ಸಿನಿಮಾ ಸುದ್ದಿಗಳು

ವೇದಿಕೆಯ ಮೇಲೆ ಹಾಡು ಹೇಳಿ ಪತ್ನಿಯ ಸ್ಪರ್ಧೆಯನ್ನ ಹುರಿದುಂಬಿಸಿದ ನಟ ಶಿವರಾಜ್ ಕುಮಾರ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಹಾಡು ಹೇಳುವ ಮೂಲಕ ಮತ್ತೊಂದು ಅಗ್ನಿ ಪರೀಕ್ಷೆಗೆ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಗೀತಾರ ಪರ ಪ್ರಚಾರ ಆರಂಭಿಸಿದ್ದಾರೆ.

ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ‌ ಭರ್ಜರಿ  ರ್ಯಾಲಿಯಲ್ಲಿ ಎಂಟ್ರಿಯಾದ ಪತಿ ಮತ್ತು‌ ಪತ್ನಿಯರು  ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಸಭೆಯಲ್ಲಿ “ಆಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ” ಎಂಬ ದಿ.ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ಹಾಡನ್ನ ಹೇಳಿ ಪತ್ನಿಯ ಮತ್ತೊಮ್ಮೆ ಸ್ಪರ್ಧೆಯನ್ನ ಬೆಂಬಲಿಸಿದ್ದಾರೆ.

2014 ರಲ್ಲಿ ಸೋತಿದ್ವಿ, ಒಬ್ಬರಿಗೆ ಸೋಲಾಗಿದ್ದರಿಂದ ಇನ್ನೊಬ್ಬರ ಗೆಲವಾಗುತ್ತದೆ ಎಂಬುದರ ಮೂಲಕ ಹಿಂದಿನ ಸೋಲಿನ ನಗ್ಗೆ ತಲೆಕೆಡೆಸಿಕೊಂಡಿಲ್ಲ. ಮತ್ತೊಂದು ಚುನಾವಣೆಗೆ ಸ್ಪರ್ಧೆಯಲ್ಲಿ ಗೆಲು ನಿಶ್ಚಿತ ಎಂದು ಆತ್ಮವಿಶ್ವಾಸ ಹೊರಹಾಕಿದ್ದಾರೆ‌.

ಹೆಣ್ಣಿನ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ನಟ ಡಾ.ಶಿವರಾಜ್ ಕುಮಾರ್,  ಹೆಣ್ಣು ಭೂಮಿ ತಾಯಿಗೆ ಸಮಾನ, ಹೆಣ್ಣು ಕುಟುಂಬದ ಜವಬ್ದಾರಿ ನಿಭಾಯಿಸಿ ಪತಿಗೆ ಸಹಕಾರ ನೀಡುತ್ತಾಳೆ. ಈ ರೀತಿಯ ಜವಬ್ದಾರಿ ನಿಭಾಯಿಸುವುದರಿಂದಲೇ ಹೆಣ್ಣು ಕುಟುಂಬದ ಮತ್ತು ಸಮಾಜದ ಕಣ್ಣಾಗುತ್ತಾಳೆ ಎಂದು ಹೇಳಿ ಪತಿಯನ್ನ ವೇದಿಕೆಯ ಮೇಲೆಯೇ ಹುರಿದುಂಬಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನಾನು ಇರ್ತೀನಿ. ಆದರೆ ಕೆಲವೊಂದು ದಿನಗಳು ಗೈರು ಆದರೆ ಬೇಸರಸಿಕೊಳ್ಳದಂತೆ ಮನವಿ ಮಾಡಿದ ಶಿವರಾಜ್ ಕುಮಾರ್, ಎಲ್ಲಾ ಊರಿಗೂ ಬರುತ್ತೇವೆ. ಗೆದ್ದ ನಂತರ ನಿಮ್ಮ ಕೆಲಸ ಮಾಡದಿದ್ದರೆ ಆಗ ನನಗೆ ಹೇಳಿ ಆಗ ನಾನು ಏನು ಅಂತ ತೀರಿಸುವುದಾಗಿ ಹಾಸ್ಯ ಚಟಾಕಿ ಹಾಕಿದರು.

ನಾನು ಈ ಜಿಲ್ಲೆಯ ಮಗಳು-ಗೀತಾ ಶಿವರಾಜ್ ಕುಮಾರ್

ಕಳೆದ ಬಾರಿ 17 ದಿನ ಪ್ರಚಾರ ಮಾಡಿದ್ದೆ. ಸಮಯವಿರಲಿಲ್ಲ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು. ಲಗಾನ್ ಕಲ್ಯಾಣ ಮಂದಿರದಲ್ಲಿ ಚುನಾವಣೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ಸರ್ಕಾರ ನುಡಿದಂತೆ ನೆಡೆದಸರ್ಕಾರವಾಗಿದೆ.  ಐದು ಗ್ಯಾರೆಂಟಿ ನೀಡುವ ಭರವಸೆ ನೀಡಲಾಗಿತ್ತು.ಆದರೆ  ಬಿಜೆಪಿಯ ಹೆಸರಳೇದೆ ಈಗಿನ ಕೇಂದ್ರ ಸರ್ಕಾರ ಏನು ಭರವಸೆ ನೀಡಿದರೋ‌ ಅದನ್ನ ನೀಡಿಲ್ಲ ಎಂದರು.‌

ಮಧು ಬಂಗಾರಪ್ಪನವರು ಶ್ರಮ ಪಟ್ಟು ತಂದೆ ಸ್ಥಾನಕ್ಕೆ ಬೆಳೆದು ಬಂದಿದ್ದೇನೆ. ನಾನು ಈ ಜಿಲ್ಲೆಯ ಮಗಳು. ನೀವು ನನಗೆ ಮತ ಹಾಕಲೇಬೇಕು. ಜಿಲ್ಲೆಯ ಮಗಳನ್ನ ಬರಿ ಕೈಯಲ್ಲಿ ಕಳುಹಿಸಬಾರದು ಎಂದು ತಿಳಿಸಿದರು. ನಾನು ಮಹಿಳೆಯರ ಮತ್ತು ಮಕ್ಕಳ ಹಾಗೂ ಜಿಲ್ಲೆಯ ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.‌

ಶಿವಮೊಗ್ಗ ಜಿಲ್ಲೆಯ ಧ್ವನಿಯಾಗುವುದಕ್ಕೆ ಒಂದು ಅವಕಾಶ ಕೊಡಿ. ನಾನು ನನ್ನ ತಂದೆಗೆ ಮತ್ತು ಸಹೋದರನ ಗೌರವಕ್ಕೆ ಧಕ್ಕೆಯಾಗದಂತೆ,. ಪಕ್ಷಕ್ಕೆ ಧಕ್ಜೆ ತರುವ ಕೆಲಸ ಮಾಡೊಲ್ಲ ಎಂದರು.

ಇದನ್ನೂ ಓದಿ-https://suddilive.in/archives/11125

Related Articles

Leave a Reply

Your email address will not be published. Required fields are marked *

Back to top button