ಸ್ಥಳೀಯ ಸುದ್ದಿಗಳು

ನಾ.. ಹರಿತೀನಿ.. ಹರಿತೀನಿ… ಎಂದು ಏನೂ ಮಾಡಲೇ ಇಲ್ಲ ಎಂದು ಡಿಕೆಶಿ ಹೇಳಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆ ನಾಲ್ಕು ಸಿಎಂನ್ನ ಕೊಟ್ಟಿದೆ. ನಾನು ಬಂಗಾರಪ್ಪನವರ ಶಿಷ್ಯನಾಗಿದ್ದೇನೆ ಎಂದು ಡಿಸಿಎಂ ಡಿಕೆಶಿ ಭಾಷಣ ಆರಂಭಿಸಿದರು.‌ ಗ್ಯಾರೆಂಟಿಯ ಬಗ್ಗೆ ಆತಂಕ ಬೇಡ ಎಂದು ಅವರು ಭರವಸೆ ನೀಡಿದರು.

ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ನಲ್ಲಿ ನಡೆದ ಗ್ಯಾರೆಂಟಿ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಬಂಗಾರಪ್ಪನವರ ಮನೆಯ‌ಮುಂದೆಯ ಮರದ ಮುಂದೆ ಕುಳಿತುಕೊಳ್ಳುತ್ತಿದ್ದೆ. ಆದರೆ ಆಗಿನ ನಮ್ಮ‌ನಾಯಕರು ನಾಲ್ಕೈದು ದಿನ ಕಳೆದ ನಂತರ ಸಾಹೇಬ್ರನ್ನ ಭೇಟಿ ಮಾಡಿಸುತ್ತಿದ್ದರು. ಅವರ ಶಿಷ್ಯನಾದ ಕಾರಣ ಬಂಗಾರಪ್ಪನವರ ಮನೆಯನ್ನ ಆಯ್ಕೆ ಮಾಡಿಕೊಂಡು ಅಲ್ಲೆ ಇದ್ದೀನಿ. ಇನ್ನು ಮುಂದೆ ನೀವು ಸದಾಶಿವ ನಗರಕ್ಕೆ ಬರುವ ಹಾಗಿಲ್ಲ. ಅಲ್ಲಿಗೆ ಬನ್ನಿ ಎಂದರು.

ರಾಜ್ಯದಲ್ಲಿ ಬದಲಾವಣೆ ತಂದಿದ್ದೀವಿ. ಜಿಲ್ಲೆಯಲ್ಲಿ ಎರಡು ಸೀಟು ಲೆಕ್ಕಾಚಾರದಿಂದ ಮಿಸ್ ಆಗಿದೆ. ನಾನು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಗೆ 140 ಸೀಟು ಬರುತ್ತೆ ಎಂದಿದ್ದೆ. 136 ಕ್ಕೆ ಬಂದು ನಿಂತಿದೆ.ಬಿಜೆಪಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಬಂದರೆ ಗ್ಯಾರೆಂಟಿ ಮುಗಿಯತ್ತೆ ಎಂಬ ಸುಳ್ಳು ಸುದ್ದಿಯನ್ನ ಹಬ್ಬಿಸಲಾಗುತ್ತಿದೆ. ವಿಪಕ್ಷಗಳ ಮಾತನ್ನ ನಂಬಬೇಡಿ ಎಂದರು.

ರಾಜಕಾರಣದಲ್ಲಿ ಧರ್ಮ ಇರಲಿ

ಬಿಜೆಪಿಯ ಕಮಲ ಉದುರಿದೆ ಮಾಜಿ ಸಿಎಂ ಕುಮಾರಸ್ವಾಮಿ ಕಮಲ ಹಿಡಿದು ಹೊರಟಿದ್ದಾರೆ. ದೇವಸ್ಥಾನ ಭಕ್ತನಿಗೂ ದೇವರಿಗೂ ಇರುವ ವ್ಯವಹಾರದ ಸ್ಥಳವೇ ದೇವಸ್ಥಾನವಾಗಿದೆ. ಧರ್ಮದಲ್ಲಿ ರಾಜಕಾರಣ ಇರಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು. ಜಾತಿಯ ಮೇಲೆ ಗ್ಯಾರೆಂಟಿ‌ಕೊಟ್ಟಿಲ್ಲ ನೀತಿಯ ಮೇಲೆ ಗ್ಯಾರೆಂಟಿಯನ್ನ‌ ಜಾರಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಗೃಹಜ್ಯೋತಿ ನೀಡಲಾಗುತ್ತಿದೆ. 1½ ಕೋಟಿ ಜನ ಇದರ ಫಲಾನುಭವಿಗಳಾಗಿದ್ದಾರೆ ಎಂದರು.

