ಶಿವಮೊಗ್ಗ

ನಟ ದರ್ಶನ್ ಅವರ 48 ನೇ ಹುಟ್ಟುಹಬ್ಬವನ್ನ ಇಂದು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.‌ ಬೆಂಗಳೂರಿನಲ್ಲಿ ಫೆ.15 ರಂದು ಮಧ್ಯರಾತ್ರಿಯಿಂದಲೇ ಸಿದ್ದತೆಗಳು ಆರಂಭವಾಗಿತ್ತು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಹಬ್ಬದಂತೆ ಆಚರಿಸಲು ತೀರ್ಮಾನಿಸಲಾಗಿದೆ.

ಅದರಂತೆ ಶಿವಮೊಗ್ಗದ ತಿಲಕ್ ನಗರದಲ್ಲಿರುವ ಕೆನೆರಾ ಬ್ಯಾಂಕ್ ಪಕ್ಜದಲ್ಲಿರುವ ಹಾಫ್ ಟೀ‌ ಶಿವಮೊಗ್ಗ ಕೆಫೆಯಲ್ಲಿ ಡಿಬಾಸ್ ಹುಟ್ಟುಹಬ್ಬದ ಆಚರಣೆಗಾಗಿ ಇಂದು ಮಧ್ಯಾಹ್ನದಿಂದ ಉಚಿತ ಜ್ಯೂಸ್ ವಿತರಣೆ ಮಾಡಲಾಗುತ್ತಿದೆ.

ಅಭಿಮಾನಿಗಳಿಗಾಗಿ ಈ ಕೆಲಸವನ್ನ ಹಾಫ್ ಟೀ ಮಾಲೀಕರು ಕೈಗೊಂಡಿದ್ದಾರೆ. ಹೀಗೆ ರಾಜ್ಯದ ಹಲವೆಡೆ ಡಿಬಾಸ್ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಧ್ಯಾಹ್ನದಿಂದ ಅಂಗಡಿ ಬಾಗಿಲು ಹಾಕುವ ವರೆಗೂ ಜ್ಯೂಸ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ದರ್ಶನ್ ಮನೆಯ ಮುಂದೆ ಬೋರ್ಡ ಹಾಕಲಾಗಿದೆ. ದರ್ಶನ್ ಮನೆಯ ಮುಂದೆ ಹೇಗಿರಬೇಕು ಮತ್ತು ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕೆಂದು ಫ್ಯಾನ್ಸ್ ಗಳು ಸಿದ್ದತೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನಟನ ಮನೆಯ ಮುಂದೆ ಬೋರ್ಡ್ ಹಾಕಲಾಗಿದೆ.

ಬೋರ್ಡ್‌ನಲ್ಲಿ ಏನಿದೆ ?

ಬ್ಯಾನ‌ರ್, ಕೇಕ್ ಹಾರಗಳನ್ನು ದಯಮಾಡಿ ತರಬೇಡಿ ಅನ್ನೋ ಮನವಿ ಬೋರ್ಡ್ ಕೂಡ ಹಾಕಲಾಗಿದೆ. ತರಲೇಬೇಕು ಅಂತ ಇದ್ರೆ ದವಸ-ಧಾನ್ಯಗಳನ್ನ ತಂದು ಕೊಡು ಅಂತಲೇ ದರ್ಶನ್ ಕೇಳಿಕೊಂಡಿದ್ದಾರೆ. ಇವುಗಳನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸವುದು ಹಾಗೂ ಆ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/9089

Related Articles

Leave a Reply

Your email address will not be published. Required fields are marked *

Back to top button