ಸ್ಥಳೀಯ ಸುದ್ದಿಗಳು

ಮಗುವಿಗೆ ಬೀದಿ ನಾಯಿ ಅಟ್ಯಾಕ್

ಸುದ್ದಿಲೈವ್/ಶಿವಮೊಗ್ಗ

ಬೀದಿ ನಾಯಿಗಳ ಹಾವಳಿ ಯಾವ ಊರಿನಲ್ಲಿ ಕಡಿಮೆ ಇದೆ ಎಂದು ದುರಬಿನ್ ಹಾಕಿ ಹುಡುಕಬೇಕಿದೆ. ಎಲ್ಲಿ ನೋಡಿದರೂ ಅಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲಿನ ಅಟ್ಯಾಕ್  ಹೆಚ್ಚಾಗಿದೆ.

ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಬಾಲಕಿ ಮೇಲೆ  ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲಾ ಮಾಧ್ಯಮಗಳಲ್ಲಿ ಬೀದಿ ಬೀದಿಗಳಲ್ಲಿ ನಾಯಿ ಹಾವಳಿ ಸುದ್ದಿಯಾದರೂ ಸ್ಥಳೀಯ ಸಂಸ್ಥೆಗಳ ಕಾರ್ಯಾಚರಣೆ ಮಾತ್ರ ದಾಖಲಾತಿಗಳಲ್ಲಿ ಹೆಚ್ಚಿದೆ ಬಿಟ್ಟರೆ ಯಾವುದೇ ಕ್ರಮವಿಲ್ಲದೆ ಇರುವುದು ದುರಂತವಾಗಿದೆ.

ಬಾಲಕಿ ತಪ್ಪಿಸಿಕೊಂಡು ಹೋದ ವಿಡಿಯೋ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮಪಂಚಾಯಿತಿಗಳಲ್ಲಿ ಯಾವುದೇ ದಾಖಲಾತಿ ಪರಿಶೀಲಿಸಿದರೆ ವರ್ಷಕ್ಕೆ ಅತಿಹೆಚ್ಚು ಸಂತಾನೋತ್ಪತ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿರುವ ದಾಖಲಾತಿ ಕಂಡು ಬರುತ್ತದೆ.

ನಾಯಿಗಳನ್ನ ಸಾಯಿಸುವ‌ ಅನುಮತಿ ಯಾವ ಸ್ಥಳೀಯ ಸಂಸ್ಥೆಗಳಿಗೆ ಇಲ್ಲ. ಆದರೆ ಸಂತಾನೋತ್ಪತ್ತಿ ಹರಣ‌ಶಸ್ತ್ರ ಚಿಕಿತ್ಸೆಗೆ ಅವಕಾಶವಿದೆ. ಆದರೆ ಯಾವಿದೇ ಗಲ್ಲಿಯಲ್ಲು ಕಂಡರೂ ನಾಯಿಗಳ ಮರಿ ಹೆಚ್ಚು ಕಂಡು ಬರುತ್ತಿದೆ. ದಾಖಲಾತಿಯಲ್ಲಿ ವರ್ಷದ ಟಾರ್ಗೆಟ್ ಮುಗಿದರೂ ಬೀದಿ ನಾಯಿಗಳ ಮರಿಗಳು ಕಂಡು ಬರುತ್ತಿದೆ.

ಇದನ್ನೂ ಓದಿ-https://suddilive.in/archives/4423

Related Articles

Leave a Reply

Your email address will not be published. Required fields are marked *

Back to top button