ಅನ್ನಭಾಗ್ಯವನ್ನ ಆರಂಭಿಸಿದೆವು. ಶಕ್ತಿಯೋಜನೆಗಾಗಿ ರಾಜ್ಯದಲ್ಲಿ 1 ಸಾವಿರ ಬಸ್ ನ್ನ ಖರೀದಿಸಿದ್ದೇವೆ. ಬಸ್ ಓಡಾಡುವ ಮಹಿಳೆಗೆ 3000ಸಾವಿರ ಉಳಿಯಲಿದೆ. ಗ್ಯಾಸ್ ಏರಿಕೆಯಾಗಿದೆ. ಅಡುಗೆ ಸಾಮಾನುಗಳು ಬೆಲೆಎರಿಕೆಯಾಗಿದೆ. ಆರ್ಥಿಕವಾಗಿ ಶಕ್ತಿ ತುಂಬಬೇಕಿತ್ತು. ಗ್ಯಾರೆಂಟಿಗಳ ಮೂಲಕ ಜನರ ಆರ್ಥಿಕ ಸ್ಥಿತಿಯನ್ನ ಬಲಪಡಿಸಿದ್ದೇವೆ ಎಂದರು.

ಕೆಪಿಎಸ್ ಶಾಲೆ

ಸಂಕಟ ಲಕ್ಷ್ಮಿ,  ದರಿದ್ರ ಲಕ್ಷ್ಮಿಯನ್ನ  ಹೋಗಲಾಡಿಸುವ ಸಲುವಾಗಿ‌ ಗೃಹಲಕ್ಷ್ಮಿಯನ್ನ ತಂದು ಜನರ ಆರ್ಥಿಕ ಸ್ಥಿತಿಯನ್ನ‌ ಬಲಪಡಿಸಲಾಗಿದೆ ಎಂದ ಡಿಸಿಎಂ ಡಿಕೆಶಿ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಹಾಡು ಹೇಳಿದ್ದು ಸಭೀಕರ ಗಮನ ಸೆಳೆದಿದೆ.  ಗ್ರಾಮೀಣ ಪ್ರದೇಶದ ಎರಡು ಮೂರು ಪಂಚಾಯಿತಿಗಳ ಶಾಲೆಗಳನ್ನ ಸೇರಿಸಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಿಬಿಎಸ್ ಸಿ ಸಿಲಬಸ್ ನೀಡಲಾಗುತ್ತಿದೆ. ಒಂದೊಂದು ಶಾಲೆಗೆವೊಂದು ಕೋಟಿ ರೂ. ನೀಡಲಾಗುತ್ತಿದೆ. ಖಾಸಗಿ ಅವರನ್ನ ಪಾಲ್ಗೊಳ್ಳಿಸುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಮಿಕ, ಸೈನಿಕ, ರೈತ ಮತ್ತು ಶಿಕ್ಷಕ ದೇಶದ ಆಸ್ತಿಯಾಗಿದ್ದಾರೆ. ಯುವನಿಧಿಗೆ ಚಾಲನೆ ನೀಡಲಾಗಿದೆ ಒಂದು ಲಕ್ಷ ನ ಜನ‌ಅಲ್ಗೊಂಡಿದ್ದೀರಿ. ಉದ್ಯೋಗ ಸೃಷ್ಠಿಸಿಕೊಳ್ಳುವ ಮೂಲಕ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು.

