ಸ್ಥಳೀಯ ಸುದ್ದಿಗಳು
ಪಾಲಿಕೆಯಿಂದ ತೆರವು ಕಾರ್ಯಾಚರಣೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಗೆ ನಿರ್ಮಿಸಿರುವ ಅಲಂಕಾರವನ್ನ ಪಾಲಿಕೆ ತೆರವು ಗೊಳಿಸುವ ಕೆಲಸ ಕೈಗೊಂಡಿದೆ. ಲೈಟಿಂಗ್ಸ್, ಫ್ಲೆಕ್ಸ್ ಅಡಿಕೆ ಕಂಬ ಹಸಿರು ಪೆಂಡಾಲ್ ಗಳನ್ನ ತೆರವುಗೊಳಿಸಲಾಗುತ್ತಿದೆ.
ಲೈಟಿಂಗ್ಸ್ ನ್ನ ತೆರವುಗೊಳಿಸಲು ಮಾಲೀಕರು ಮುಂದಾಗಿದ್ದರೂ ಕಂಬ ಮತ್ತು ಹಸಿರು ಪೆಂಡಾಲುಗಳನ್ನ ತೆರವುಗೊಳಿಸಲು ಯರೂ ಮುಂದೆ ಬಾರದ ಕಾರಣ ಪಾಲಿಕೆ ಸಿಬ್ಬಂದಿಗಳೇ ತೆರವುಗೊಳಿಸಲು ಮುಂದಾಗಿದ್ದಾರೆ.
ಪೊಲೀಸರ ಭದ್ರತೆಯಲ್ಲಿ ಪ್ಲೇಕ್ಸ್,ಬ್ಯಾನರ್ ತೆರವುಗೊಳ್ಳುತ್ತಿದೆ. ಪ್ಲೇಕ್ಸ್ ,ಬ್ಯಾನರ್ ಗಳನ್ನ ಮಹಾನಗರ ಪಾಲಿಕೆಯ 30 ಕ್ಕೂ ಹೆಚ್ಚು ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ. ಈದ್ -ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದ ಮುಖ್ಯ ರಸ್ತೆ ಗಳಲ್ಲಿ ಪ್ಲೇಕ್ಸ್,ಬ್ಯಾನರ್ ಗಳನ್ನ ತೆರವುಗೊಳಿಸಲಾಗಿದೆ.
ಇದನ್ನೂ ಓದಿ-https://suddilive.in/2023/10/02/ಸಮವಸ್ತ್ರದಲ್ಲಿಯೇ-ಟ್ರಾಫಿಕ/
