ಸಿನಿಮಾ ಸುದ್ದಿಗಳು

ನಟ ಯಶ್ ನ 39 ನೇ ಹುಟ್ಟುಹಬ್ಬ ಆಚರಣೆ

ಸುದ್ದಿಲೈವ್/ಶಿವಮೊಗ್ಗ

ನಟ ಯಶ್ ಹುಟ್ಟುಹಬ್ಬದ ಅಂಗವಾಗಿ ನಗರದ ವಿನೋಬ ನಗರದ ಶಿವಾಲಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ನಟ ಯಶ್ ಗೆ 39 ನೆ ಹುಟ್ಟು ಹಬ್ಬದ ಸಂಭ್ರಮ, ಇದರ ಅಂಗವಾಗಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ಶಿವಾಲಯದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಭಿಮಾನಿಗಳ ಸಂಘ ಅಂಧರ ಮಕ್ಕಳ ಆಶ್ರಮದಲ್ಲಿಯೂ ಸಹ ಹುಟ್ಟುಹಬ್ಬವನ್ನ ಆಚರಿಸಲಿದೆ. ಅನ್ನ ಸಂತರ್ಪಣೆ ಮಾಡಲಾಗಿದೆ. ಈಗಾಗಲೇ ಅಭಿಮಾನಿಗಳಿಂದ ಕೆಲ ಆಟೋಗಳ ಮುಂಭಾಗದ ಗ್ಲಾಜುಗಳಿಗೆ ನಟ ಯಶ್ ರವರ ಪೊಟೊ ಅಳವಡಿಸಿ ಹ್ಯಾಪಿ ಬರ್ತ್ ಡೇ ರಾಕಿಂಗ್ ಸ್ಟಾರ್ ಎಂದು ಅಭಿಮಾನ ಮೆರೆಯಲಾಗಿದೆ.

ಆಟೋದ ಜೊತೆಗೆ ಕೆಜಿಎಫ್-2 ಸಿನಿಮಾದಲ್ಲಿ ಯಶ್ ಹಡಗಿನ ಮೇಲೆ ಕಾಣಿಸಿಕೊಂಡ ಯಶ್ ನ ಮಾಡದರಿಯ ಪ್ರತಿಮೆಯನ್ನ ನಿರ್ಮಿಸಲಾಯಿತು.

ಇದನ್ನೂ ಓದಿ-https://suddilive.in/archives/6380

Related Articles

Leave a Reply

Your email address will not be published. Required fields are marked *

Back to top button