25 ವರ್ಷ ಎಲ್ಲರಿಗೂ ಜಮೀನು ಕೊಡಿಸುವ ಹಕ್ಕನ್ನು ಕೇಂದ್ರಕ್ಕೆ ನೀಡಲಾಗುವುದು. ಒಕ್ಕಲೆಬ್ಬಿಸುವ ಕೆಲಸಕ್ಕೆ ಅವಕಾಶಕೊಡಲ್ಲ. ಶರಾವತಿ ಸಂತ್ರಸ್ತರ ರಕ್ಷಣೆಗೆ ಸರ್ಕಾರ ಬದ್ಧತೆ ಇದೆ ಎಂದರೂ ಯಾವ ಯೋಜನೆ ಹಾಗೂ ಒಕ್ಕಲೆಬ್ಬಿಸಲು ಯಾವ ಕ್ರಮ ಎಂಬುದನ್ನ ವಿವರವಾಗಿ ಹೇಳಲು ಡಿಕೆಶಿ ವಿಫಲರಾಗಿದ್ದಾರೆ. ಬಡತನದ ಮೇಲೆ ಯುದ್ಧ ಮಾಡುತ್ತಿದ್ದೇವೆ. ಬಡ ರೈತರ ಮೇಲೆ ಅಲ್ಲ.‌ ಇಷ್ಟೆಲ್ಲ ಕೊಡತ್ತಿದ್ದೇವೆ. ಅದನ್ನೇ ಬಿಎಸ್ ವೈ ಸಿಎಂ ಆಗಿದ್ದರಲ್ಲ ಬದುಕುಕಟ್ಟಿಕೊಳ್ಳಲು ಏನು ಕ್ರಮ ಜರುಗಿಸಿದ್ದೀರಿ ಹೇಳಿ ಎಂದು ಸವಾಲು ಎಸೆದರು.

ಅರ್ಧ ಜ್ಞಾನೇಂದ್ರ

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ 420 ಗ್ಯಾರೆಂಟಿ ಅಂತಾರೆ. ನಿಮಗೆ ಅರ್ಧ ಜ್ಞಾನ ಇದೆ. ಕೊಟ್ಟ ಕುದರೆಯನ್ನ ಏರದವನು ಶೂರನೂ ಅಲ್ಲ. ಧೀರನೂ‌ಅಲ್ಲ. ಅಧಿಕಾರವಿದ್ದಾಗ ಏನೂ ಮಾಡಲು ಆಗಲಿಲ್ಲ. ಅಧಿಕಾರ ಹೋಗದ ಮೇಲೆ. ಮೋದಿ ಮೋದಿ ಅಂತಿದ್ದೀರಿ. ನಾ ಹರಿತೀನಿ ಹರೀತಿನಿ ಅಂತಿದ್ದೀರ ಎಂದು ಗೊಂದಲದ ಹೇಳಿಕೆ ನೀಡಿದರು.

ನಮ್ಮ ಸರ್ಕಾರ ಗ್ಯಾರೆಂಟಿಯ ಮೂಲಕ ಜನರ ಬದುಕನ್ನ ಗಟ್ಟಿಮಾಡುತ್ತಿದ್ದೇವೆ. ಗ್ಯಾರೆಂಟಿ ವಾರೆಂಟಿ ಎಲ್ಲವೂ ಇದೆ. ಹಿಂದೂ ದತ್ತಿ ಕಾಯ್ದೆಯಲ್ಲಿ 10% ಹಣವನ್ನ ಅರ್ಚಕರಿಗೆ ನೀಡಲು ಬಿಲ್ ತರಲಾಗಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ಬಿಲ್ ನ್ನ ಮೇಲ್ಮನೆಯಲ್ಲಿ ಸೋಲಿಸಿದ್ದಾರೆ. ಇನ್ನು ಎರಡು ಮೂರು ತಿಂಗಳ ನಂತರ ತರಾಗುವುದು ಎಂದರು.

ಸವಾಲು ಎಸೆದ ಡಿಕೆಶಿ

ಗ್ಯಾರೆಂಟಿಯ ಮೂಲಕ ಮನೆ ಮನೆಗೆ ಹೋಗಿದ್ದೇವೆ. ಬಿಎಸ್ ವೈ, ವಿಜೇಂದ್ರ ಮತ್ತು ನೀವೂ ಸೇರಿ ಗ್ಯಾರೆಂಟಿಯನ್ನ ಬಳಸಬೇಡಿ ಎಂದು ಕರೆ ನೀಡಿ ಎಂದು ಸವಾಲು ಎಸೆದಿದ್ದಾರೆ. ಮಹಿಳೆಯರು ನಮ್ಮ ಹೆಸರು ಹೇಳಿಕೊಂಡು ದೇವರಿಗೆ ದೀಪ ಹಚ್ಚುತ್ತಿದ್ದಾಳೆ ಎಂದರು.

ಉಳುವನಿಗೆ ಭೂಮಿ ವಿಚಾರದಲ್ಲಿ ಅರ್ಜಿಗಳನ್ನ ಕಾರ್ಯರೂಪು ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಕಾಧಿಕಾರಿಗಳು ಮನೆಗೆ ಬಂದು ಪಟ್ಟಿ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/9507

Related Articles

Leave a Reply

Your email address will not be published. Required fields are marked *

Back to top button