ಸಿನಿಮಾ ಸುದ್ದಿಗಳು

ನಟ ಏಸು ಪ್ರಕಾಶ್ ಹೆಗ್ಗೋಡು ಇನ್ನಿಲ್ಲ

ಸುದ್ದಿಲೈವ್

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ  ನಟ ಏಸು ಪ್ರಕಾಶ್ ಹೆಗ್ಗೋಡು(58) ಇನ್ನಿಲ್ಲ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ನಿನ್ನೆ ಸಾವನ್ಬಪ್ಪಿದ್ದಾರೆ.

ನಟ ಯಶ್ ಅಭಿನಯದ ‘ಕಿರಾತಕ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನಟ ಪ್ರಕಾಶ್ ಹೆಗ್ಗೋಡು ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಸಾಗರದ ಪುರಪ್ಪೇಮನೆಯ (ಕಲ್ಲುಕೊಪ್ಪ) ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಅಂತ್ಯಕ್ರಿಯೆಯು ನಾಳೆ ಸ್ವಗ್ರಾಮ ಕಲ್ಲುಕೊಪ್ಪದಲ್ಲಿ ನೆರವೇರಲಿದೆ. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ & ಪತ್ನಿಯನ್ನು ಅಗಲಿದ್ದಾರೆ.

ಇದನ್ನೂ ಓದಿ-https://suddilive.in/archives/11787

Related Articles

Leave a Reply

Your email address will not be published. Required fields are marked *

Back to top button